• search
  • Live TV
ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹನಿಟ್ರ್ಯಾಪ್ ಬಗ್ಗೆ ಗೊತ್ತಿಲ್ಲ, ನಾನೂ ಸಚಿವ ಸ್ಥಾನದ ಆಕಾಂಕ್ಷಿ: ಗೂಳಿಹಟ್ಟಿ ಶೇಖರ್

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಡಿಸೆಂಬರ್ 17: 2008 ರಲ್ಲಿ ಬಿಜೆಪಿ ಸರ್ಕಾರ ಬರಲು ನಾನೇ ಕಾರಣ ಆಗಿದ್ದೆನು, ಪಕ್ಷೇತರ‌ ಶಾಸಕನಾಗಿದ್ದ ನಾನೇ ಮೊದಲ ವಿಕೆಟ್ ಆಗಿದ್ದೆ, ಆಗ ಸಿಎಂ ಲೆಫ್ಟ್, ರೈಟ್ ಇದ್ದವರು ಯಾರೂ ರಾಜೀನಾಮೆ ಕೊಟ್ಟು ಬಂದಿರಲಿಲ್ಲ ಎಂದು ಹೊಸದುರ್ಗ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಹೇಳಿದ್ದಾರೆ.

ಚಿತ್ರದುರ್ಗದಲ್ಲಿ ಮಾತನಾಡಿದ ಗೂಳಿಹಟ್ಟಿ ಶೇಖರ್, 2008ರ ಸರ್ಕಾರ ಬರಲು ನಾನೇ ಕಾರಣ ಎಂದು ಎದೆ‌ತಟ್ಟಿ ಹೇಳುತ್ತೇನೆ, ನಾನು ಸಹ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ ಆಗಿದ್ದೇನೆ ಎಂದು ಹೇಳುವ ಮೂಲಕ ಸಚಿವ ಸ್ಥಾನದ ಮೇಲೆ ಕಣ್ಣೀಟ್ಟಿದ್ದಾರೆ.

"ಮಾತಿಗೆ ತಪ್ಪಿದ ಸಿಎಂ" ಪಟ್ಟ ಪಡೆದುಕೊಳ್ಳಬೇಡಿ ಎಂದ ಸ್ವಾಮೀಜಿ

17 ಜನರ ತ್ಯಾಗದಿಂದಾಗಿ ಈಗ ಬಿಜೆಪಿ ಸರ್ಕಾರ ಬಂದಿದೆ, ಅವರಿಗೆ ನ್ಯಾಯ ನೀಡುವುದರ ಜತೆಗೆ ನನ್ನನ್ನೂ ಪರಿಗಣಿಸಬೇಕು ಎಂದಿದ್ದಾರೆ. 2008 ರಲ್ಲಿ 3 ಶಾಸಕರು ಬೇಕಿತ್ತು, ಆಗ ಮೊದಲು ನಾನು ಬೆಂಬಲಿಸಿದ್ದು, 2008 ಬಿಜೆಪಿ ಸರ್ಕಾರದಲ್ಲಿ ನನಗೆ ಅನ್ಯಾಯ ಆಗಿತ್ತು, ಈಗ ಆ ಅನ್ಯಾಯ ಸರಿದೂಗಿಸಬೇಕಿದೆ ಎಂದರು.

ಪ್ರಬಲ ಖಾತೆ, ಜಿಲ್ಲಾಉಸ್ತುವಾರಿ, ಮೆಡಿಕಲ್ ಕಾಲೇಜು, ಸಾವಿರಾರು ಕೋಟಿ ಅನುದಾನ ಯಾವುದೂ ಆಗ ಕೊಡಲಿಲ್ಲ 2008ರಲ್ಲಿ ನನಗಾದ ಅನ್ಯಾಯ ಈಗ ಸರಿಪಡಿಸಬೇಕೆಂದು ಕೇಳುತ್ತೇನೆ ಎಂದಿದ್ದಾರೆ.

ಹನಿಟ್ರ್ಯಾಪ್ ಪ್ರಕರಣದಲ್ಲಿ ಗೂಳಿಹಟ್ಟು ಹೆಸರು ಕೇಳಿ ಬರುತ್ತಿರುವ ವಿಚಾರ

ಯಡಿಯೂರಪ್ಪ ಸಂಪುಟ ವಿಸ್ತರಣೆ, ಯಾರಿಗೆ ಯಾವ ಖಾತೆ ಸಿಗಲಿದೆ?ಯಡಿಯೂರಪ್ಪ ಸಂಪುಟ ವಿಸ್ತರಣೆ, ಯಾರಿಗೆ ಯಾವ ಖಾತೆ ಸಿಗಲಿದೆ?

ನಾನು ಆ ರೀತಿ‌ ಎಲ್ಲೂ ನಡೆದುಕೊಂಡಿಲ್ಲ, ಯಾರೂ ಬ್ಲಾಕ್‌ಮೇಲ್‌ ಮಾಡಿಲ್ಲ, ಮಂತ್ರಿಗಿರಿ ರೇಸ್ ನಿಂದ ಹಿಂದೆ ಸರಿಸಲು ಷಡ್ಯಂತ್ರ ರೂಪಿಸಿರಬಹುದು. ಹಿಂದೆಯೂ ವಿಧಾನಸೌಧದಲ್ಲಿ ಅಂಗಿ ಹರಿದುಕೊಂಡರೆಂದು ಅಪಪ್ರಚಾರ ಮಾಡಿದ್ರು, ಚುನಾವಣೆ, ರಾಜಕಾರಣ ವಿಚಾರದಲ್ಲಿ ಅಪಪ್ರಚಾರ ಮಾಡಲಾಗುತ್ತದೆ ಎಂದು ತಿಳಿಸಿದರು.

ಹನಿಟ್ರ್ಯಾಪ್ ಪ್ರಕರಣದಲ್ಲಿ ವಿನಾ ಕಾರಣ ನನ್ನ ಹೆಸರನ್ನು ಹರಿಯಬಿಡಲಾಗಿದೆ, ಇದೊಂದು ಷಡ್ಯಂತ್ರವಾಗಿದ್ದು, ನಾನು ಆ ರೀತಿಯ ವ್ಯಕ್ತಿತ್ವವನ್ನು ಹೊಂದಿಲ್ಲ ಎಂದು ಹೇಳಿದರು.

English summary
I was the reason for the BJP government to come out in 2008. I was the first man came to BJP of a Independent MLA Said By hosadurga MLA Goolihatti Shekhar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X