ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೀರಿಗಾಗಿ ಪ್ರಾಣ ಕಳೆದುಕೊಳ್ಳುವ ಅಗತ್ಯವಿಲ್ಲ; ಡಿಕೆಶಿಗೆ ಸಚಿವ ಕಾರಜೋಳ ಟಾಂಗ್

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಜನವರಿ 7: ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ಜನವರಿ 9ರಂದು ಮೇಕೆದಾಟುನಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ತನಕ ಪಾದಯಾತ್ರೆ ಹಮ್ಮಿಕೊಂಡಿದ್ದರು. ಆದರೆ ಇದೀಗ ಕೊರೊನಾ ಕಠಿಣ ನಿಯಮ ಜಾರಿಗೆ ತಂದಿರುವ ಕಾರಣ ಪಾದಯಾತ್ರೆ ಬದಲು, ಅವಕಾಶ ಇರುವಷ್ಟು ಜನ ನಡಿಗೆ ಮಾಡಲು ನಿರ್ಧರಿಸಿದ್ದಾರೆ.

ಈ ಪಾದಯಾತ್ರೆ ವಿಚಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಾಣ ಹೋದರೂ ಸರಿ ಹೋರಾಟ ನಿಲ್ಲುವುದಿಲ್ಲ ಎಂದು ಹೇಳಿದ್ದರು. ಡಿಕೆಶಿ ಹೇಳಿಕೆಗೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, "ಎಲ್ಲರಿಗೂ ಹೋರಾಟ ಮಾಡುವ ಹಕ್ಕು ಇರುತ್ತದೆ. ಪ್ರಾಣ ಕಳೆದುಕೊಳ್ಳುವ ಅಗತ್ಯವಿಲ್ಲ,'' ಎಂದು ಟಾಂಗ್ ನೀಡಿದ್ದಾರೆ.

ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಗೋವಿಂದ ಕಾರಜೋಳ, ಕಾಂಗ್ರೆಸ್ 2013ರಿಂದ 18ರವರೆಗೆ ರಾಜ್ಯದಲ್ಲಿ ಆಡಳಿತ ನಡೆಸಿದೆ. ಆಗ ನೀರಾವರಿ ಯೋಜನೆ ಬಗ್ಗೆ ಗಮನಹರಿಸದೆ ಕುಂಭಕರ್ಣ ನಿದ್ದೆ ಮಾಡಿದೆ. ಇದೀಗ ಹೋರಾಟಕ್ಕೆ ಇಳಿದಿದ್ದಾರೆ ಎಂದರು.

Chitradurga: Minister Govind Karajola Reaction On KPCC President DK Shivakumar Statement on Mekedatu Padayatra

ಕಾಂಗ್ರೆಸ್ ಮೇಕೆದಾಟು ಹೋರಾಟ ಇದೊಂದು ರಾಜಕೀಯ ಗಿಮಿಕ್ ರೀತಿ ಇದೆ. ತಮಿಳುನಾಡಿನಲ್ಲಿ ಡಿಎಂಕೆ ಜತೆ ಸೇರಿ ಕಾಂಗ್ರೆಸ್ ಸರ್ಕಾರ ರಚಿಸಿದೆ. ತಮಿಳುನಾಡು ಕ್ಯಾತೆ ತೆಗೆಯದಂತೆ ಸಿದ್ದರಾಮಯ್ಯ ಬುದ್ದಿ ಹೇಳಲಿ. ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಊರ ಹೊರಗಡೆ ಇದ್ದಾನೆ. ಅಣ್ಣಾಮಲೈ ಸರ್ಕಾರದಲ್ಲಿಲ್ಲ, ಚುನಾಯಿತ ಪ್ರತಿನಿಧಿ ಅಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಲೇವಡಿ ಮಾಡಿದರು.

ಸಿದ್ಧರಾಮಯ್ಯ, ಡಿಎಂಕೆ ಸರ್ಕಾರ ಸೇರಿ ಸಹಕರಿಸಿ ಕರ್ನಾಟಕಕ್ಕೆ ಉಪಕರಿಸಲಿ. ಮೇಕೆದಾಟು ಹೋರಾಟಕ್ಕೆ ಇಬ್ಬರಾದರೂ ಹೋಗಲಿ, ಇನ್ನೂರು ಜನರಾದರೂ ಹೋಗಲಿ. ಕಾಂಗ್ರೆಸ್‌ನವರು ಭ್ರಮೆ ಹುಟ್ಟಿಸಿ ಜನರಿಗೆ ಮೋಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಹೊಣೆಗೇಡಿತನದಿಂದ ರಾಜ್ಯದ ಯೋಜನೆಗಳು ಪ್ರಗತಿ ಕುಂಠಿತವಾಗಿವೆ. ಸಿದ್ದರಾಮಯ್ಯ ಕಾಂಗ್ರೆಸ್ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಸಚಿವ ಗೋವಿಂದ ಕಾರಜೋಳ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.

