ಟಿಕ್ ಟಾಕ್ ನಿಂದ ಪಿಎಂ ಕೇರ್ಸ್ ಫಂಡ್ ಗೆ 30 ಕೋಟಿ: ಮೊದಲು ಅದನ್ನು ವಾಪಸ್ ಕೊಡಿ
ಮಂಗಳೂರು, ಜುಲೈ 3: "ಚೀನಾದ ಆ್ಯಪ್ ನಿಷೇಧಿಸಿರುವುದರಿಂದ ಆ ದೇಶಕ್ಕೂ ನಷ್ಟವಿಲ್ಲ, ನಮ್ಮ ದೇಶಕ್ಕೂ ಏನೂ ಲಾಭವಿಲ್ಲ"ಎಂದು ಮಾಜಿ ಸಚಿವ, ಮಂಗಳೂರು (ಉಳ್ಳಾಲ) ಶಾಸಕ ಯು.ಟಿ.ಖಾದರ್ ಅಭಿಪ್ರಾಯ ವ್ಯಕ್ತ ಪಡಿಸಿದರು.
Recommended Video
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಖಾದರ್, "ಚೀನಾದ 59 ಆ್ಯಪ್ ಗಳನ್ನು ನಿಷೇಧಿಸಲಾಗಿದೆ. ಅದರಲ್ಲಿ ಟಿಕ್ ಟಾಕ್ ಕೂಡಾ ಒಂದು. ಆ ಸಂಸ್ಥೆಯಿಂದ, ಭಾರೀ ಮೊತ್ತದ ಹಣ, ಪ್ರಧಾನಮಂತ್ರಿ ಕೇರ್ಸ್ ಫಂಡ್ ಗೆ ಬಂದಿಲ್ಲವೇ"ಎಂದು ಪ್ರಶ್ನಿಸಿದರು.
"ಟಿಕ್ ಟಾಕ್ ನಿಂದ ಬಂದಿರುವ ಮೂವತ್ತು ಕೋಟಿ ರೂಪಾಯಿಯನ್ನು ಮೊದಲು ಹಿಂದಿರುಗಿಸಲಿ. ಆ ಹಣವನ್ನು ಇಟ್ಟುಕೊಳ್ಳುವುದಕ್ಕೆ ನಾಚಿಕೆಯಾಗಬೇಕು"ಎಂದು ಯು.ಟಿ.ಖಾದರ್ ಅಭಿಪ್ರಾಯ ವ್ಯಕ್ತ ಪಡಿಸಿದರು.

"ನಿಷೇಧಿಸಿರುವ ಚೀನಾ ಆ್ಯಪ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಭಾರತೀಯರ ಪರಿಸ್ಥಿತಿ ಏನಾಗಬೇಕು. ಅವರ ಕೆಲಸದ ಜವಾಬ್ದಾರಿಯನ್ನು ಕೇಂದ್ರ ಸರಕಾರ ವಹಿಸಿಕೊಳ್ಳುತ್ತದೆಯೇ"ಎನ್ನುವ ಪ್ರಶ್ನೆಯನ್ನು ಖಾದರ್ ಈ ಸಂದರ್ಭದಲ್ಲಿ ಎತ್ತಿದರು.
"ಭಾರತದ ಈ ನಿರ್ಧಾರದಿಂದ ಚೀನಾ ಮುಸಿಮುಸಿ ನಗುತ್ತಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಮಾನ ಮರ್ಯಾದೆಯನ್ನು ಪಿಎಂ ಮೋದಿ ಹರಾಜು ಹಾಕಿದ್ದಾರೆ"ಎಂದು ಖಾದರ್ ಹೇಳಿದರು.












Click it and Unblock the Notifications