• search
 • Live TV
ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಿತ್ರದುರ್ಗದಲ್ಲಿ ಕಾಂಗ್ರೆಸ್-ಬಿಜೆಪಿ ಶಾಸಕರ ಟಾಕ್ ವಾರ್

By ಚಿತ್ರದುರ್ಗ ಪ್ರತಿನಿಧಿ
|

ಚಿತ್ರದುರ್ಗ, ಜೂನ್ 4: ಚಿತ್ರದುರ್ಗ ಜಿಲ್ಲೆಯ ಪರಶುರಾಂಪುರದಲ್ಲಿ ಮೊನ್ನೆ ನಡೆದ ಬಾಗಿನ ಅರ್ಪಣೆ ಕಾರ್ಯಕ್ರಮ‌ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮವಾಗಿದ್ದು, ಚಳ್ಳಕೆರೆ ಕ್ಷೇತ್ರದ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ ಆಗಿದೆ ಎಂದು ಚಳ್ಳಕೆರೆ ಕಾಂಗ್ರೆಸ್ ಶಾಸಕ ಟಿ. ರಘುಮೂರ್ತಿ ಹೇಳಿದರು.

   ಯಾರಿಂದ ಅಧಿಕಾರ ಕಳೆದುಕೊಂಡೆ ಅಂತಾ ನನಗೆ ಗೊತ್ತು | HD Kumaraswamy | Oneindia Kannada

   ಚಿತ್ರದುರ್ಗದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾನಾಡಿದ ಅವರು, ನನ್ನ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ನನ್ನ ಅಧಿಕಾರದ ಹಕ್ಕು ಚ್ಯುತಿ ಆಗಿದೆ ಎಂದರು. ಜಿ.ಪಂ, ತಾ.ಪಂ‌ ಅಧ್ಯಕ್ಷರನ್ನೂ ಕಾರ್ಯಕ್ರಮಕ್ಕೆ ಕರೆದಿಲ್ಲ, ಇನ್ನು ಚಿತ್ರದುರ್ಗ ಕ್ಷೇತ್ರದ ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ ನನ್ನ ಬಗ್ಗೆ ಕೇವಲವಾಗಿ ಮಾತನಾಡಿದ್ದಾರೆ ಎಂದು ಹೇಳಿದರು.

   ಸಚಿವ ಶ್ರೀರಾಮುಲು ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಿ: ಕಾಂಗ್ರೆಸ್ ಒತ್ತಾಯ

   ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಶಿಷ್ಟಾಚಾರ ಉಲ್ಲಂಘನೆ ಆಗಿದೆ

   ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಶಿಷ್ಟಾಚಾರ ಉಲ್ಲಂಘನೆ ಆಗಿದೆ

   ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಹಿರಿಯೂರಿನ ವಾಣಿವಿಲಾಸ ಜಲಾಶಯದಿಂದ ವೇದಾವತಿ ನದಿಯ ಮೂಲಕ ಚಳ್ಳಕೆರೆ ಹಾಗೂ ಮೊಳಕಾಲ್ಮೂರು ಭಾಗಕ್ಕೆ 0.25 ಟಿಎಂಸಿ ನೀರು ಬಿಡಲು ಆದೇಶ ಆಗಿತ್ತು. ಅಂದಿನ ಆದೇಶದ ಪ್ರಕಾರ ಈಗಿನ ಮುಖ್ಯಮಂತ್ರಿಗಳು ನೀರು ಬಿಡಿಸಿದ್ದಾರೆ. ನನ್ನ ಕ್ಷೇತ್ರಕ್ಕೆ ಸೇರಿದ ತುರುವನೂರು ಹೋಬಳಿಗೆ ತುಂಗಭದ್ರಾ ಹಿನ್ನೀರು ತಂದಿದ್ದೇವೆ.

