ಉದ್ಯಮ ಮುಂದುವರಿಸಿದ್ದರೆ ಅಂಬಾನಿ, ಅದಾನಿ ಸಾಲಿನಲ್ಲಿರುತ್ತಿದೆ-ಜನಾರ್ದನ ರೆಡ್ಡಿ

4 ವರ್ಷಗಳ ಕಾಲ ಜೈಲಿನಲ್ಲಿ ಇಟ್ಟಿದ್ದರು. ರೆಡ್ಡಿ ಮುಖ್ಯಮಂತ್ರಿ ಸ್ಥಾನಕ್ಕೆ ಹೋಗುತ್ತಾನೆ ಎಂಬ ನಿಟ್ಟಿನಲ್ಲಿ ನನ್ನನ್ನು ಬಂಧಿಸಿದ್ದರು. ನಾನು ಯಾವುದೇ ಸರ್ಕಾರಿ ಜಮೀನು, ಜಾಗ ಕಬಳಿಸಿ ಜೈಲಿಗೆ ಹೋಗಲಿಲ್ಲ ಎಂದು ಜನಾರ್ದನ ರೆಡ್ಡಿ ಕಿಡಿಕಾರಿದ್ದಾರೆ.

ಚಿತ್ರದುರ್ಗ, ಫೆಬ್ರವರಿ 4: ನನ್ನವರು ನನ್ನ ಜೊತೆಗೆ ಇದ್ದುಕೊಂಡೇ ನನಗೆ ತುಂಬಾ ಮೊಸ ಮಾಡಿದರು ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಹಾಗೂ ಮಾಜಿ ಸಚಿವ ಜನಾರ್ದನ ರೆಡ್ಡಿ ಬಹಿರಂಗವಾಗಿ ಬೇಸರ ತೋಡಿಕೊಂಡರು.

ಜಿಲ್ಲೆಯ ಹಿರಿಯೂರು ನಗರದ ನೆಹರೂ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಬೃಹತ್ ಬಹಿರಂಗ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಿರಿಯೂರು ಒಂದು ರೀತಿಯಲ್ಲಿ ಖುಷಿ ಮತ್ತು ಸಂತೋಷ ಹೆಸರು ಬರುತ್ತದೆ. ಹಿರಿಯೂರಿಗೆ ನನ್ನ ಪ್ರೀತಿ ಹಾಗೂ ಋಣ ಇದೆ. ಹಿಂದೆ 2008 ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಹಿರಿಯೂರು ಜನತೆಯೇ ಕಾರಣ ಎಂದರು.

2008 ರಲ್ಲಿ ಬಿಜೆಪಿ 110 ಸೀಟು ಗೆಲುವು ಸಾಧಿಸಿದ್ದರು. ಆಗ ಹಿರಿಯೂರು ಮತ್ತು ಹೊಸದುರ್ಗ ಮತದಾರರ ಆಶೀರ್ವಾದದಿಂದ ಸರ್ಕಾರ ಬರಲು ಕಾರಣವಾಯಿತು. ನಾನು ಹಣ ಮಾಡಲು ರಾಜಕೀಯಕ್ಕೆ ಬಂದಿಲ್ಲ. ತಾಯಿ ಸುಷ್ಮಾ ಸ್ವರಾಜ್ ಅವರಿಗೊಸ್ಕರ ನಾನು ರಾಜಕೀಯಕ್ಕೆ ಬಂದಿದ್ದೇನೆ ಎಂದು ಹೇಳಿದರು.

ನಾನು ಯಾವುದೇ ಸರ್ಕಾರಿ ಜಮೀನು, ಜಾಗ ಕಬಳಿಸಿ ಜೈಲಿಗೆ ಹೋಗಿಲ್ಲ

ನಾನು ಯಾವುದೇ ಸರ್ಕಾರಿ ಜಮೀನು, ಜಾಗ ಕಬಳಿಸಿ ಜೈಲಿಗೆ ಹೋಗಿಲ್ಲ

ನಾನು ಉದ್ಯಮದಲ್ಲಿ ತೋಡಿಕೊಂಡಿದ್ದೆ. ನಾನು ಅದೇ ಉದ್ಯಮವನ್ನು ಮುಂದುವರಿಸಿದಿದ್ದರೇ, ನಾನು ಇವತ್ತು ಅಂಬಾನಿ ಅದಾನಿ ಸಾಲಿನಲ್ಲಿ ಇರುತ್ತಿದ್ದೆ. ಕುತಂತ್ರದಿಂದ ರಾಜಕೀಯ ಮಾಡಲಿಲ್ಲ. ನಾನು ಏನು ಹೇಳುತ್ತೇನೆ ಅದನ್ನೇ ಮಾಡುತ್ತೇನೆ. 4 ವರ್ಷಗಳ ಕಾಲ ಜೈಲಿನಲ್ಲಿ ಇಟ್ಟಿದ್ದರು. ರೆಡ್ಡಿ ಮುಖ್ಯಮಂತ್ರಿ ಸ್ಥಾನಕ್ಕೆ ಹೋಗುತ್ತಾನೆ ಎಂಬ ನಿಟ್ಟಿನಲ್ಲಿ ನನ್ನನ್ನು ಬಂಧಿಸಿದ್ದರು. ನಾನು ಯಾವುದೇ ಸರ್ಕಾರಿ ಜಮೀನು, ಜಾಗ ಕಬಳಿಸಿ ಜೈಲಿಗೆ ಹೋಗಲಿಲ್ಲ. ನಮ್ಮವರೇ ನನ್ನನ್ನು ಬಂಧನದಲ್ಲಿ ಇರುವಂತೆ ಮಾಡಿದರು. ರಾಜಕೀಯವಾಗಿ ನನ್ನನ್ನು ತುಳಿಯಲು ಆರಂಭಿಸಿದರು. ನನ್ನ ಜೊತೆಯಲ್ಲಿ ಇದ್ದವರು ನನಗೆ ಮೊಸ ಮಾಡಿದರು ಎಂದು ಬೇಸರ ವ್ಯಕ್ತಪಡಿಸಿದರು.

