ಹೊಸದುರ್ಗ: ಪೂಜಾರಿಕೆ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ
ಚಿತ್ರದುರ್ಗ, ಆಗಸ್ಟ್, 27: ಪೂಜಾರಿಕೆ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಆದ ಘಟನೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಲಕ್ಕಿಹಳ್ಳಿ ಗ್ರಾಮದ ಮುದ್ದುಲಿಂಗೇಶ್ವರ ದೇಗುಲದಲ್ಲಿ ನಡೆದಿದೆ. ಹಾಗಾದರೆ ಈ ಗಲಾಟೆ ನಡೆದಿದ್ದು ಯಾವಾಗ ಹಾಗೂ ಯಾವ ಕಾರಣಕ್ಕೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ ತಿಳಿಯಿರಿ.
ಪೂಜಾರಿಕೆ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಆಗಷ್ಟ್ 25ರ ರಾತ್ರಿ ಘರ್ಷಣೆ ನಡೆದಿದ್ದು, ಈ ದೃಶ್ಯ ಇದೀಗ ವೈರಲ್ ಆಗುತ್ತಿದೆ.

ಘಟನೆಯಲ್ಲಿ ಸೋಮಶೇಖರ್ ಎಂಬುವವರ ಮೇಲೆ ಹಲ್ಲೆ ನಡೆದಿದ್ದು, ಮುದ್ದಣ್ಣ & ಇತರರ ವಿರುದ್ಧ ದೂರು ದಾಖಲಿಸಿದ್ದಾರೆ. ಸದ್ಯ ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ ಎನ್ನಲಾಗಿದೆ.
ಹಿರಿಯ ವೈದ್ಯನಿಗೆ ವಂಚನೆ: ಸೈಬರ್ ವಂಚಕರು ಸಾಮಾನ್ಯ ಜನರನ್ನು ಬಲಿಪಶುಗಳಾಗಿಸಿಕೊಂಡು ಆನ್‌ಲೈನ್ ಮೂಲಕ ಆಸೆ, ಆಮಿಷಗಳನ್ನೊಡ್ಡಿ ಹಣ ದೋಚಿರುವ ಪ್ರಕರಣಗಳು ದಾಖಲಾದ ಉದಾಹರಣೆಗಳಿವೆ. ಆದರೆ ಇದೀಗ, TRAI & ಮುಂಬೈ ಪೊಲೀಸರೆಂದು ಹೇಳಿ ಕರೆ ಮಾಡಿದ್ದ ಸೈಬರ್ ವಂಚಕರು ಹಿರಿಯ ವೈದ್ಯರೊಬ್ಬರ ಬಳಿ 1 ಕೋಟಿ 27ಲಕ್ಷ ರೂಪಾಯಿ ವಂಚನೆ ಮಾಡಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಸೈಬರ್ ವಂಚಕರು ಚಿತ್ರದುರ್ಗದ ಹಿರಿಯ ವೈದ್ಯ ಶ್ರೀನಿವಾಸ್ ಶೆಟ್ಟಿಗೆ 1 ಕೋಟಿ 27 ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆ. ಹಾಗಾದರೆ ಇದು ಹೇಗೆ ಸಾಧ್ಯ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
TRAI & ಮುಂಬೈ ಪೊಲೀಸರೆಂದು ಹೇಳಿ ಕರೆ ಮಾಡಿ ನಿಮ್ಮ ಖಾತೆಯ ಹಣದ ಆಡಿಟ್ ಮಾಡಬೇಕಿದೆ ಎಂದು ವಾಟ್ಸಪ್ ಕಾಲ್ & ನಾರ್ಮಲ್ ಕಾಲ್ ಮಾಡಿ ನಂಬಿಸಿ ದಾಖಲೆ ಕೇಳಿದ್ದಾರೆ. ಬಳಿಕ ಅವರ ಖಾತೆಗೆ 1 ಕೋಟಿ 27 ಲಕ್ಷ ರೂಪಾಯಿ ಹಣ ವರ್ಗಾಯಿಸಿಕೊಂಡು ವಂಚನೆ ಮಾಡಿದ್ದಾರೆ ಎಂದು ಹಿರಿಯ ವೈದ್ಯ ಶ್ರೀನಿವಾಸ್ ಶೆಟ್ಟಿ ಚಿತ್ರದುರ್ಗದ CEN ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications