ಚಿತ್ರದುರ್ಗ: ಬರಗಾಲದಲ್ಲೂ ಬೋರ್‌ವೆಲ್‌ನಲ್ಲಿ ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ಚಿತ್ರದುರ್ಗ, ಮೇ, 11: ಇದೀಗ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬರ ತಾಂಡವ ಆಡುತ್ತಿದೆ. ಇನ್ನು ಕೆಲವೇ ಜಿಲ್ಲೆಗಳಲ್ಲಿ ಮಾತ್ರ ಮಳೆರಾಯ ಒಂದು ವಾರದಿಂದ ಕರುಣೆ ತೋರಿದ್ದಾನೆ. ಇದರ ನಡುವೆಯೂ ಬೋರ್‌ವೆಲ್‌ನಲ್ಲಿ ನೀರು ಉಕ್ಕಿದ ಅಪರೂಪದ ಘಟನೆ ಬರದ ನಾಡು ಅಂತಲೇ ಹೆಸರುವಾಸಿಯಾಗಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.
ಮಧ್ಯ ಕರ್ನಾಟಕದ ಚಿತ್ರದುರ್ಗ ಜಿಲ್ಲೆಯಲ್ಲಿ ಮಳೆಯಿಲ್ಲದೆ ಭೀಕರ ಬರಗಾಲ ಆವರಿಸಿದ್ದು, ನೀರಿನ ಅಭಾವ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಪರಿಣಾಮ ನೀರಿಲ್ಲದೆ ಜಿಲ್ಲೆಯ ಎಷ್ಟೋ ಕಡೆ ತೋಟಗಳು ಒಣಗಿ ಹೋಗಿವೆ.

ಸಾವಿರಾರು ಅಡಿಗಳಷ್ಟು ಬೋರ್‌ವೆಲ್ ಕೊರೆದರೂ ನೀರು ಸಿಗುತ್ತಿಲ್ಲ. ಇಂತಹ ಸಂದರ್ಭದಲ್ಲಿಯೂ ರೈತನೊಬ್ಬ ಬೋರ್‌ವೆಲ್ ಕೊರೆಸಿದ್ದು, ಮುಗಿಲೆತ್ತರಕ್ಕೆ ನೀರು ಚಿಮ್ಮಿದ ಘಟನೆ ನಡೆದಿದೆ. ಇದರಿಂದ ರೈತನ ಮೊಗದಲ್ಲಿ ಮಂದಹಾಸ ಮೂಡಿಸಿದ್ದು, ಆತನ ಹರ್ಷಕ್ಕೆ ಪಾರವೇ ಇಲ್ಲದಂತಾಗಿದೆ.
ಹೌದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಚಿಕ್ಕ ಚೆಲ್ಲೂರು ಗ್ರಾಮದ ರೈತ ಹರೀಶ್ ಫುಲ್ ಖುಷಿಯಾಗಿದ್ದಾರೆ. ಇದಕ್ಕೆ ತಾವು ಕೊರೆಸಿದ ಬೋರ್‌ವೆಲ್‌ನಿಂದ ಬರೋಬ್ಬರಿ 5 ಇಂಚು ನೀರು ಗಗನೆದೆತ್ತರಕ್ಕೆ ಚಿಮ್ಮಿದೆ. ಕಳೆದ ವರ್ಷದಿಂದ ನೀರು ಸಿಗದೇ ಕಂಗಾಲಾಗಿದ್ದ ಹರೀಶ್ ಈ ವರ್ಷ ನಡೆಸಿದ ಪ್ರಯತ್ನದಿಂದ ಬೋರ್‌ವೆಲ್‌ನಲ್ಲಿ ರೈತ ಹರೀಶ್‌ಗೆ ಗಂಗೆ ಒಲಿದಿದ್ದಾಳೆ.












Click it and Unblock the Notifications