'ಈ ಅರಣ್ಯಕ್ಕೆ ದೇವರ ಕಾವಲಿದೆ ಎಚ್ಚರಿಕೆ', ಕಾಡಿನಲ್ಲಿ ಕಂಡ ಬ್ಯಾನರ್
ಚಿಕ್ಕಮಗಳೂರು, ಏಪ್ರಿಲ್ 22: ಈ ನಡುವೆ ಅರಣ್ಯಕ್ಕೆ ಬೆಂಕಿ ಹಚ್ಚುವವರು ಅಧಿಕವಾಗಿದ್ದಾರೆ. ಹೀಗಾಗಿ ಇಂಥ ಕಿಡಿಗೇಡಿತನದ ಕೃತ್ಯಗಳನ್ನು ತಡೆಯಲು ಸ್ಥಳೀಯರೇ ಮುಂದಾಗಿದ್ದಾರೆ. ಇದು ಬೇಸಿಗೆಕಾಲ. ಈ ವೇಳೆ ಕಿಡಿಗೇಡಿಗಳು ತಮ್ಮ ಕಿಡಿಗೇಡಿತನ ಪ್ರದರ್ಶಿಸುವುದು ಅಧಿಕ. ಹೀಗಾಗಿ ಇಂತವರಿಗೆ ಪಾಠ ಪಾಠಕಲಿಸಿಲು ಸ್ಥಳೀಯರೇ ಮುಂದಾಗಿದ್ದಾರೆ. ಕಾಡಿಗೆ ಬೆಂಕಿ ಹಚ್ಚುವವವರಿಗೆ ಕಾಡಿನಲ್ಲಿ ಬ್ಯಾನರ್ ಹಾಕುವ ಮೂಲಕ ಬೆದರಿಕೆ ಹುಟ್ಟಿಸಿದ್ದಾರೆ ಸ್ಥಳೀಯರು.
ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ಹಾಕಲಾದ ಬ್ಯಾನರ್‌ನಲ್ಲಿ ಈ ರೀತಿ ಬರೆಯಲಾಗಿದೆ. 'ಸಿಂದಿಗೆರೆ ಮೀಸಲು ಅರಣ್ಯಕ್ಕೆ ಬೆಂಕಿ ಹಾಕುವವರ ಜೀವನ ಸರ್ವನಾಶವಾಗಲೆಂದು ಶ್ರೀ ರೇವಣಸಿದ್ದೇಶ್ವರ ಹಾಗೂ ಪುರದಮ್ಮ ದೇವರಲ್ಲಿ ಹರಕೆ ಹೋರಲಾಗಿದೆ. ಈ ಅರಣ್ಯಕ್ಕೆ ದೇವರ ಕಾವಲಿದೆ ಎಚ್ಚರಿಕೆ' ಎಂದು ಅರಣ್ಯದಲ್ಲಿ ಬ್ಯಾನರ್ ಹಾಕಿರುವ ಅಪರೂಪದ ಘಟನೆಗೆ ತಾಲೂಕಿನ ಸಿಂದಿಗೆರೆ ಮೀಸಲು ಅರಣ್ಯ ವಿಭಾಗ ಮುನ್ನಲೆಗೆ ಬಂದಿದೆ.
ಮೂಢನಂಬಿಕೆಯಿಂದ ಕಾಡಿಗೆ ಬೆಂಕಿ
ಉದ್ದೇಶಪೂರ್ವಕವಾಗಿಯೂ ಇಲ್ಲ ಸುಖಾ ಸುಮ್ಮನೆ ಕಾಡಿಗೆ ಬೆಂಕಿ ಹಚ್ಚಿದ ಘಟನೆಗಳು ನೂರಾರು ನಡೆದಿವೆ. ಕೆಲವರು ಯಾವುದೇ ಮೂಢನಂಬಿಕೆಯಿಂದ ಕಾಡಿಗೆ ಬೆಂಕಿ ಹಚ್ಚಿರೋದಿದೆ. ಹೀಗಾಗಿ ಕಾಡಿಗೆ ಬೆಂಕಿವವರಿಗೆ ಬುದ್ದಿ ಕಲಿಸಲು ಸಿಂದಿಗೆರೆ ಮೀಸಲು ಅರಣ್ಯ ವ್ಯಾಪ್ತಿಯ ದೇವಗೊಂಡನಹಳ್ಳಿ, ಕರಡಿಗವಿಮಠ, ಸಿಂದಿಗೆರೆ, ಎಸ್.ಬಿದರೆ, ಭೂಚೇನಹಳ್ಳಿ ಕಾವಲ್‍ನ ಹಲವು ಕಡೆಗಳಲ್ಲಿ ಈ ರೀತಿಯ ಬ್ಯಾನರ್ ಹಾಕಿ, ಕಿಡಿಗೇಡಿಗಳಿಗೆ ಭಯ ಹುಟ್ಟಿಸಿದ್ದಾರೆ.

