ಕಡೂರು ಕವಿತಾಳನ್ನು ಕೊಂದಿದ್ದು ಆಕೆಯ ಗಂಡನೇ!

ಚಿಕ್ಕಮಗಳೂರು, ಫೆಬ್ರವರಿ 22 : ಕಡೂರಿನ ದಂತವೈದ್ಯನ ಪತ್ನಿ ಕೊಲೆ ಹಾಗೂ ಗಂಡನ ಆತ್ಮಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.

ಫೆ 17 ರಂದು ಕಡೂರಿನ ಲಕ್ಮೀಶ ನಗರದ ಡಾ. ರೇವಂತ್ ಮನೆಯಲ್ಲಿ ದರೋಡೆಯಾಗಿತ್ತು ಈ ವೇಳೆ ದಂತ ವೈದ್ಯ ರೇವಂತ್ ಪತ್ನಿ ಕವಿತಾರನ್ನು ಕತ್ತು ಸೀಳಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ಡಾ. ರೇವಂತ್ ಕಡೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಪೊಲೀಸರು ತನಿಖೆ ಚುರುಕುಗೊಳಿಸಿದ ಬೆನ್ನಲ್ಲೇ ಶನಿವಾರ ಡಾ ರೇವಂತ್ ಸಹ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡುಕೊಂಡಿದ್ದರಿಂದ ಈಗ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಡಾ ರೇವಂತ್ ಗೆ ಬೆಂಗಳೂರು ಮೂಲದ ಯುವತಿಯೊಂದಿಗೆ ಆಕ್ರಮ ಸಂಬಂಧ ಇತ್ತು ಎನ್ನಲಾಗಿದೆ. ಈ ಸಂಬಂಧ ಮನೆಯಲ್ಲಿ ಮನಸ್ತಾಪ ಉಂಟಾಗಿತ್ತು ಎನ್ನಲಾಗಿದೆ.

Women Murder In Kadur Taluk, Her Husband Accused In Case

ಅಕ್ರಮ ಸಂಬಂಧ ಗೊತ್ತಾಗಿದ್ದಕ್ಕೆ ರೇವಂತ್ ಫೆಬ್ರವರಿ 17 ರಂದು ಸ್ವತ: ತಾವೇ ಪತ್ನಿ ಕವಿತಾಗೆ ಇಂಜೆಕ್ಷನ್ ನೀಡಿ ಕತ್ತು ಸೀಳಿ ಕೊಲೆ ಮಾಡಿದ್ದು ಮರಣೋತ್ತರ ಪರೀಕ್ಷೆಯಲ್ಲಿ ಸಾಭೀತಾಗಿದೆ. ಪೊಲೀಸರು ಬಂಧಿಸುತ್ತಾರೆ ಎಂದು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+