ಚಿಕ್ಕಮಗಳೂರು ಪೊಲೀಸರ ಕಾರ್ಯಾಚರಣೆ: ದುಬಾರಿ ಟೆಲಿಸ್ಕೋಪ್‌, 20 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಚಿಕ್ಕಮಗಳೂರು, ಜನವರಿ 9: ಮರದಿಂದಲೇ ನಿರ್ಮಾಣವಾದ 1915ನೇ ಇಸವಿಯ ವಿಕ್ಟೋರಿಯಾ ರಾಣಿ ಕಾಲದ ದುಬಾರಿ ಬೆಲೆಯ ಟೆಲಿಸ್ಕೋಪ್‌ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನ ಚಿಕ್ಕಮಗಳೂರು ಜಿಲ್ಲೆ ಕಡೂರು ಪೊಲೀಸರು ಬಂಧಿಸಿದ್ದಾರೆ.

ಮೈಸೂರಿನ ಹೆಬ್ಬಾಳ ಸಮೀಪದ ನಿವಾಸಿ ಕೆಂಪರಾಜ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಬಂಧಿತನಿಂದ ಕೊಳವೆ ರೀತಿಯ ಉದ್ದವಾದ ಸುಮಾರು ಎರಡು ಅಡಿಗೂ ಉದ್ದವಿರುವ ಟೆಲಿಸ್ಕೋಪ್‌ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಟೆಲಿಸ್ಕೋಪ್ ವಿಕ್ಟೋರಿಯಾ ರಾಣಿ ಕಾಲದ ವಿಕ್ಟೋರಿಯನ್ ಮೆರಿನ್ ಟೆಲಿಸ್ಕೋಪ್ ಎಂದು ತಿಳಿದು ಬಂದಿದೆ. ರಿಯಲ್ ಎಸ್ಟೇಟ್ ಕೆಲಸವನ್ನು ಮಾಡುವ ಬಂಧಿತ ಕೆಂಪರಾಜು ಈ ಟೆಲಿಸ್ಕೋಪ್‌ಅನ್ನು ಮೈಸೂರಿನಲ್ಲಿ ಕಡಿಮೆ ಬೆಲೆಗೆ ಖರೀದಿ ಮಾಡಿದ್ದನು. ಅದನ್ನ ಚಿಕ್ಕಮಗಳೂರು ಜಿಲ್ಲೆ ಕಡೂರಿನ ಜೈನ್ ಟೆಂಪಲ್ ರಸ್ತೆಯ ವ್ಯಾಪಾರಿಗೆ ಸುಮಾರು 15 ಲಕ್ಷಕ್ಕೆ ಮಾರಾಟ ಮಾಡಲು ಯತ್ನಿಸುತ್ತಿದ್ದನು. ಈ ವೇಳೆ ಮಾಹಿತಿ ತಿಳಿದ ಕಡೂರು ಪೊಲೀಸರು ದಾಳಿ ಮಾಡಿ ಆರೋಪಿಯನ್ನ ಬಂಧಿಸಿ, ಟೆಲಿಸ್ಕೋಪ್‌ಅನ್ನು ವಶಕ್ಕೆ ಪಡೆದಿದ್ದಾರೆ.

Theft Accused Arrested By Chikkamagaluru Police

ಮನೆಗಳ್ಳತನ ಮಾಡುತ್ತಿದ್ದ ಹಣ್ಣಿನ ವ್ಯಾಪಾರಿ ಅರೆಸ್ಟ್‌: 20 ಲಕ್ಷ ಮೌಲ್ಯದ ಚಿನ್ನಾಭರಣ ವಶ

ವಿವಿಧೆಡೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಖತರ್ನಾಕ್ ಆರೋಪಿಯನ್ನು ಬಂಧಿಸುವಲ್ಲಿ ಚಿಕ್ಕಮಗಳೂರು ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಚಿಕ್ಕಮಗಳೂರು ಮೂಲದ ಹಾಲಿ ಬೆಂಗಳೂರು ವಾಸಿಯಾದ ಅಹ್ಮದ್ ಕಬೀರ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.

