ಸಿದ್ದರಾಮಯ್ಯ ಗಂಡೋ, ಹೆಣ್ಣೋ ಎಂಬ ಸಂಶಯ: ಈಶ್ವರಪ್ಪ ವ್ಯಂಗ್ಯ

Posted By:
Subscribe to Oneindia Kannada

ಚಿತ್ರದುರ್ಗ, ನವೆಂಬರ್ 18 : ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಆನಂತಕುಮಾರ್ ಹೆಗಡೆ ನಾಲಿಗೆ ಹರಿಬಿಬಿಟ್ಟ ಬೆನ್ನಲ್ಲಿಯೇ ಇದೀಗ ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್ ಈಶ್ವರಪ್ಪ ಸಹ ಸಿದ್ದರಾಮಯ್ಯ ಗಂಡೋ ಹೆಣ್ಣೋ ಎಂಬ ಸಂಶಯ ಇದೆ ಎಂದು ಬಾಯಿಗೆ ಬಂದಂತೆ ಮಾತನಾಡಿದ್ದಾರೆ.

ಸಿದ್ದರಾಮಯ್ಯ ವೋಟಿನಾಸೆಗೆ ಬೂಟು ನೆಕ್ತಾರೆ ಎಂದು ನಾಲಿಗೆ ಹರಿಬಿಟ್ಟ ಹೆಗಡೆ

ಚಿತ್ರದುರ್ಗದಲ್ಲಿ ಶನಿವಾರ ಟಿಪ್ಪು ಜಯಂತಿ ವಿರುದ್ಧ ಪ್ರತಿಭಟನೆ ವೇಳೆ ಮಾತನಾಡಿದ ಈಶ್ವರಪ್ಪ, "ಸಿದ್ದರಾಮಯ್ಯ ಗಂಡೋ, ಹೆಣ್ಣೋ? ಎಂಬ ಸಂಶಯ ಇದೆ. ಸಮಾಜ ಕಲ್ಯಾಣ ಇಲಾಖೆಯ ಸಚಿವ ಆಂಜನೇಯನನ್ನು ಗಂಡು ಅಂತಾ ಕರೀಬೇಕೋ ಹೆಣ್ಣು ಅಂತಾ ಕರೀಬೇಕೋ ಗೊತ್ತಿಲ್ಲ ಎಂದು ಲೇವಡಿ ಮಾಡಿದರು.

KS Eshwarappa uses unpaliamentary language against CM Siddaramaiah

ಆಂಜನೇಯ ಸಿಎಂ ಅವರ ನಾಯಿ. ಯಾವಾಗಲೂ ಅವರ ಬಾಲ ಹಿಡಿದುಕೊಂಡು ಹೋಗುತ್ತಿರುತ್ತಾರೆ. ಅವರ ಬಾಲ ಅಲ್ಲಾಡಿಸುವುದು ಇನ್ನೂ ನಾಲ್ಕೈದು ತಿಂಗಳು ಮಾತ್ರ.

ಅಷ್ಟೇ ಅಲ್ಲದೇ ಕಾಂಗ್ರೆಸ್ ಕುಮ್ಮಕ್ಕಿನಿಂದ ಪೊಲೀಸರು ಹಿಂದೂ ಕಾರ್ಯಕರ್ತರ ಮೇಲೆ ಇನ್ನೊಂದು ಕೇಸ್ ಹಾಕಿದ್ರೆ ನಾವು ಜಂಗಿ ಕುಸ್ತಿ ಆಡೋಕೆ ರೆಡಿ ಇದ್ದೇವೆ ಎಂದು ಈಶ್ವರಪ್ಪ ಆಕ್ರೋಶ ಭರಿತರಾಗಿ ಹೇಳಿದರು.

ಶುಕ್ರವಾರ ಬೆಳಗಾವಿಯಲ್ಲಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ನಾಲಿಗೆ ಹರಿಬಿಟ್ಟು, ಸಿದ್ದರಾಮಯ್ಯ ವೋಟಿಗಾಗಿ ಯಾರ ಬೂಟು ನೆಕ್ಕೋಕೂ ರೆಡಿಯಾಗಿರುತ್ತಾರೆ ಅಂತೆಲ್ಲಾ ಬಾಯಿಗೆ ಬಂದಂತೆ ಮಾತನಾಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
KS Eshwarappa uses unpaliamentary language against CM Siddaramaiah. Dont know whether CM Siddaramaiah is Male or female said K S Eshwarappa in Chitradurga on November 18. After union minister Ananth Kumar Hegde uses unpaliamentary language against CM Siddaramaiah

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