ಚಿಕ್ಕಮಗಳೂರಿನಲ್ಲಿ ನ್ಯಾಶನಲ್ ಬೈಕ್ ರ್ಯಾಲಿ: ರೇಸಿಂಗ್‌ನಲ್ಲಿ ಬಿಗ್‌ಬಾಸ್ ಖ್ಯಾತಿಯ ಐಶ್ವರ್ಯಾ ಪಿಸೆ
ಚಿಕ್ಕಮಗಳೂರು, ಮೇ 26: ದಿ ಮೋಟಾರ್ ಸ್ಪೋಟ್ಸ್ ಕ್ಲಬ್ ಚಿಕ್ಕಮಗಳೂರು ವತಿಯಿಂದ ಮೇ.27 ಮತ್ತು 28 ರಂದು ದ್ವಿಚಕ್ರ ವಾಹನ ಎರಡನೇ ಸುತ್ತಿನ ರಾಷ್ಟ್ರೀಯ ರ್ಯಾಲಿ ಆಫ್ ಚಿಕ್ಕಮಗಳೂರು ಆಯೋಜಿಸಲಾಗಿದೆ ಎಂದು ಅಭಿಜಿತ್ ಪೈ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡ ಅವರು, ಮೊದಲ ಸುತ್ತಿನ ರ್ಯಾಲಿ ಕೊಡಗಿನಲ್ಲಿ ಮುಕ್ತಾಯಗೊಂಡಿದ್ದು, ಎರಡನೇ ಸುತ್ತು ಚಿಕ್ಕಮಗಳೂರು ಜಿಲ್ಲೆಯ ವಸಂತ್‍ಕೂಲ್ ಮತ್ತು ತಿಪ್ಪನಹಳ್ಳಿ ಎಸ್ಟೇಟ್‌ನಲ್ಲಿ ಹಮ್ಮಿಕೊಳ್ಳಲಾಗಿದೆ. ನಂತರದ ಸುತ್ತುಗಳು ಕೊಯಮತ್ತೂರು, ಬೆಂಗಳೂರು ಹಾಗೂ ನಾಸಿಕ್‌ನಲ್ಲಿ ನಡೆಯಲಿವೆ ಎಂದು ಮಾಹಿತಿ ನೀಡಿದರು.

ಈ ರ್ಯಾಲಿಯನ್ನು ಎಂಆರ್ಎಫ್ ಪ್ರಾಯೋಜಿಸಿದರೆ, ಸಹ ಪ್ರಾಯೋಜಕತ್ವನ್ನು ದಿ ಮೋಟಾರ್ ಸ್ಪೋಟ್ಸ್ ಕ್ಲಬ್ ಮತ್ತು ಅಲ್ಲಂಪುರದ 7 ಹೆವೆನ್ ವಿಲ್ಲ ಮತ್ತು ರೆಸಾರ್ಟ್ ವಹಿಸಿಕೊಂಡಿವೆ. ರಾಷ್ಟ್ರೀಯ ದ್ವಿಚಕ್ರವಾಹನ ರ್ಯಾಲಿ ಮೇ. 27 ರಂದು ಸಂಜೆ 5ಗಂಟೆಗೆ ಸಾಂಕೇತಿಕವಾಗಿ ಉದ್ಘಾಟನೆಗೊಳ್ಳುತ್ತಿದ್ದು, ಶಾಸಕ ಎಚ್.ಡಿ.ತಮ್ಮಯ್ಯ ರ್ಯಾಲಿಗೆ ಚಾಲನೆ ನೀಡಲಿದ್ದಾರೆ. ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ಭಾಗವಹಿಸಲಿದ್ದಾರೆ ಎಂದರು.
ರ್ಯಾಲಿ 8 ಸ್ಟೇಜ್‍ಗಳನ್ನು ಹೊಂದಿದ್ದು, ವಸಂತ್‍ಕೂಲ್ ಎಸ್ಟೇಟ್‌ನಲ್ಲಿ ಮೇ.28 ರಂದು ಬೆಳಿಗ್ಗೆ 6 ಗಂಟೆಗೆ ಸ್ಪರ್ಧೆ ಆರಂಭಗೊಳ್ಳುತ್ತಿದ್ದು, ಒಟ್ಟು 8 ಕಿ.ಮೀ., ತಿಪ್ಪನಹಳ್ಳಿಯಲ್ಲಿ 6 ಕಿ.ಮೀ. ಸೇರಿದಂತೆ ಒಟ್ಟು 14 ಕಿ.ಮೀ. ರ್ಯಾಲಿ ನಡೆಯಲಿದೆ. ಫೈನಲ್‍ಸ್ಟೇಜ್ 4 ಬಾರಿ ನಡೆಯಲಿದೆ. ಸ್ಪೆಷನ್ ಸ್ಟೇಜ್ 56 ಕಿ.ಮೀ., ಟ್ರಾನ್ಸ್‍ಪೋರ್ಟ್ 82 ಕಿ.ಮೀಟರ್ ಆಗಿದ್ದು, ಒಟ್ಟು 138 ಕಿ.ಮೀ. ರ್ಯಾಲಿ ಕ್ರಮಿಸಲಿದೆ ಎಂದು ತಿಳಿಸಿದರು.