ನನ್ನ ಊರಿನಲ್ಲಿ ಇರಲು ಅವಕಾಶ ಕೊಡಲಿಲ್ಲ

ನನ್ನ ಊರಿನಲ್ಲಿ ಇರಲು ಅವಕಾಶ ಕೊಡಲಿಲ್ಲ

4 ವರ್ಷಗಳ ಕಾಲ ಮನೆಯಲ್ಲಿ ಸುಮ್ಮನೆ ಕುಳಿತಿರಲಿಲ್ಲ. ಎಲ್ಲವನ್ನೂ ನೋಡುತ್ತಿದೆ. ಸ್ವಂತ ಊರಿನಲ್ಲಿ ನಾನು ಇರಲು ಅವಕಾಶ ಮಾಡಿ ಕೊಡಲಿಲ್ಲ. ಪಕ್ಷ ಕಟ್ಟಿ ಜನರ ಮುಂದೆ ಹೋಗುತ್ತೇನೆ ಎಂದು ಇಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಿಸಲಾಗಿದೆ. ನನ್ನ ಮಗಳ ಹೆರಿಗೆ ಸಂದರ್ಭದಲ್ಲಿ ನನಗೆ ತುಂಬಾ ಕಷ್ಟ ಕೊಟ್ಟಿದ್ದರು. ಬಾಣಂತಿ ಹಾಗೂ ಹಸುಗೂಸು ಪೋಟೋ ತೆಗೆಯಬೇಕು ಎಂದು ಅಧಿಕೃತ ಕೇಳುತ್ತಾರೆ ಎಂತಹ ನಾಚಿಕೆ ಆಗುತ್ತದೆ ಅಲ್ವಾ ಬಂಧುಗಳೇ ಎಂದರು.

ಹಿರಿಯೂರನ್ನು ಗುಡಿಸಲು ಮುಕ್ತ ತಾಲೂಕನ್ನಾಗಿ ಮಾಡುತ್ತೇನೆ

ಹಿರಿಯೂರನ್ನು ಗುಡಿಸಲು ಮುಕ್ತ ತಾಲೂಕನ್ನಾಗಿ ಮಾಡುತ್ತೇನೆ

12 ವರ್ಷಗಳ ಕಾಲ ಮನೆಯಿಂದ ಹೊರಗಡೆ ಬರದಂತೆ ಮಾಡಿದ್ದರು. 1907 ರಲ್ಲಿ ಮೈಸೂರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಹಿರಿಯೂರಿನ ಅಚ್ಚುಕಟ್ಟು ಪ್ರದೇಶದ ರೈತರಿಗೆ ಅನುಕೂಲವಾಗುವಂತೆ ವೇದಾವತಿ ನದಿಗೆ ವಾಣಿವಿಲಾಸ ಸಾಗರ ಡ್ಯಾಂನ್ನು ಅಡ್ಡಲಾಗಿ ಕಟ್ಟಿದ್ದಾರೆ. ನಾನು ಪಕ್ಷ ಅಧಿಕಾರಕ್ಕೆ ಬಂದರೆ ಹಿರಿಯೂರನ್ನು ಗುಡಿಸಲು ಮುಕ್ತ ತಾಲೂಕನ್ನಾಗಿ ಮಾಡುತ್ತೇನೆ. ಮಹಿಳೆಯರ ಅಭಿವೃದ್ಧಿಗೆ ಶ್ರಮಿಸುವೆ. ಯುವಕ, ಯುವತಿಯರಿಗೆ ಉದ್ಯೋಗ ನೀಡಲು ಭರವಸೆ ನೀಡಿದರು. ಸಕ್ಕರೆ ಕಾರ್ಖಾನೆ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ರೆಡ್ಡಿ ತಿಳಿಸಿದರು.

ಎಚ್.ಮಹೇಶ್ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಹಿರಿಯೂರು ಅಭ್ಯರ್ಥಿ

ಎಚ್.ಮಹೇಶ್ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಹಿರಿಯೂರು ಅಭ್ಯರ್ಥಿ

ಬಳ್ಳಾರಿ ಜಿಲ್ಲೆಯಿಂದ ನಾನು ಹೊರಗಡೆ ಹೋದ ಹಿನ್ನೆಲೆಯಲ್ಲಿ ಗಂಗಾವತಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಕ್ಷೇತ್ರದ ಕೆಆರ್.ಪಿ ಪಕ್ಷದ ಅಭ್ಯರ್ಥಿಯಾಗಿ ಗನ್ನಾಯಕನಹಳ್ಳಿ ಎಚ್.ಮಹೇಶ್ ಅವರನ್ನು ಘೋಷಿಸಿದರು. ಇಲ್ಲಿನ ಮತದಾರರು ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ ತಾಲೂಕಿನ ಸ್ವಾಭಿಮಾನದ ಬದುಕಿಗೆ ಸ್ಥಳೀಯ ಅಭ್ಯರ್ಥಿಗೆ ಅವಕಾಶ ನೀಡಿ ಎಂದು ಕರೆ ನೀಡಿ.ಮುಂದಿನ ದಿನಗಳಲ್ಲಿ ಪ್ರಚಾರಕ್ಕೆ ಹಳ್ಳಿಗಳಿಗೆ ಪ್ರಚಾರಕ್ಕೆ ಬರುತ್ತೇನೆ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+