ಹೊಸದುರ್ಗ ಮಾಡದಕೆರೆಯಲ್ಲಿ 92.4 ಮಿ.ಮೀ. ಮಳೆ
ಚಿತ್ರದುರ್ಗ, ಜೂ. 6: ಜಿಲ್ಲೆಯಲ್ಲಿ ಬಿದ್ದ ಮಳೆ ವಿವರದನ್ವಯ ಹೊಸದುರ್ಗ ತಾಲ್ಲೂಕಿನ ಮಾಡದಕೆರೆಯಲ್ಲಿ 92.4 ಮಿ.ಮೀ ಮಳೆಯಾಗಿದೆ. ಇದು ಜಿಲ್ಲೆಯ ಅತ್ಯಧಿಕ ಮಳೆಯಾಗಿದೆ. ಹೊಸದುರ್ಗ ತಾಲ್ಲೂಕಿನಲ್ಲಿ 50.2 ಮಿ.ಮೀ, ಹಿರಿಯೂರು ತಾಲ್ಲೂಕಿನಲ್ಲಿ 46.4 ಮಿ.ಮೀ, ಚಳ್ಳಕೆರೆಯಲ್ಲಿ 23.8 ಮಿ.ಮೀ, ಚಿತ್ರದುರ್ಗ ತಾಲ್ಲೂಕಿನಲ್ಲಿ 21.6 ಮಿ.ಮೀ. ಮೊಳಕಾಲ್ಮೂರು ತಾಲ್ಲೂಕಿನಲ್ಲಿ 33.4 ಮಿ.ಮೀ, ಹೊಳಲ್ಕೆರೆ ತಾಲ್ಲೂಕಿನಲ್ಲಿ 18.9 ಮಿ.ಮೀ ಮಳೆಯಾಗಿದೆ.
ಹೊಸದುರ್ಗದಲ್ಲಿ 86.2 ಮಿ.ಮೀ, ಬಾಗೂರು 12 ಮಿ.ಮೀ, ಮತ್ತೋಡು 24 ಮಿ.ಮೀ, ಶ್ರೀರಾಂಪುರ 40.2 ಮಿ.ಮೀ ಮಳೆಯಾಗಿದೆ. ಚಿತ್ರದುರ್ಗ -1ರಲ್ಲಿ 21 ಮಿ.ಮೀ, ಚಿತ್ರದುರ್ಗ -2ರಲ್ಲಿ 30.3 ಮಿ.ಮೀ, ಹಿರೇಗುಂಟನೂರು 2.1 ಮಿ.ಮೀ, ಐನಳ್ಳಿ 36.8 ಮಿ.ಮೀ, ಭರಮಸಾಗರ 7.2 ಮಿ.ಮೀ, ಸಿರಿಗೆರೆ 9.6 ಮಿ.ಮೀ ಮಳೆಯಾಗಿದೆ. ಹಿರಿಯೂರು ತಾಲ್ಲೂಕಿನ ಹಿರಿಯೂರಿನಲ್ಲಿ 83 ಮಿ.ಮೀ, ಬಬ್ಬೂರಿನಲ್ಲಿ 85.6 ಮಿ.ಮೀ, ಇಕ್ಕನೂರಿನಲ್ಲಿ 52.4 ಮಿ,ಮೀ. ಈಶ್ವರಗೆರೆ 40.2 ಮಿ.ಮೀ, ಸುಗೂರು 17.3 ಮಿ.ಮೀ ಮಳೆಯಾಗಿದೆ. ಮೊಳಕಾಲ್ಮೂರು ತಾಲ್ಲೂಕಿನ ಮೊಳಕಾಲ್ಮೂರಿನಲ್ಲಿ 54.4 ಮಿ.ಮೀ, ದೇವಸಮುದ್ರ 42.4 ಮಿ.ಮೀ, ರಾಂಪುರ 60.2 ಮಿ.ಮೀ, ರಾಯಾಪುರ 30 ಮಿ.ಮೀ ಮಳೆಯಾಗಿದೆ.
ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆಯಲ್ಲಿ 78 ಮಿ.ಮೀ, ನಾಯಕನಹಟ್ಟಿ 27.4ಮಿ.ಮೀ, ಡಿ.ಮರಿಕುಂಟೆ 5.2 ಮಿ.ಮೀ, ಪರಶುರಾಂಪುರ 8.2ಮಿ.ಮೀ ಮಳೆಯಾಗಿದೆ. ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 14.6 ಮಿ.ಮೀ, ರಾಮಗಿರಿ 45.4 ಮಿ.ಮೀ, ಚಿಕ್ಕಜಾಜೂರು 24.2, ಹೆಚ್.ಡಿ.ಪುರ 26 ಮಿ.ಮೀ, ತಾಳ್ಯ 3 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