   ತಿಪ್ಪಾರೆಡ್ಡಿ ಹುಟ್ಟೂರಿಗೆ ಆದ ಅನುಕೂಲ ಮರೆಯಬಾರದು

   ತಿಪ್ಪಾರೆಡ್ಡಿ ಹುಟ್ಟೂರಿಗೆ ಆದ ಅನುಕೂಲ ಮರೆಯಬಾರದು

   ಸಿದ್ದರಾಮಯ್ಯ ಅವರನ್ನು ಟೀಕಿಸುವ ಭರದಲ್ಲಿ ತಿಪ್ಪಾರೆಡ್ಡಿ ಹುಟ್ಟೂರಿಗೆ ಆದ ಅನುಕೂಲ ಮರೆಯಬಾರದು ಎಂದು ಟಿ. ರಘುಮೂರ್ತಿ ಟಾಂಗ್ ನೀಡಿದ್ದಾರೆ. ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅವರ ಹೇಳಿಕೆಗೆ ಪ್ರತಿ ಹೇಳಿಕೆ ನೀಡಿದ ಚಿತ್ರದುರ್ಗ ಶಾಸಕ ಜಿ.ಎಚ್ ತಿಪ್ಪಾರೆಡ್ಡಿ, ಈ ಹಿಂದೆ ಇದ್ದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಂತಹ ಎಷ್ಟು ಶಿಷ್ಟಾಚಾರ ಉಲ್ಲಂಘನೆ ಆಗಿದೆ ಎಂದು ಪ್ರಶ್ನೆ ಹಾಕಿದರು.

   ಲಾಕ್ ಡೌನ್ ನಡುವೆಯೇ ಆರೋಗ್ಯ ಸಚಿವರಿಗೆ ಚಿತ್ರದುರ್ಗದಲ್ಲಿ ಅದ್ದೂರಿ ಸ್ವಾಗತ!

   ಎಚ್.ಆಂಜನೇಯ ಸಾಕಷ್ಟು ಬಾರಿ ನನ್ನ ಹಕ್ಕು ಕಸಿದಿದ್ದಾರೆ

   ಎಚ್.ಆಂಜನೇಯ ಸಾಕಷ್ಟು ಬಾರಿ ನನ್ನ ಹಕ್ಕು ಕಸಿದಿದ್ದಾರೆ

   ಐದು ವರ್ಷದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನನಗಾದ ಅನ್ಯಾಯ ಹೇಳತೀರದು ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಾನು ಅಧ್ಯಕ್ಷತೆ ವಹಿಸಬೇಕಿದ್ದ ಕಾರ್ಯಕ್ರಮಗಳಲ್ಲಿ ನಿಗದಿತ ಸಮಯಕ್ಕೆ ಮೊದಲೇ ಉದ್ಘಾಟನೆ ಮಾಡುತ್ತಿದ್ದರು. ಅಂದಿನ ಪ್ರಭಾವಿ ಮಂತ್ರಿ ಎಚ್.ಆಂಜನೇಯ ಸಾಕಷ್ಟು ಬಾರಿ ನನ್ನ ಹಕ್ಕು ಕಸಿದಿದ್ದಾರೆ. ಮೊನ್ನೆ ಪರಶುರಾಂಪುರದಲ್ಲಿ ವೇದಾವತಿ ನದಿಗೆ ಬಾಗಿನ ಅರ್ಪಣೆ ನಡೆದಿದ್ದು ಪಕ್ಷದ ಕಾರ್ಯಕ್ರಮ ಎಂದು ಹೇಳಿದರು.