Chitradurga: Minister Govind Karajola Reaction On KPCC President DK Shivakumar Statement on Mekedatu Padayatra

ಮುಜರಾಯಿಯನ್ನು ಆರ್‌ಎಸ್‌ಎಸ್‌ಗೆ ಕೊಡ್ತೀವಿ ಅಂದವರು ಯಾರು ?
"ಬಿಜೆಪಿ ಸರ್ಕಾರ ಮುಜರಾಯಿ ಇಲಾಖೆಯ ದೇವಸ್ಥಾನಗಳನ್ನು ಆರ್‌ಎಸ್‌ಎಸ್ ಕೈಗೆ ಕೊಡಬಾರದೆಂದು ಸಿದ್ದರಾಮಯ್ಯ ಹೇಳಿದ್ದರು. ಸಿದ್ದರಾಮಯ್ಯ ಹೇಳಿಕೆಗೆ ಉತ್ತರಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮುಜರಾಯಿ ಇಲಾಖೆಯನ್ನು ಆರ್‌ಎಸ್‌ಎಸ್‌ಗೆ ಕೊಡುತ್ತೇವೆ ಎಂದವರು ಯಾರು?," ಎಂದು ಮರು ಪ್ರಶ್ನಿಸಿದರು.

"ಎಲ್ಲಾ ಧರ್ಮದವರು ಅವರವರ ಧಾರ್ಮಿಕ ಕೇಂದ್ರಗಳ ಜವಾಬ್ದಾರಿಯನ್ನು ನಿರ್ವಹಿಸುವಾಗ ಹಿಂದೂ ಧಾರ್ಮಿಕ ಕೇಂದ್ರಗಳ ಜವಾಬ್ದಾರಿಯನ್ನು ಹಿಂದೂಗಳಿಗೆ ನೀಡುತ್ತಿದ್ದೇವೆ ಎಂದು ಸಿಎಂ ತಿಳಿಸಿದ್ದು, ಇದು ಸರಿಯಾದ ವಿಚಾರವಾಗಿದೆ," ಎಂದರು.

ಇನ್ನು ಮೇಕೆದಾಟು ಪಾದಯಾತ್ರೆಯನ್ನು ಹತ್ತಿಕ್ಕುವ ಸಲುವಾಗಿ ಬಿಜೆಪಿ ಸರ್ಕಾರ ವೀಕೆಂಡ್ ಕರ್ಪ್ಯೂ ತಂದಿದ್ದಾರೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿರುವ ಕೋಟ ಶ್ರೀನಿವಾಸ ಪೂಜಾರಿ, "ಪ್ರಜಾಪ್ರಭುತ್ವದಲ್ಲಿ ಅವರವರ ಭಾವನೆಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯ ಇದೆ. ಆದರೆ ಕೊರೊನಾ ಇರುವುದರಿಂದ ಕೆಲವೊಂದು ನಿಯಂತ್ರಣಕ್ಕೆ ಒಳಪಟ್ಟು, ಜವಾಬ್ದಾರಿಯನ್ನು ನಿರ್ವಹಿಸಬೇಕಿದೆ," ಎಂದು ತಿಳಿಸಿದರು.

ಕೋವಿಡ್ ಸಮಯದಲ್ಲಿ ಬಿಜೆಪಿಯವರು ಜನಾಶೀರ್ವಾದ ಯಾತ್ರೆ ಮಾಡುತ್ತಾರೆ, ಆದರೆ ಕಾಂಗ್ರೆಸ್ ಹೋರಾಟವನ್ನು ಹತ್ತಿಕ್ಕುತ್ತಿದೆ ಎಂಬ ವಿಚಾರಕ್ಕೆ ಮಾತನಾಡಿದ ಅವರು, "ಆ ಸಮಯದಲ್ಲಿ ಕೋವಿಡ್ ನಿಯಂತ್ರಣ ಬಂದಿದ್ದಾಗ ಕೋವಿಡ್ ಗೈಡ್‌ಲೈನ್‌ನಲ್ಲಿ ಜನಾಶೀರ್ವಾದ ಯಾತ್ರೆ ಮಾಡಲಾಗಿತ್ತು. ಆದರೆ ಈಗ ಕೋವಿಡ್ 3ನೇ ಅಲೆ ಓಮಿಕ್ರಾನ್ ಹೆಚ್ಚುತ್ತಿದೆ. ಆದ ಕಾರಣ ಎಲ್ಲರೂ ಜವಾಬ್ದಾರಿಯನ್ನು ನಿರ್ವಹಿಸಬೇಕು,'' ಎಂದು ಕಾಂಗ್ರೆಸ್ ನಾಯಕರ ಹೇಳಿಕೆಗೆ ಸಚಿವರು ಸಮಜಾಯಿಷಿ ನೀಡಿದರು.

Recommended Video

Pakistan ಕ್ರಿಕೆಟರ್ ಗೆ ಉಡುಗೊರೆ ಕಳಿಸಿದ MS Dhoni | Oneindia Kannada

English summary
Water Resources Minister Govind Karajola Reaction on KPCC President DK Shivakumar statement on Mekedatu Padayatra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X