ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಂಗ್ರೆಸ್ ಶಾಸಕನೆಂದು ಬಗರ್‌ಹುಕುಂ ಸಮಿತಿ ರಚನೆ ಮಾಡಿಲ್ಲ: ಟಿ. ರಘುಮೂರ್ತಿ ಆರೋಪ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಸೆಪ್ಟೆಂಬರ್ 18: ನಾನು ಕಾಂಗ್ರೆಸ್ ಶಾಸಕ ಎನ್ನುವ ಉದ್ದೇಶದಿಂದ ನನ್ನ ಕ್ಷೇತ್ರದಲ್ಲಿ ಇದುವರೆಗೂ ಬಗರ್‌ಹುಕುಂ ಸಮಿತಿ ರಚನೆ ಮಾಡದೇ ತಾರತಮ್ಯ ಮಾಡಿದ್ದಾರೆ ಎಂದು ಚಳ್ಳಕೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ. ರಘುಮೂರ್ತಿ ಆರೋಪಿಸಿದರು.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಗರ್‌ಹುಕುಂ ಸಮಿತಿ ರಚಿಸುವಂತೆ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವನೆ ಕಳುಸಿದ್ದಾರೆ. ಆದರೆ ನಾನು ಕಾಂಗ್ರೆಸ್ ಪಕ್ಷದ ಶಾಸಕ ಎನ್ನುವ ಕಾರಣಕ್ಕೆ ಸರ್ಕಾರ ಸಮಿತಿ ತಡೆ ಹಿಡಿದಿದೆ ಎಂದರು.

ಜಿಲ್ಲೆಯಲ್ಲಿ ಐದು ತಾಲೂಕುಗಳಲ್ಲಿಯೂ ಬಿಜೆಪಿ ಶಾಸಕರಿದ್ದಾರೆ. ಅವರ ಕ್ಷೇತ್ರಗಳಲ್ಲಿ ಬಗರ್‌ಹುಕುಂ ಸಮಿತಿ ರಚಿಸಿದೆ. ಆದರೆ ನನ್ನ ಕ್ಷೇತ್ರದಲ್ಲಿ ಮಾತ್ರ ಸಮಿತಿ ರಚನೆಯಾಗಿಲ್ಲ ಎಂದು ದೂರಿದರು.

Bagar Hukum Committee Not Forming In Challakere: MLA Raghumurthy Allegation

ಚಳ್ಳಕೆರೆ ತಾಲೂಕಿನಲ್ಲಿ ಬಗರ್‌ಹುಕುಂ ಸಾಗುವಳಿಯ ಸಮಸ್ಯೆಗಳು ಬಗೆಹರಿಯದೆ ಹಾಗೆಯೇ ಉಳಿದಿದ್ದು, ಈ ಹಿಂದೆ ಇದ್ದ ತಹಶೀಲ್ದಾರ ಹಾಗೂ ಹಾಲಿ ಇರುವ ತಹಶೀಲ್ದಾರ ಸಮಸ್ಯೆ ಹಾಗೆ ಉಳಿದಿದೆ ಎಂದು ಹೇಳಿದ್ದಾರೆ. ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾಗುವಳಿ ಚೀಟಿ ಯಾವಾಗ ಕೊಡ್ತಿರಾ?, ನಾವು ಅರ್ಜಿ ಹಾಕಿದ್ವಿ ಏನು ಆಯ್ತು ಅಂತ ಸಾರ್ವಜನಿಕರು ಮತ್ತು ರೈತರು ದಿನನಿತ್ಯ ಪ್ರಶ್ನೆ ಮಾಡುತ್ತಾರೆ. ನಾನು ಅವರಿಗೆ ಏನೆಂದು ಉತ್ತರ ಹೇಳಲಿ ಎಂದರು.

ಈ ತಾರತಮ್ಯವನ್ನು ವಿಧಾನಸಭಾ ಅಧಿವೇಶನದಲ್ಲಿ ಪ್ರಶ್ನೆ ಮಾಡಲು ಪ್ರಶ್ನಾವಳಿ ಹಾಕಿದ್ದೇನೆ. ಈ ತಾರತಮ್ಯದ ಬಗ್ಗೆ ಅಧಿವೇಶನದಲ್ಲಿ ಧ್ವನಿ ಎತ್ತಲಾಗುವುದು. ಸರ್ಕಾರ ಯಾವುದೇ ಇರಲಿ ತಾರತಮ್ಯ ಮಾಡಬಾರದು ಅಭಿವೃದ್ದಿ ಕೆಲಸಗಳಿಗೆ ಅಡ್ಡಿ ಮಾಡಬಾರದು ಎಂದು ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಬೇಸರ ವ್ಯಕ್ತಪಡಿಸಿದರು.

ಅಭಿವೃದ್ಧಿಗೆ ಆದ್ಯತೆ
ನನ್ನ ತಾಲೂಕಿನಲ್ಲಿ ಬರುವ ಎಲ್ಲ ಗ್ರಾಮಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು. ತಾಲೂಕು ಆಡಳಿತ ವತಿಯಿಂದ "ಸಮಸ್ಯೆ ಮುಕ್ತ ಗ್ರಾಮದ ಕಡೆಗೆ ತಾಲೂಕು ಆಡಳಿತ ಒಂದು ಹೆಜ್ಜೆ' ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ತಾಲೂಕಿನ ದೇವರಮರಿಕುಂಟೆ ಗ್ರಾಮವನ್ನು ಸಮಸ್ಯೆ ಮುಕ್ತ ಗ್ರಾಮವನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಗ್ರಾಮಕ್ಕೆ ಮೂಲಭೂತ ಸೌಕರ್ಯ ಒದಗಿಸುವುದರ ಜೊತೆಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ರೈತರು, ಬಡವರು ಹಾಗೂ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲೇ ಪರಿಹಾರ ಒದಗಿಸುವಂತೆ ತಾಲೂಕು ಮಟ್ಟದ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಶಾಸಕಿ ಜೊತೆ ಬಗರ್‌ಹುಕುಂ ಸಮಿತಿ ಸಭೆ
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕು ಕಚೇರಿಯಲ್ಲಿ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ಕಂದಾಯ ಅಧಿಕಾರಿಗಳ ಜೊತೆಗೆ ಬಗರ್ ಹುಕುಂ ಸಮಿತಿ ಸಭೆ ನಡೆಯಿತು. ಹಿರಿಯೂರು ತಾಲ್ಲೂಕಿನಲ್ಲಿ 13 ಸಾವಿರ ಫಲಾನುಭವಿಗಳ ಅರ್ಜಿಗಳು ಬಂದಿವೆ. ಆ ಅರ್ಜಿಗಳನ್ನು ನಿಯಮಾನುಸಾರ ಪಟ್ಟಿಮಾಡಿ ಎಂದು ಮುಂದಿನ ಸಭೆಯಲ್ಲಿ ಮಂಡಿಸಲು ಅಧಿಕಾರಿಗಳಿಗೆ ಶಾಸಕಿ ಸೂಚಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಶಿವಕುಮಾರ್, ಸಮಿತಿ ಸದಸ್ಯರಾದ ಕಬಡ್ಡಿ ಶ್ರೀನಿವಾಸ, ಯಲ್ಲಪ್ಪ, ಕರಿಯಮ್ಮ ಶಿವಣ್ಣ ಹಾಗೂ ಉಪ ತಹಶೀಲ್ದಾರರು, ಕಂದಾಯ ಅಧಿಕಾರಿಗಳು ಉಪಸ್ಥಿತರಿದ್ದರು.

ಸೇಬು ಹೆಣ್ಣಿಗೆ ಮುಗಿಬಿದ್ದ ಜನರು
ಜವಾಬ್ದಾರಿಯುತ ಸಚಿವರುಗಳಿಂದಲೇ ಕೋವಿಡ್ ನಿಯಮ ಉಲ್ಲಂಘನೆ ಮಾಡಿರುವ ಘಟನೆ ಇಂದು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯಲ್ಲಿ ನಡೆದಿದೆ. ನಗರದ
ಬಳ್ಳಾರಿ ರಸ್ತೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಜಿಟಿಟಿಸಿ ಕಾಲೇಜ್ ಉದ್ಘಾಟನೆಯ ಸಮಯದಲ್ಲಿ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಹಾಗೂ ರಾಜ್ಯ ಸಚಿವರಾದ ಅಶ್ವಥ್ ನಾರಾಯಣ, ಶ್ರೀರಾಮುಲು ಭೇಟಿ ನೀಡಿದ ಸಂದರ್ಭದಲ್ಲಿ ಜನರು ಸೇಬು ಹೆಣ್ಣಿಗೆ ಮುಗಿಬಿದ್ದರು.

ಸರ್ಕಾರದ ಸಚಿವರುಗಳಿಗೆ ಜೆಸಿಬಿ ಮೂಲಕ ಬೃಹತ್ ಸೇಬಿನ ಹಾರವನ್ನು ಹಾಕುವ ರೀತಿಯಲ್ಲಿ ಮಾಡಲಾಯಿತು. ಸಚಿವರ ಮೇಲೆ ಹೂಮಳೆ ಸುರಿದರು. ಸಚಿವರುಗಳು ಕಾರ್ಯಕ್ರಮದ ವೇದಿಕೆ ಕಡೆಗೆ ಸಾಗುತ್ತಿದ್ದಂತೆ ಇತ್ತ ಜನರು ಸೇಬಿಗಾಗಿ ಮುಗಿಬಿದ್ದರು. ಮೇಲೆ ಎತ್ತಿ ಹಿಡಿದ ಸೇಬಿನ ಹಾರವನ್ನು ಕಿತ್ತುಕೊಳ್ಳಲು ಮೇಲೆ ಹಾರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

Recommended Video

ಚೆನ್ನೈ ವಿರುದ್ಧ ಮುಂಬೈ ಸೋಲಲು ರೋಹಿತ್ ಕಾರಣ ಆಗಿದ್ದು ಹೇಗೆ? | Oneindia Kannada

ಕೊನೆಗೆ ಜೆಸಿಬಿ ಯಂತ್ರವನ್ನು ಕೆಳಗೆ ಇಳಿಸುತ್ತಿದ್ದಂತೆ ಮಕ್ಕಳು, ಮಹಿಳೆಯರು, ಪುರುಷರು ಸೇಬಿಗಾಗಿ ಮುಗಿಬಿದ್ದರು. ಮಕ್ಕಳು ಕೆಳಗೆ ಬಿದ್ದರೂ ಕೂಡ ಬಿಡದೆ ಎಲ್ಲರೂ ಕೂಡ ಸೇಬನ್ನು ಕಿತ್ತಕೊಂಡರು. ಸರ್ಕಾರಿ ಕಾರ್ಯಕ್ರಮದಲ್ಲಿ ಕೋವಿಡ್ ನಿಯಮ ಉಲ್ಲಂಘನೆ ಮಾಡಿದ್ದು, ಜನರಿಗೊಂದು ನ್ಯಾಯ, ಜನಪ್ರತಿನಿಧಿಗಳಿಗೊಂದು ನ್ಯಾಯವೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

English summary
Bagar hukum committee not forming in Challakere talu has been discriminated, Congress MLA T Raghumurthy alleged.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X