ರಾತ್ರಿ ಗಸ್ತಿನಲ್ಲಿದ್ದ ಪೊಲೀಸರು ಆರೋಪಿಯ ಕಾರು ಅಡ್ಡಹಾಕಿದ್ದಾರೆ. ಬಳಿಕ ಆತನನ್ನು ಪೊಲೀಸ್‌ ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಆರೋಪಿ ದರೋಡೆಕೋರ ಎನ್ನುವುದು ತಿಳಿದುಬಂದಿದೆ. ಬಂಧಿತ ಆರೋಪಿಯಿಂದ 20 ಲಕ್ಷ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿಯ ಆಭರಣಗಳೂ ಸೇರಿದಂತೆ 1 ಕಾರು, 1 ಪಿಸ್ತೂಲ್, 12 ಗುಂಡುಗಳಿರುವ 2 ಮ್ಯಾಗ್ಜಿನ್, 1 ರಾಡ್, ಹ್ಯಾಂಡ್ ಗ್ಲೌಸ್ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Theft Accused Arrested By Chikkamagaluru Police

ಚಿಕ್ಕಮಗಳೂರು ನಗರದ ನಗರ ಠಾಣೆಯಲ್ಲಿ ಈತನ ಮೇಲೆ 9 ಕೇಸ್‌ಗಳಿಗೆ. ಶಿವಮೊಗ್ಗ ಹಾಗೂ ಬಾಳೆಹೊನ್ನೂರಿನಲ್ಲಿ ಒಂದು ಪ್ರಕರಣ ದಾಖಲಾಗಿದೆ.

ಪೊಲೀಸರು ಕೇಳಿದರೆ ಬೆಂಗಳೂರಿನಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತೇನೆ ಎನ್ನುವ ಈತನ ಬಳಿ ಗನ್‌ ಇದ್ದು, ಈ ಬಗ್ಗೆ ಪೊಲೀಸರಿಗೆ ಅನುಮಾನ ಬಂದಿದ್ದು, ತೀವ್ರ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಈತ ಬೆಂಗಳೂರಿನ ಡಿ.ಜೆ.ಹಳ್ಳಿಯ ಕಾರ್ಪೆಂಟರ್ ವಾಸೀಮ್ ಎನ್ನುವಾತನಿಂದ ಗನ್‌ ಪಡೆದಿದ್ದಾನೆ ಎನ್ನುವುದು ತಿಳಿದು ಬಂದಿದೆ.

ಈತನ ಮೇಲೆ ಕೇವಲ ಚಿಕ್ಕಮಗಳೂರಷ್ಟೇ ಬೇರೆ ಕಡೆಯೂ ಪ್ರಕರಣಗಳಿರಬಹುದು ಎಂದು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸದ್ಯಕ್ಕೆ ಬಂಧಿತನಿಂದ 292 ಗ್ರಾಂ ಚಿನ್ನ, 300 ಗ್ರಾಂ ಬೆಳ್ಳಿ, ಒಂದು ಕಾರು ಹಾಗೂ ಬೈಕನ್ನ ವಶಪಡಿಸಿಕೊಂಡಿದ್ದಾರೆ.

ಈ ಆರೋಪಿ ಇತ್ತೀಚೆಗೆ ತನ್ನ ಸಹಚರರೊಂದಿಗೆ ಸೇರಿ ಬಾಳೆಹೊನ್ನರೂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಹಿರೇಗದ್ದೆ ಪ್ರಾಥಮಿಕ ಸಹಕಾರಿ ಸಂಘದ ಕಟ್ಟಡದಲ್ಲಿ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಎಸ್‌ಪಿ ಉಮಾ ಪ್ರಶಾಂತ್ ತಿಳಿಸಿದ್ದಾರೆ. ನಗರ ಠಾಣೆಯ ಪೊಲೀಸರು ಪ್ರಕರಣದ ವಿಚಾರಣೆ ನಡೆಸಿದ್ದು, ಪೊಲೀಸ್ ಅಧಿಕಾರಿ, ಸಿಬ್ಬಂದಿಯ ಕೆಲಸವನ್ನು ಎಸ್‌ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+