ಚಿತ್ರದುರ್ಗ: ತಾಲ್ಲೂಕುವಾರು ಮತದಾರರ ಅಂತಿಮ ಪಟ್ಟಿಯ ಅಂಕಿಅಂಶ ತಿಳಿಯಿರಿ
ಚಿತ್ರದುರ್ಗ, ಜನವರಿ, 22: ಭಾರತಿಯ ಚುನಾವಣಾ ಆಯೋಗದ ಸೂಚನೆಯಂತೆ ಜಿಲ್ಲೆಯ ವಿಧಾನಸಭಾ ಕ್ಷೇತ್ರವಾರು ಮತದಾರರ ಅಂತಿಮ ಪಟ್ಟಿಯನ್ನು ಸೋಮವಾರ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಪ್ರಕಟಿಸಿದರು. ಹಾಗಾದರೆ ತಾಲೂಕುವಾರು ಮತದಾರರ ಪಟ್ಟಿಯ ವಿವರವನ್ನು ಇಲ್ಲಿ ತಿಳಿಯಿರಿ.
ಮತದಾರರು ಸೇರಿದಂತೆ ಒಟ್ಟು 1,99,457 ಮತದಾರರು ಇದ್ದಾರೆ. ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಲ್ಲಿ 1,18,219 ಪುರುಷರು, 1,18,737 ಮಹಿಳೆಯರು ಹಾಗೂ 10 ಇತರೆ ಸೇರಿದಂತೆ ಒಟ್ಟು 2,36,966 ಮತದಾರರು ಇದ್ದಾರೆ. ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 14,18,211 ಮತದಾರರು ಇದ್ದಾರೆ ಎಂದು ತಿಳಿಸಿದರು.

2023ರ ಅಕ್ಟೋಬರ್ ಹಾಗೂ ನವೆಂಬರ್ ಮಾಹೆಯಲ್ಲಿ ನಡೆದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ 11,260 ಪುರುಷರು ಹಾಗೂ 14,761 ಮಹಿಳೆಯರು ಹಾಗೂ 8 ಮಂದಿ ಇತರರು ಸೇರಿದಂತೆ ಒಟ್ಟು 26,029 ಮತದಾರರು ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆ ಆಗಿದ್ದಾರೆ. ಮರಣ ಹೊಂದಿದ 9648 ಮತದಾರರನ್ನು ಗುರುತಿಸಿ ಅವರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದರು.
35,683 ಯುವ ಮತದಾರರು:ಮತದಾರರ ಅಂತಿಮ ಪಟ್ಟಿಯಲ್ಲಿ 18-19 ವರ್ಷ ವಯೋಮಿತಿಯ ಯುವ ಮತದಾರರು ಜಿಲ್ಲೆಯಲ್ಲಿ 35,683 ಮಂದಿ ಇದ್ದಾರೆ. ಕರಡು ಮತದಾರರ ಪಟ್ಟಿಯಲ್ಲಿ 23,659 ಮತದಾರರು ಇದ್ದರು. ಕಳೆದ ಎರಡು-ಮೂರು ತಿಂಗಳಿಂದ ಬಿಎಲ್‍ಒಗಳು ಮನೆ ಮನೆ ಭೇಟಿ, ಕಾಲೇಜುಗಳಲ್ಲಿಯೂ ಸಹ ಯುವ ಮತದಾರರನ್ನು ಸೇರ್ಪಡೆ ಮಾಡಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರ ನೋಂದಣಿ ಕಾರ್ಯ ಮಾಡಿರುವುದಕ್ಕೆ ಭಾರತ ಚುನಾವಣಾ ಆಯೋಗವು ಸಹ ಶ್ಲಾಘನೆ ಮಾಡಿದೆ ಜಿಲ್ಲಾಧಿಕಾರಿಗಳು ತಿಳಿಸಿದರು.












Click it and Unblock the Notifications