ಚಿಟುಗು ಮಲ್ಲೇಶ್ವರ ಮಹಾಸಂಸ್ಥಾನ ಪೀಠಾಧ್ಯಕ್ಷರು ಶಿವೈಕ್ಯ; ಅಸಹಜ ಸಾವು ಶಂಕೆ
ಚಿತ್ರದುರ್ಗ, ಜೂ 17: ಚಿಟುಗು ಮಲ್ಲೇಶ್ವರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರ ಅಸಹಜ ಸಾವಿಗೀಡಾಗಿರುವ ಘಟನೆ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಹಿರಿಯೂರು ಜ್ಞಾನಭಾಸ್ಕರ ಸ್ವಾಮೀಜಿ(75) ವಿಧಿವಶರಾಗಿದ್ದಾರೆ. ಹಿರಿಯೂರು ನಗರದ ವಾಗ್ದೇವಿ ಶಾಲೆ ಹಿಂಭಾಗದಲ್ಲಿ ಚಿಟುಗು ಮಲ್ಲೇಶ್ವರ ಮಹಾಸಂಸ್ಥಾನ ಮಠವಿದ್ದು, ಈ ಮಠದ ಶ್ರೀಗಳಾಗಿದ್ದರು.
ಸ್ನಾನ ಗೃಹದಲ್ಲಿ ಜ್ಞಾನ ಭಾಸ್ಕರ ಶ್ರೀಗಳು ನೀರು ಕಾಯಿಸುವ ವೇಳೆ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗುತ್ತಿದೆ. ಈ ಸಂಬಂಧ ಹಿರಿಯೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶ್ವಕರ್ಮ ಸಮಾಜದ ಒಕ್ಕೂಟದಲ್ಲಿರುವ 63 ಸ್ವಾಮೀಜಿಗಳಲ್ಲಿ ಒಬ್ಬರು
ಬೆಳಿಗ್ಗೆ ಸ್ನಾನದ ಗೃಹದಲ್ಲಿ ಅವರ ಮೃತದೇಹ ಕಂಡು ಬಂದಿದ್ದು, ಸ್ನಾನಕ್ಕೆ ನೀರು ಕಾಯಿಸುವ ವೇಳೆ ವಿದ್ಯುತ್ ಸ್ಪರ್ಶದಿಂದ ಸಾವು ಸಂಭವಿಸಿರುವುದು ಎಂದು ಭಕ್ತರು ಶಂಕೆ ವ್ಯಕ್ತಪಡಿಸಿದ್ದಾರೆ. ಹಿರಿಯೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ವಿಶ್ವಕರ್ಮ ಸಮಾಜದ ಒಕ್ಕೂಟದಲ್ಲಿರುವ 63 ಸ್ವಾಮೀಜಿಗಳಲ್ಲಿ ಇವರು ಒಬ್ಬರಾಗಿದ್ದಾರೆ. 30 ವರ್ಷಗಳ ಹಿಂದೆಯೇ ಜ್ಞಾನಭಾಸ್ಕರ ಸ್ವಾಮೀಜಿ ಸಂಸಾರ ತ್ಯಜಿಸಿ ಸನ್ಯಾಸತ್ವ ಸ್ವೀಕರಿಸಿದರು.

ಶಾಸಕಿ ಕೆ. ಪೂರ್ಣಿಮಾ ಸಂತಾಪ
ಶಾಸಕಿ ಕೆ ಪೂರ್ಣಿಮಾ ಸೇರಿದಂತೆ ಹಿರಿಯೂರಿನ ಅನೇಕ ಜನಪ್ರತಿನಿಧಿಗಳು, ಭಕ್ತರು ವಿಶ್ವಕರ್ಮ ಸಮುದಾಯ ಭಕ್ತವೃಂದ ಸೇರಿದಂತೆ ಮತ್ತಿತರರು ಶ್ರೀಗಳ ನಿಧಾನಕ್ಕೆ ಸಂತಾಪ ಸೂಚಿಸಿದ್ದಾರೆ. ಮಠದ ಆವರಣದಲ್ಲಿ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಶ್ರೀಗಳ ಅಂತ್ಯಕ್ರಿಯೆ ಮಠದ ಆವರಣದಲ್ಲಿ ವಿಶ್ವಕರ್ಮ ಸಮುದಾಯ ವಿಧಿ ವಿಧಾನಗಳೊಂದಿಗೆ ನೇರವೇರಲಿದೆ ಎಂದು ಮೂಲಗಳು ತಿಳಿಸಿವೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications