Get Updates
Get notified of breaking news, exclusive insights, and must-see stories!

ಚಿತ್ರದುರ್ಗ: ಮಹಾತ್ಮಾ ಗಾಂಧಿಗೆ ದೇವಸ್ಥಾನ, ನಿತ್ಯ ಪೂಜೆ-ಪುನಸ್ಕಾರ

ಚಿತ್ರದುರ್ಗ, ಅಕ್ಟೋಬರ್ 02: ಮಹಾತ್ಮಾ ಗಾಂಧಿ ಅವರ ಪುತ್ಥಳಿಗಳು ಬಹುತೇಕ ಪ್ರತಿ ಊರಿನಲ್ಲೂ ಕಾಣಸಿಗುತ್ತವೆ. ಆದರೆ ಚಿತ್ರದುರ್ಗದಲ್ಲಿ ಮಹಾನ್ ಚೇತನನಿಗೆ ದೇಗುಲವನ್ನೇ ಕಟ್ಟಿಬಿಟ್ಟಿದ್ದಾರೆ.

ಕೋಟಿ ನಾಡು ಚಿತ್ರದುರ್ಗ ಜಿಲ್ಲೆಯ ತುರುವನೂರು ಗ್ರಾಮದಲ್ಲಿ ಮಹಾತ್ಮಾ ಗಾಂಧಿ ಅವರಿಗೆ ದೇಗುಲ ನಿರ್ಮಿಸಿ ಪ್ರತಿ ನಿತ್ಯ ಪೂಜೆ ಸಲ್ಲಿಸಲಾಗುತ್ತಿದೆ. ಈ ಸಂಪ್ರದಾಯ ಹಲವು ವರ್ಷಗಳಿಂದ ನಡೆಯುತ್ತಲೇ ಬಂದಿದೆ.

ತುರುವನೂರು ಗ್ರಾಮವು ಸ್ವತಂತ್ರ್ಯ ಹೋರಾಟದಲ್ಲಿ ತನ್ನದೇ ಛಾಪು ಮೂಡಿಸಿದ್ದ ಈ ಗ್ರಾಮ. ಜಿಲ್ಲೆಯವರೇ ಆದ ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ನೇತೃತ್ವದಲ್ಲಿ ಅನೇಕ ಸ್ವತಂತ್ರ್ಯ ಹೋರಾಟಗಳು ಇಲ್ಲಿ ನಡೆದಿವೆ.

A Temple For Mahathma Gandhi In Chitradurga

ಇದೇ ತುರುವನೂರು ಗ್ರಾಮದಲ್ಲಿ ಈಚಲ ಮರದ ಚಳುವಳಿ ಕೂಡ ನಡೆದಿದೆ. ಹಾಗಾಗಿ ಈ ಗ್ರಾಮದಿಂದ ನೂರಾರು ಜನ ಸ್ವತಂತ್ರ ಹೋರಾಟಗಾರರು ಹೋರಾಟಕ್ಕೆ ಇಳಿದಿದ್ದಾರೆ. ಸ್ವಾತಂತ್ರ್ಯ ಹೋರಾಡಿದ ಒಂದು ಸವಿನೆನಪಿಗಾಗಿ ಈ ತುರುವನೂರು ಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ನೇತಾರವಾಗಿರುವ ಮಹಾತ್ಮ ಗಾಂಧೀಜಿಯವರ ದೇವಸ್ಥಾನವನ್ನೇ ನಿರ್ಮಿಸಲಾಗಿದೆ.

ಏಳು ಅಡಿ ಎತ್ತರದ ಗಾಂಧೀಜಿಯವರ ಕಂಚಿನ ಪ್ರತಿಮೆಯು ದೆಹಲಿಯಲ್ಲಿ ಬಿಟ್ಟರೆ, ಚಿತ್ರದುರ್ಗ ಈ ತುರುವನೂರು ಗ್ರಾಮದಲ್ಲಿ ಮಾತ್ರ ಇರುವುದು ಈ ದೇಗುಲದ ವಿಶೇಷ. ಏನೆ ಆಗಲಿ ಕೋಟೆ ನಾಡು ಚಿತ್ರದುರ್ಗದಲ್ಲೋಂದು ರಾಷ್ಟ್ರಪಿತಾ ಮಹಾತ್ಮ ಗಾಂಧೀಜಿಯವರ ನೆನಪಿಗೊಂದು ದೇವಸ್ಥಾನ ನಿರ್ಮಾಣ ವಾಗಿರುವುದು ವಿಶೇಷವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+