ಚಿತ್ರದುರ್ಗ: ಇಬ್ಬರು ಯುವತಿಯರನ್ನು ಒಟ್ಟಿಗೆ ವಿವಾಹವಾದ ಭೂಪ: ಫೋಟೋ ವೈರಲ್
ಚಿತ್ರದುರ್ಗ, ಅಕ್ಟೋಬರ್ 17: ಇತ್ತೀಚಿನ ದಿನಗಳಲ್ಲಿ ಒಂದು ವಿವಾಹ ಆಗುವುದಕ್ಕೆ ಯುವಕರು ಕನ್ಯೆಗಾಗಿ ಅಲೆಯುತ್ತಿದ್ದಾರೆ. ಈ ನಡುವೆಯೇ ಇಲ್ಲೋರ್ವ ಯುವಕ ಇಬ್ಬರು ಯುವತಿಯನ್ನು ಒಂದೇ ವೇದಿಕೆಯಲ್ಲಿ ವಿವಾಹ ಆದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಸದ್ಯ ಈಗಿನ ಪರಿಸ್ಥಿತಿಯಲ್ಲಿ ವಿವಾಹ ಆಗುವುದಕ್ಕೆ ಯುವಕರಿಗೆ ಹುಡುಗಿ ಸಿಗುವುದೇ ಕಷ್ಟ ಎನ್ನುವಂತಾಗಿದೆ. ಸಿಕ್ಕರೂ ಕೂಡ ಅವರು ಇಡುವ ಬೇಡಿಕೆಗಳಿಗೆ ಗಂಡಿನ ಕಡೆಯವರು ಸುಸ್ತು ಹೊಡೆಯುತ್ತಿದ್ದಾರೆ. ಮೊದಲೆಲ್ಲಾ ಹೆಣ್ಣಿನ ಕಡೆ ವರದಕ್ಷಿಣೆ ಪಡೆಯುತ್ತಿದ್ದರು. ಆಗಂತ ಇದು ಈಗಲೂ ಇದೆ ಇನ್ನೂ ಸಂಪೂರ್ಣ ನಿರ್ಮೂಲನೆಯಾಗಿಲ್ಲ. ಆದರೆ, ಇದೀಗ ದುಡ್ಡು ಕೊಟ್ಟು ಹೆಣ್ಣು ತರುವುದೆ ಎಂಬ ಸಂಪ್ರದಾಯ ಹೆಚ್ಚಾಗಿ ಚಾಲ್ತಿಯಲ್ಲಿದೆ. ಇಂತಹ ಘಟನೆಗಳು ಪ್ರತಿನಿತ್ಯ ನಡೆಯುತ್ತಲಿರುತ್ತದೆ.

ಕಾನೂನಿನ ಪ್ರಕಾರ, ವರದಕ್ಷಿಣೆ, ವಧು ದಕ್ಷಿಣೆ ಎರಡೂ ತಪ್ಪು. ಕೊಡುವರು, ಪಡೆಯುವವರು ಇಬ್ಬರೂ ಸಹ ಶಿಕ್ಷೆಗೆ ಒಳಗಾಗುತ್ತಿದ್ದಾರೆ. ಆದರೂ ಇವುಗಳು ಇನ್ನೂ ನಿಂತಿಲ್ಲ. ಹಾಗಂತ ಎಲ್ಲಾರೂ ಇಂತಹ ದಕ್ಷಿಣೆಗಳ ಮೊರೆ ಹೋಗುತ್ತರಂತಲ್ಲ. ಕೆಲವರಲ್ಲಿ ಕೆಲವರು ಮಾತ್ರ ಇಂತಹ ದಾರಿ ಹಿಡಿಯುತ್ತಿದ್ದಾರೆ. ಇನ್ನೂ ಕೆಲವರು ಇಂತಹ ದಾರಿ ಹಿಡಿಯದೇ ಸಂಪ್ರದಾಯಬದ್ಧವಾಗಿ ವಿವಾಹ ಆಗುತ್ತಿದ್ದಾರೆ.
ಇನ್ನು ಇದೀಗ ಸದ್ಯದ ಪರಿಸ್ಥಿತಿಯಲ್ಲಿ ಮದುವೆ ಆಗುವುದಕ್ಕೆ ಕನ್ಯೆ ಸಿಗದೇ ಯುವಕರು ಪರದಾಡುತ್ತಿದ್ದಾರೆ. ಆದರೆ, ಇಲ್ಲೋರ್ವ ಯುವಕ ಏಕಕಾಲಕ್ಕೆ ಇಬ್ಬರು ಯುವತಿಯರನ್ನು ವಿವಾಹ ಆಗಿ ಅಚ್ಚರಿ ಮೂಡಿಸಿದ್ದಾರೆ.
ಈ ಘಟನೆ ಚಿತ್ರದುರ್ಗದಲ್ಲಿ ನಡೆದಿದ್ದು, ಸದ್ಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿವೆ.
ಗೋವಾದಲ್ಲಿ ಕೆಲಸ ಮಾಡುತ್ತಿರುವ ಯುವಕ ವಸೀಮ್ ಇಬ್ಬರು ಯುವತಿಯರನ್ನ ಮದುವೆ ಆಗಿದ್ದಾನೆ. ಇಬ್ಬರು ಯುವತಿಯರ ಜೊತೆ ವಸೀಮ್‌ಗೆ ಪ್ರೇಮಾಂಕುರ ಆಗಿದ್ದು, ಇದೀಗ ಇಬ್ಬರು ಯುವತಿಯರ ಒಪ್ಪಿಗೆ ಮೇರೆಗೆ ಇಬ್ಬರನ್ನೂ ವರಿಸಿದ್ದಾನೆ. ಇದಕ್ಕೆ ಸಾಕ್ಷಿ ಎಂಬಂತೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ಇನ್ನೂ ಈ ಫೋಟೊಗಳನ್ನು ನೋಡಿದ ಹುಡುಗಿ ಹುಡುಕಾಟದಲ್ಲಿರುವ ಕೆಲವರು ಏನ್ ಗುರು.. ನಾವು ಎಷ್ಟೆಲ್ಲಾ ಹುಡುಕಿದ್ರೂ ನಮ್ಗೆ ಕನ್ಯೆ ಸಿಗುತ್ತಿಲ್ಲ. ಇಂತಹದ್ದರ ನಡುವೆ ಇವನು ಇಬ್ಬರು ಯುವತಿಯರನ್ನು ಮದುಯಾಗಿಬಿಟ್ಟಿದ್ದಾನೆ ಎಂದು ನೊಂದುಕೊಂಡು ಕಾಮಿಡಿ ಮಾಡುತ್ತಿದ್ದಾರೆ.
ಮತ್ತೊಂದೆಡೆ, ಇನ್ನೂ ಕೆಲವರು ಇವರ ಜೋಡಿಯನ್ನು ನೋಡಿ ಅಚ್ಚರಿ ಪಟ್ಟುಕೊಳ್ಳುವುದರ ಜೊತೆ ಶುಭ ಹಾರೈಸುತ್ತಿದ್ದಾರೆ. ಕೊನೆವರ್ಗೂ ದೇವರು ನಿಮ್ಮನ್ನ ಚೆನ್ನಾಗಿ ಇಟ್ಟಿರಲಿ.. ಯಾರ ಕಣ್ಣು ನಿಮ್ಮ ಜೀವನದ ಮೇಲೆ ಬೀಳದಿರಲಿ ಎಂದು ಹಾರೈಸಿದ್ದಾರೆ.












Click it and Unblock the Notifications