ಚಿತ್ರದುರ್ಗದಲ್ಲಿ ಅಪಘಾತ: ತಮಿಳುನಾಡಿನ ಐವರು ಬಲಿ
ಚಿತ್ರದುರ್ಗ, ಜೂನ್ 20: ಚಿತ್ರದುರ್ಗದ ಹಿರಿಯೂರು ಬಳಿ ಇಂದು ಬೆಳಗ್ಗಿನ ಜಾವ ಸಂಭವಿಸಿಸದ ಭೀಕರ ಅಪಘಾತದಲ್ಲಿ ಐವರು ಮೃತರಾಗಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗೋವಾದಿಂದ ತಮಿಳುನಾಡಿಗೆ ತೆರಳುತ್ತಿದ್ದ ಕಾರು ಹಿರಿಯೂರು ಸಮೀಪ ಜವಗೊಂಡನಹಳ್ಳಿಯಲ್ಲಿ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.
ಮೃತರನ್ನು ಸದ್ದಾಂ ಹುಸೇನ್(22), ಸದ್ದಾಂ(21), ತೌಸಿಫ್ ಅಹಮ್ಮದ್(24), ಶಾರೂಕ್(20) ಮತ್ತು ಆಸಿಫ್(21) ಎಂದು ಗುರುತಿಸಲಾಗಿದೆ.

ನಾಲ್ಕು ಜನ ಸ್ಥಳದಲ್ಲೇ ಮೃತರಾಗಿದ್ದರೆ, ಆಸಿಫ್ ಅವರನ್ನು ಆಸ್ಪತ್ರೆಗೆ ಸೇರಿಸಿದ ನಂತರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತರೆಲ್ಲರೂ ತಮಿಳುನಾಡು ಮೂಲದವರೆಂದು ತಿಳಿದುಬಂದಿದೆ.












Click it and Unblock the Notifications