ಚಿತ್ರದುರ್ಗ : ಮಲಗಿದ್ದ ಮಕ್ಕಳನ್ನು ಕೊಂದ ದುಷ್ಕರ್ಮಿಗಳು

ಚಿತ್ರದುರ್ಗ, ನ.26 : ಮನೆಯಲ್ಲಿ ಮಲಗಿದ್ದ ಇಬ್ಬರು ಮಕ್ಕಳನ್ನು ಕಬ್ಬಿಣದ ರಾಡ್‌ನಿಂದ ಹೊಡೆದು ಹತ್ಯೆ ಮಾಡಿದ ಭೀಕರ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಮೊಳಕಾಲ್ಮೂರು ತಾಲೂಕಿನ ಚಿಕ್ಕುಂತಿ ಗ್ರಾಮದ ಚಂದ್ರಪ್ಪ ಅವರ ಇಬ್ಬರು ಮಕ್ಕಳನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಕೊಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಚಿಕ್ಕುಂತಿಗ್ರಾಮದ ಚಂದ್ರಪ್ಪ ಮತ್ತು ಕರಿಬಸಮ್ಮ ದಂಪತಿ ಮಕ್ಕಳಾದ ನಾಗಮೂರ್ತಿ (12) ಮತ್ತು ತಿಪ್ಪೇಶ (10) ಕೊಲೆಯಾದವರು. ಚಂದ್ರಪ್ಪ ಮತ್ತು ಕರಿಬಸಮ್ಮ ಚಳ್ಳಕೆರೆ ಬಳಿ ರತ್ನಗಿರಿಯಲ್ಲಿ ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದು, ಮಂಗಳವಾರ ಬೆಳಗ್ಗೆ ಗ್ರಾಮಕ್ಕೆ ಬಂದಿದ್ದರು.

Murder

ಮಂಗಳವಾರ ಸಂಜೆ ಚಂದ್ರಪ್ಪ ವಾಪಸ್ ತೆರಳಿದರೆ ಕರಿಬಸಮ್ಮ ಮಕ್ಕಳೊಂದಿಗೆ ಮನೆಯಲ್ಲಿದ್ದರು. ರಾತ್ರಿ ಮನೆಗೆ ನುಗ್ಗಿದ ನಾಲ್ವರು ದುಷ್ಕರ್ಮಿಗಳು ನಾಗಮೂರ್ತಿ ಮತ್ತು ತಿಪ್ಪೇಶನ ತೆಲೆಗೆ ರಾಡ್‌ನಿಂದ ಹೊಡೆದು ಕೊಲೆ ಮಾಡಿದ್ದಾರೆ. [ಚಿತ್ರದುರ್ಗದಲ್ಲಿ 156 ಅಡಿ ಎತ್ತರದ ಬಸವಣ್ಣನ ಪ್ರತಿಮೆ]

ಕೊಲೆ ಕಂಡು ಕರಿಬಸಮ್ಮ ಜೋರಾಗಿ ಕೂಗಿಕೊಂಡಾಗ ಎರಡು ಬೈಕ್‌ಗಳಲ್ಲಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಗ್ರಾಮಸ್ಥರು ಸ್ಥಳಕ್ಕೆ ಬರುವಷ್ಟರಲ್ಲೇ ತೀವ್ರ ರಕ್ತಸ್ರಾವದಿಂದಾಗಿ ಇಬ್ಬರು ಮಕ್ಕಳೂ ಮೃತಪಟ್ಟಿದ್ದರು. ಮೊಳಕಾಲ್ಮೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಚಂದ್ರಪ್ಪ ಮತ್ತು ಕರಿಬಸಮ್ಮ ಜೊತೆ ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಈರುಳ್ಳಿ ಮಾರಿ ಬರುತ್ತೇನೆ ಎಂದು ಚಿತ್ರದುರ್ಗಕ್ಕೆ ಹೋದವನು 15 ದಿನಗಳಾದರೂ ವಾಪಸ್ ಆಗಿರಲಿಲ್ಲ. ಯುವಕರಿಗೆ ಚಂದ್ರಪ್ಪ ಏನೋ ಮಾಡಿದ್ದಾನೆ ಎಂಬ ಸಂಶಯದಿಂದ ಅವರ ಮಕ್ಕಳನ್ನು ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+