ಆಜಾನ್ ವೇಳೆ ಭಾಷಣ ನಿಲ್ಲಿಸಿದ್ದಕ್ಕೆ ಎದ್ದು ಹೋದ ನಟಿ ಭಾವನಾ
Recommended Video

ಚಿತ್ರದುರ್ಗ, ಮಾರ್ಚ್ 30: ಆಜಾನ್ ಮೊಳಗಿದ ವೇಳೆ ಕಾಂಗ್ರೆಸ್ ಮುಖಂಡರೊಬ್ಬರು ಭಾಷಣ ನಿಲ್ಲಿಸಿದ್ದಕ್ಕೆ ಬೇಸರಗೊಂಡ ಕೆಪಿಸಿಸಿ ಕಾರ್ಯದರ್ಶಿ, ನಟಿ ಭಾವನಾ ವೇದಿಕೆಯಿಂದಲೇ ನಿರ್ಗಮಿಸಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಯುವ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ನಟಿ ಭಾವನಾ ಅತಿಥಿಯಾಗಿ ಪಾಲ್ಗೊಂಡಿದ್ದರು. ವೇದಿಕೆ ಮೇಲೆ ಸ್ಥಳೀಯ ಮಹಿಳಾ ಮುಖಂಡರೊಬ್ಬರು ಸಮಯ್ಯಾ ತಬ್ರೀಜ್ ಭಾಷಣ ಮಾಡುತ್ತಿದ್ದರು. ಇದೇ ವೇಳೆ ಆಜಾನ್ ಮೊಳಗಿತು ಆಗ ಭಾಷಣಗಾರ್ತಿ ಆಜಾನ್‌ಗೆ ಗೌರವ ಸೂಚಿಸಿ ಭಾಷಣ ನಿಲ್ಲಿಸಿದರು.
ಸಮಯ್ಯಾ ತಬ್ರೀಜ್ ನಡೆಯಿಂದ ಸಿಟ್ಟಿಗೆದ್ದ ನಟಿ ಭಾವನಾ ಭಾಷಣ ಮುಂದುವರೆಸುವಂತೆ ಸೂಚಿಸಿದರು. ಆಗ ಯುವ ಕಾಂಗ್ರೆಸ್ ಕಾರ್ಯಕರ್ತರು ಭಾವನ ವಿರುದ್ಧ ಘೋಷಣೆ ಕೂಗಿದರು. ಇದರಿಂದ ಬೇಸರಗೊಂಡ ಭಾವನಾ ಕೊರಳಿಗೆ ಹಾಕಿಕೊಂಡಿದ್ದ ಕಾಂಗ್ರೆಸ್ ಶಾಲನ್ನು ತೆಗೆದುಹಾಕಿ ಭಾಷಣ ನಿಲ್ಲಿಸಿದ ಸಮಯ್ಯಾ ತಬ್ರೀಜ್ ಅವರನ್ನು ಬೈದು ಸಭೆಯಿಂದ ಹೊರ ನಡೆದರು.

ನಟಿ ಭಾವನಾ ಅವರ ಈ ನಡೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಪ್ರಧಾನಿ ಮೋದಿ, ಯಡಿಯೂರಪ್ಪ, ಸಿದ್ದರಾಮಯ್ಯ ಅವರುಗಳೇ ಆಜಾನ್ ಮೊಳಗುವ ವೇಳೆ ಭಾಷಣ ನಿಲ್ಲಿಸುತ್ತಾರೆ ಭಾವನಾ ಅವರೇನು ವಿಶೇಷವೇ ಎಂದು ಪ್ರಶ್ನಿಸಿದ್ದಾರೆ.
ಭಾವನಾ ಅವರಿಗೆ ಆಜಾನ್‌ಗೆ ಗೌರವ ಕೊಡುವುದು ಇಷ್ಟವಿಲ್ಲವೆಂದರೆ ಸರಿ, ಆದರೆ ಬೇರೆಯವರೂ ಆಜಾನ್‌ಗೆ ಗೌರವ ಕೊಡಬಾರದೆಂದು ಒತ್ತಾಯ ಹೇರಲು ಅವರು ಯಾರು? ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಲಾಗುತ್ತಿದೆ.
ಪ್ರಮೋದ್ ಮುತಾಲಿಕ್ ಸೇರಿದಂತೆ ಇನ್ನೂ ಕೆಲವು ಬಲಪಂಥೀಯ ಮುಖಂಡರು ಭಾವನಾ ಅವರ ನಡೆಗೆ ಬೆಂಬಲ ಸೂಚಿಸಿದ್ದು, ಭಾವನಾ ಅವರದ್ದು ದಿಟ್ಟ ನಡೆ ಎಂದಿದ್ದಾರೆ.












Click it and Unblock the Notifications