ಅಡಿಕೆ ಗಿಡ ನಾಶಪಡಿಸಿದ ಕಿಡಿಗೇಡಿಗಳು:
ಐದು ವರ್ಷಗಳಿಂದ ಅಡಿಕೆ ಗಿಡಗಳನ್ನು ಬೆಳೆಸಿದ್ದನ್ನು ಸಹಿಸಲಾರದೆ ನಿನ್ನೆ ತಡರಾತ್ರಿ ಯಾರೋ ಕಿಡಿಗೇಡಿಗಳು ಕಡಿದು ಹಾಕಿರುವ ಘಟನೆ ಚಿತ್ರದುರ್ಗ ತಾಲೂಕಿನ ಕೆನ್ನೆಡಲು ಗ್ರಾಮದಲ್ಲಿ ನಡೆದಿದೆ. ದಾಸರ ಗಿರಿಯಪ್ಪ ಎಂಬ ರೈತರ ಒಂದೂವರೆ ಎಕರೆ ತೋಟದಲ್ಲಿ ಬೆಳೆಯಲಾಗಿದ್ದ ಸುಮಾರು ನೂರಕ್ಕೂ ಹೆಚ್ಚು ಅಡಿಕೆ ಗಿಡಗಳು ನಾಶವಾಗಿದ್ದು, ಅಂದಾಜು ಮೂರು ಲಕ್ಷ ರೂ. ನಷ್ಟ ಆಗಿದೆ ಎಂದು ರೈತ ಗಿರಿಯಪ್ಪ ಅಳಲು ತೋಡಿಕೊಂಡರು.

ಫಸಲಿಗೆ ಬಂದಿದ್ದ ಅಡಿಕೆ ಗಿಡಗಳನ್ನು ನಿನ್ನೆ ತಡರಾತ್ರಿ ಯಾರೋ ಕಿಡಿಗೇಡಿಗಳು ಕಡಿದುಹಾಕಿರುವ ಘಟನೆ ಚಿತ್ರದುರ್ಗ ತಾಲೂಕಿನ ಕೆನ್ನೆಡಲು ಗ್ರಾಮದ ದಾಸರ ಗಿರಿಯಪ್ಪ ಜಮೀನಿನಲ್ಲಿ ನಡೆದಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ವಿಧಾನಪರಿಷತ್ ಮಾಜಿ ಸದಸ್ಯ ಜಿ. ರಘು ಆಚಾರ್ ಅವರು ನೊಂದ ರೈತ ಕುಟುಂಬಕ್ಕೆ ಧೈರ್ಯ ತುಂಬಿ, ಆಗಿರುವ ನಷ್ಟಕ್ಕೆ ಅಗತ್ಯ ಸಹಾಯ ನೀಡುವುದಾಗಿ ಭರವಸೆ ನೀಡಿದರು, ಅಲ್ಲದೇ ಗ್ರಾಮಾಂತರ ಠಾಣೆ ಪೊಲೀಸರನ್ನು ಸಂಪರ್ಕಿಸಿ ಕಿಡಿಗೇಡಿಗಳನ್ನು ಆದಷ್ಟು ಬೇಗ ಪತ್ತೆ ಹಚ್ಚಿ ರೈತನಿಗೆ ನ್ಯಾಯ ಒದಗಿಸುವಂತೆ ಮನವಿ ಮಾಡಿದರು.
(ಒನ್ಇಂಡಿಯಾ ಸುದ್ದಿ)












Click it and Unblock the Notifications