ಕೆಂಡ ಹಾಯುವಾಗ ದೇವರ ಮೂರ್ತಿಯೊಂದಿಗೆ ಬಿದ್ದ ಭಕ್ತರು
ಚಿತ್ರದುರ್ಗ, ಅಕ್ಟೋಬರ್ 30: ಜಾತ್ರೆಯಲ್ಲಿ ಕೆಂಡ ಹಾಯುವಾಗ ದೇವರ ಉತ್ಸವಮೂರ್ತಿ ಸಮೇತ ಭಕ್ತರು ಕೆಂಡದಲ್ಲಿ ಬಿದ್ದಿರುವ ಘಟನೆ ನಡೆದಿದೆ. ಮಾಡನಾಯಕನಹಳ್ಳಿ ಗ್ರಾಮದ ಕೊಲ್ಲಾಪುರದಮ್ಮ ದೇವಿ ಉತ್ಸವ ನಡೆಯುವ ವೇಳೆ ಈ ಅವಘಡ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.
ಚಿತ್ರದುರ್ಗ ತಾಲೂಕಿನ ಮಾಡನಾಯಕನಹಳ್ಳಿ ಈ ಘಟನೆ ನಡೆದಿದೆ. ಕೊಲ್ಲಾಪುರದಮ್ಮ ದೇವಿ ಜಾತ್ರಾ ಮಹೋತ್ಸವ ಹಾಗೂ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಮಂಗಳವಾರ ಕೆಂಡ ಹಾಯುವ ಉತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭ ಕೆಂಡ ಹಾಯುವಾಗ ದೇವರ ಮೂರ್ತಿಯೊಂದಿಗೆ ಮೂರ್ತಿ ಹೊತ್ತವರೂ ಬಿದ್ದಿದ್ದಾರೆ. ಘಟನೆಯಲ್ಲಿ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಗಾಯಾಳುಗಳಾದ ಮೂರ್ತಿ, ಮಲ್ಲಿಕಾರ್ಜುನ, ಧನಂಜಯ ಎಂಬುವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ತುರುವನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.












Click it and Unblock the Notifications