ಕಾಡಿಗೆ ಬೆಂಕಿ ಹಚ್ಚುವವರಿಂದ ಕಾಡನ್ನು ರಕ್ಷಿಸಲು ಅರಣ್ಯ ಇಲಾಖೆ ಪಡುತ್ತಿರುವ ಪಾಡು ಅಷ್ಟಿಷ್ಟಲ್ಲ. ಹೀಗಾಗಿ ಅರಣ್ಯ ಅಧಿಕಾರಿಗಳು, ಕೇಸ್‍ಗೆಲ್ಲಾ ಹೆದರದವರು ದೇವರಿಗದರೂ ಹೆದರಿ ಬೆಂಕಿ ಹಾಕುವುದನ್ನು ನಿಲ್ಲಿಸಲಿ ಎಂದು ಈ ರೀತಿಯ ಬ್ಯಾನರ್ ಹಾಕಲಾಗಿದೆ. ಈಗಾಗಲೇ ಅರಣ್ಯಕ್ಕೆ ಬೆಂಕಿ ಬೀಳುವುದನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಹಲವು ಯೋಜನೆಗಳನ್ನ ಜಾರಿಗೆ ತಂದಿದೆ. ಇಲಾಖಾ ವ್ಯಾಪ್ತಿಯ ಜೊತೆ ಸಾರ್ವಜನಿಕರಿಗೆ ಜಾಗೃತಿಯನ್ನೂ ಮೂಡಿಸಿದ್ದಾರೆ. ಆದರೂ, ಕಿಡಿಗೇಡಿಗಳ ಕೃತ್ಯಕ್ಕೆ ಹಾಗೂ ಮೂಡನಂಬಿಕೆಗೆ ಅರಣ್ಯ ಬಲಿಯಾಗುತ್ತಿದೆ. ಹಾಗಾಗಿ, ಸಿಂದಿಗೆರೆ ಗ್ರಾಮದ ಜನ ಅರಣ್ಯ ರಕ್ಷಣೆ ದೇವರ ಮೊರೆ ಹೋಗಿರುವುದು ನಿಜಕ್ಕೂ ಆಶ್ಚರ್ಯ ಮೂಡಿಸಿದೆ.

ಇತ್ತೀಚೆಗೆ ಡ್ರೋನ್ ಮೂಲಕ ಅರಣ್ಯ ಇಲಾಖೆ ಬೆಂಕಿ ಅವಘಡಗಳನ್ನ ನಿಯಂತ್ರಿಸುವ ಕಾರ್ಯಗಳನ್ನು ಮಾಡುತ್ತಿತ್ತು. ಸೂಕ್ಷ್ಮ ಪ್ರದೇಶದಲ್ಲಿ ಡ್ರೋನ್ ಹಾರಿಸಿ ಕಾಡಿಗೆ ಬೆಂಕಿ ಹಾಕುವವರ ಮೇಲೆ ನಿಗಾ ವಹಿಸಿತ್ತು. ಆದರೂ ಸಿಂದಿಗೆರೆ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಪ್ರತಿ ಬಾರಿ ಕಿಡಿಗೇಡಿಗಳ ಕೃತ್ಯ ನಡೆಯುತ್ತಲೇ ಇದೆ. ಈ ಕಾಡಿಗೆ ಬೆಂಕಿ ಹಾಕುವ ಪ್ರಕರಣಗಳು ಅಲ್ಲಲ್ಲಿ ಕಂಡು ಬರುತ್ತಲೇ ಇವೆ. ಹಾಗಾಗಿ ಸ್ಥಳಿಯರು ಈ ಹೊಸ ದಾರಿಯ ಮೂಲಕ ಅರಣ್ಯ ರಕ್ಷಣೆಗೆ ಮುಂದಾಗಿದ್ದಾರೆ. ಇದು ಅದೆಷ್ಟರಮಟ್ಟಿಗೆ ಯಶಸ್ವಿಯಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.












Click it and Unblock the Notifications