   ಅವರ ಪಕ್ಷದವರ ಭಾವಚಿತ್ರವನ್ನು ಮೇಲೆ ಹಾಕಿದ್ದರು

   ಅವರ ಪಕ್ಷದವರ ಭಾವಚಿತ್ರವನ್ನು ಮೇಲೆ ಹಾಕಿದ್ದರು

   ಇಪ್ಪತ್ತೈದು ದಿನಗಳ ಹಿಂದೆ ನದಿಗೆ ನೀರು ಬಿಟ್ಟಾಗ ಶಾಸಕ ರಘುಮೂರ್ತಿ ಏನು ಮಾಡಿದ್ದರು? ಎಂದು ಪ್ರಶ್ನಿಸಿದರು. ಅವರ ಪಕ್ಷದವರ ಭಾವಚಿತ್ರವನ್ನು ಮೇಲಿನ ಸಾಲಿನಲ್ಲಿ ಹಾಕಿ ಕೆಳಭಾಗದಲ್ಲಿ ಸಿಎಂ, ಉಸ್ತುವಾರಿ ಸಚಿವರು ಮತ್ತು ನೀರಾವರಿ ಸಚಿವರ ಫೋಟೋ ಹಾಕಿ ಜಾಹೀರಾತು ನೀಡಿದ್ದರು. ಅದು ಎಷ್ಟರ ಮಟ್ಟಿಗೆ ಸರಿ, ಅದು ಸರ್ಕಾರಕ್ಕೆ ಮಾಡಿದ ಹಕ್ಕು ಚ್ಯುತಿ ಅಲ್ಲವೇ? ಹಾಗೂ ತುರುವನೂರು ಹೋಬಳಿಗೆ ನೀರು ತರುವಾಗ ನನ್ನ ಕ್ಷೇತ್ರದ ಗ್ರಾಮಗಳನ್ನು ಕೈಬಿಟ್ಟಿದ್ಯಾಕೆ? ನನ್ನ ಕ್ಷೇತ್ರದ ಗ್ರಾಮಗಳನ್ನು ದಾಟಿ ಮುಂದಿನ ಗ್ರಾಮಗಳಿಗೆ ಪೈಪ್ ಲೈನ್ ಮಾಡಿಸಿದ್ದು ಯಾವ ನ್ಯಾಯ? ಮರು ರಘುಮೂರ್ತಿ ಅವರಿಗೆ ತಿರುಗೇಟು ನೀಡಿದರು.

   ದ್ವೇಷದ ರಾಜಕೀಯ ಮಾಡಿದ್ದರು

   ದ್ವೇಷದ ರಾಜಕೀಯ ಮಾಡಿದ್ದರು

   ಅಂದಿನ ಕಾಂಗ್ರೆಸ್ ಸರ್ಕಾರದ ಸಚಿವ, ಐವರು ಶಾಸಕರು ಜಿಲ್ಲೆಗೆ ಮಾಡಿದ್ದೇನು? ಮಂಜೂರಾಗಿದ್ದ ಮೆಡಿಕಲ್ ಕಾಲೇಜನ್ನು ಯಾಕೆ ತರಲಿಲ್ಲ? ಇದು ದ್ವೇಷದ ರಾಜಕೀಯ ಅಲ್ಲವೇ? ಎಂದು ಶಾಸಕ ಜಿ.ಎಚ್ ತಿಪ್ಪಾರೆಡ್ಡಿ ಕೇಳಿದರು.

   ಕಾಂಗ್ರೆಸ್ ಶಾಸಕ ಟಿ.ರಘುಮೂರ್ತಿ ಹಾಗೂ ಬಿಜೆಪಿ ಶಾಸಕ ಜಿ.ಎಚ್ ತಿಪ್ಪಾರೆಡ್ಡಿ ನಡುವೆ ಮಾತಿನ ಸಮರಕ್ಕೆ ಕಾರಣ ಲಾಕ್ ಡೌನ್ ನಡುವೆಯೂ, ಅದ್ಧೂರಿ ಸ್ವಾಗತ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಭಾಗವಹಿಸಿ ವ್ಯಾಪಾಕ ಟೀಕೆಗೆ ಗುರಿಯಾಗಿದ್ದರು.

   English summary
   Challakere Congress MLA T Raghumurthy Alleges against State Government for Protocol violation in chitradurga.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X