ಶಿವಮೊಗ್ಗ ಟಿವಿಎಸ್ ರೇಸಿಂಗ್‍ನ ಆರ್.ಇ.ರಾಜೇಂದ್ರ, ಬೆಂಗಳೂರು ಟಿ.ವಿ.ಎಸ್ ರೇಸಿಂಗ್‍ನ ಆರ್. ನಟರಾಜ್, ಹೀರೋ ರೇಸಿಂಗ್‍ನ ಯುವರಾಜ್ ಮತ್ತು ಸತ್ಯರಾಜ್ ಮೈಸೂರು, ಟಿವಿಎಸ್ ರೇಸಿಂಗ್‍ನ ಅಬ್ದುಲ್ ತನ್ವಿರ್, ಬೆಂಗಳೂರಿನ ನರೇಶ್, ಸಚಿನ್, ಕೊಯಮತ್ತೂರಿನ ವೇಣು ರಮೇಶ್ ಕುಮಾರ್, ತಮಿಳುನಾಡಿನ ಶರತ್ ಮೋಹನ್, ಜಾವಾ ರೇಸಿಂಗ್‌ನ ಹೇಮಂತ್‌ಗೌಡ, ಎಸ್.ಭರತ್, ಕುಲುವಿನ ಹ್ಯಾಪಿವರ್ಮ, ನಿತೀಶ್ ಭರದ್ವಾಜ್, ಡೆಹರಡೂನ್ ನಿಂದ ದೃತಿಮಾನಸಿಂಗ್, ಲೂದಿಯಾನದ ಸೌರಭ್ ಹಾಂಡಾ, ಊಟಿಯ ರಷೀದ್ ಖಾದರ್, ಉತ್ತರಖಂಡದ ಅಖಂಡ ಪ್ರತಾಪ್‌ಸಿಂಗ್ ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ.
ಬೆಂಗಳೂರು ಟಿವಿಎಸ್ ರೇಸಿಂಗ್‌ನ ಐಶ್ವರ್ಯ ಪಿಸೆ, ಸತಾರ್‌ನ ತನಿಕಶಾನುಭೋಗ್, ಮಂಗಳೂರಿನ ಬಿ.ಅಪೂರ್ವ, ತಮಿಳುನಾಡಿನ ರಿಹನಾ, ತ್ರಿಶೂರ್‍ನಿಂದ ಸಿ.ಸಿ.ಸ್ನೇಹಾ, ಪುಣೆಯಿಂದ ಅನಮ್‍ಹಶೀಮ್ ಪ್ರಮುಖ ಮಹಿಳಾ ಸವಾರರಾಗಿದ್ದಾರೆ. ಸ್ಥಳೀಯರಿಗೆ ಪ್ರತ್ಯೇಕ ವಿಭಾಗವಿದ್ದು, ಚಿಕ್ಕಮಗಳೂರಿನಿಂದ ಅಸದ್ ಖಾನ್, ದಿಲೀಪ್ ರಾಜ್, ಫ್ರಾನ್ಸಿಸ್, ಜೆ.ಪಿ.ಪೂರಬ್ ಮತ್ತು ಮಹ್ಮದ್, ಅಜರುದ್ದೀನ್ ರ್ಯಾಲಿಯಲ್ಲಿ ಭಾಗಿಯಾಲಿದ್ದಾರೆ.












Click it and Unblock the Notifications