ಬೀರೂರು ಮತ್ತು ಅರಸೀಕೆರೆಯಲ್ಲಿ ಹಲವು ರೈಲುಗಳ ನಿಲುಗಡೆ

ಚಿಕ್ಕಮಗಳೂರು, ಜನವರಿ 03 : ತಿಪಟೂರು, ಬೀರೂರು ಮತ್ತು ಅರಸೀಕೆರೆಯಲ್ಲಿ ಹಲವು ರೈಲುಗಳ ನಿಲುಗಡೆಗೆ ಆದೇಶ ನೀಡಲಾಗಿದೆ. ನೈಋತ್ಯ ರೈಲ್ವೆ ಈ ಕುರಿತು ಅಧಿಕೃತ ಆದೇಶವನ್ನು ಹೊರಡಿಸಿದೆ.

ರೈಲ್ವೆ ಖಾತೆ ರಾಜ್ಯ ಸಚಿವ ಮತ್ತು ಬೆಳಗಾವಿಯ ಬಿಜೆಪಿ ಸಂಸದ ಸುರೇಶ್ ಅಂಗಡಿ ಗುರುವಾರ ಹುಬ್ಬಳ್ಳಿಯಿಂದ ತುಮಕೂರು ತನಕ ರೈಲ್ವೆ ಮಾರ್ಗದ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ಹಲವು ಸೂಚನೆ ನೀಡಿದರು.

ಸಚಿವರು ರೈಲು ಸಂಖ್ಯೆ 12089/90 ಯಶವಂತಪುರ- ಶಿವಮೊಗ್ಗ ಟೌನ್ ಜನಶತಾಬ್ದಿ ಎಕ್ಸ್‌ಪ್ರೆಸ್‌ ರೈಲನ್ನು ಬೀರೂರು ಮತ್ತು ಅರಸೀಕೆರೆಯಲ್ಲಿ ನಿಲ್ಲಿಸಲು ಸೂಚನೆ ನೀಡಿದರು. ಜನವರಿ 3 ರಿಂದ ಜುಲೈ 2, 2020 ತನಕ ನಿಲ್ಲಿಸಲು ನಿರ್ದೇಶನ ನೀಡಿದರು.

Various Train Stop At Birur And Arsikere

ಮೈಸೂರು-ಸೋಲಾಪುರ ಗೋಲ್ ಗುಂಬಜ್ ರೈಲನ್ನು ತಿಪಟೂರಿನಲ್ಲಿ ನಿಲ್ಲಿಸಲು ಸೂಚನೆ ನೀಡಲಾಗಿದೆ. ಜನವರಿ 3ರಿಂದ ಜುಲೈ 2, 2020ರ ತನಕ ರೈಲುಗಳನ್ನು ನಿಲ್ಲಿಸಲಾಗುತ್ತದೆ.

ಯಶವಂತಪುರ-ಪಂಢರಪುರ-ಯಶವಂತಪುರ ರೈಲು ಸಂಖ್ಯೆ 16541/42 ಎಕ್ಸ್‌ಪ್ರೆಸ್ ರೈಲನ್ನು ಬೀರೂರಿನಲ್ಲಿ ನಿಲ್ಲಿಸಲು ಸೂಚನೆ ನೀಡಲಾಗಿದೆ. ಜನವರಿ 3ರಿಂದ ರೈಲುಗಳು ನಿಲುಗಡೆಗೊಳ್ಳಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+