ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರದುರ್ಗಕ್ಕೂ ಕಾಲಿಟ್ಟಿತಾ ಎರಡನೇ ಕೊರೊನಾ ಪ್ರಭೇದ?

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಡಿಸೆಂಬರ್ 23: ಕೋಟೆನಾಡು ಚಿತ್ರದುರ್ಗಗಕ್ಕೂ ಎರಡನೇ ಅಲೆಯ ಕೊರೊನಾ ವೈರಸ್ ಭೀತಿ ಶುರುವಾಗಿದ್ದು, ವಿದೇಶದಿಂದ ಬಂದಿರುವ 8 ಜನರನ್ನು ಆರೋಗ್ಯ ಇಲಾಖೆಯಿಂದ ಪತ್ತೆ ಹಚ್ಚಲಾಗಿದೆ.

ದೇಶದಲ್ಲಿ ಕೊರೊನಾ ಸೋಂಕಿನ ಮೊದಲ ಅಲೆಯೇ ಇನ್ನೂ ಮುಗಿದಿಲ್ಲ. ಆಗಲೇ ಎರಡನೇ ಅಲೆ ಶುರುವಾಗಿದ್ದು, ಇದು ಚಿತ್ರದುರ್ಗ ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿಸಿದೆ. ಕಳೆದ 12 ದಿನಗಳ ಹಿಂದೆ ವಿದೇಶದಿಂದ ಬಂದಿರುವ 8 ಜನರಲ್ಲಿ ಹಿರಿಯೂರು 1, ಚಿತ್ರದುರ್ಗ 4 ಹಾಗೂ ಹೊಸದುರ್ಗದಲ್ಲಿ 3 ಜನರು ಎಂದು ಪತ್ತೆ ಹಚ್ಚಲಾಗಿದೆ.

Breaking News: ಡಿ.23ರಿಂದ ಕರ್ನಾಟಕದಲ್ಲಿ ನೈಟ್ ಕರ್ಫ್ಯೂ ಜಾರಿBreaking News: ಡಿ.23ರಿಂದ ಕರ್ನಾಟಕದಲ್ಲಿ ನೈಟ್ ಕರ್ಫ್ಯೂ ಜಾರಿ

8 ಜನರ ಗಂಟಲು ದ್ರವದ ಮಾದರಿಯನ್ನು ತೆಗೆದು ಲ್ಯಾಬ್ ಗೆ ಕಳುಹಿಸಿದ್ದು, ವರದಿಗಾಗಿ ಕಾಯಲಾಗುತ್ತಿದೆ. ಎಲ್ಲರದ್ದೂ ಎ ಸಿಂಪ್ಟಾಮಾಟಿಕ್ ನಲ್ಲಿದ್ದಾರೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

 Chitradurga: 8 People Arrived To Chitradurga District From Abroad Past 12 Days

Recommended Video

ವಿಜಯಪುರ: ಕೊರೊನಾ ರೂಪಾಂತರಿ ವೈರಸ್ ಆತಂಕ-ಯುಕೆಯ 6 ಜನರು ಆಗಮನ | Oneindia Kannada

ಈ 8 ಜನರಿಂದ ಸುಮಾರು 120 ಜನರನ್ನು ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿದವರನ್ನು ಕೂಡ ಪತ್ತೆ ಹಚ್ಚಲಾಗಿದೆ. ಸದ್ಯಕ್ಕೆ ನಿಗಾದಲ್ಲಿರುವ 8 ಹಾಗೂ 120 ಜನರಿಗೆ ಮನೆ ಬಿಟ್ಟು ಹೊರಗೆ ಹೋಗದಂತೆ ಸೂಚನೆ ನೀಡಿದ್ದು, ಫಲಿತಾಂಶ ಪಾಸಿಟಿವ್ ಬಂದರೆ ಅವರೆಲ್ಲರನ್ನೂ ಕೂಡ ಇನ್ಸಟಿಟ್ಯೂಷನಲ್ ಕ್ವಾರಂಟೈನ್ ಮಾಡುತ್ತೇವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

English summary
Of the 8 people who came To Chitradurga district from abroad over the past 12 days, Hiriyur 1, Chitradurga 4 and Hosadurga 3 people have been identified.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X