ನಂದೀಪುರ: ಸರ್ಕಾರಿ ಶಾಲೆಯ ರಸ್ತೆಗೆ ಅಡ್ಡಲಾಗಿ ತಂತಿ ಬೇಲಿ ಹಾಕಿದ ಜಮೀನು ಮಾಲೀಕ, ವಿದ್ಯಾರ್ಥಿಗಳ ಪರದಾಟ
ಚಿಕ್ಕಮಗಳೂರು, ಜೂನ್, 11: ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ನಂದೀಪುರ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ಸರ್ಕಾರಿ ವಸತಿ ಶಾಲೆಗೆ ರಸ್ತೆ ಇಲ್ಲದೆ ಮಕ್ಕಳು ಪ್ರತಿನಿತ್ಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇಷ್ಟೆಲ್ಲ ಸಮಸ್ಯೆ ಇದ್ದರೂ ಕೂಡ ಅಧಿಕಾರಿಗಳು ಮಾತ್ರ ಕ್ಯಾರೆ ಅನ್ನುತ್ತಿಲ್ಲ ಎಂದು ಇಲ್ಲಿನ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಲೆಯಿಂದ ಕೂಗಳತೆಯಲ್ಲಿರುವ ರಸ್ತೆ ಬಿಟ್ಟು ಆರು ಕಿ.ಮೀ. ಸುತ್ತಿ ಬಳಸಿ ಬರಬೇಕು. ಶಾಲೆ ಪಕ್ಕದ ಖಾಸಗಿ ಜಮೀನು ಮಾಲೀಕ ಶಾಲೆ ರಸ್ತೆಗೆ ಅಡ್ಡಲಾಗಿ ತಂತಿ ಬೇಲಿ ಹಾಕಿದ್ದಾರೆ. ಇದರಿಂದ 20 ಕೋಟಿ ರೂಪಾಯಿ ವೆಚ್ಚದ ಸರ್ಕಾರಿ ಶಾಲೆಗೆ ರಸ್ತೆಯೇ ಇಲ್ಲದಂತಾಗಿದ್ದು, ವಿದ್ಯಾರ್ಥಿಗಳು ಪ್ರತಿನಿತ್ಯವೂ ಸುತ್ತಿ ಬಳಸಿ ಬೇರೆ ರಸ್ತೆಯಲ್ಲಿ ನಡೆದುಕೊಂಡು ಬರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಅಧಿಕಾರಿಗಳ ಎಡವಟ್ಟಿನಿಂದ ವಸತಿ ಶಾಲೆ ನಿರ್ಮಾಣ ಮಾಡಿದ ಪರಿಣಾಮ ಇಂದು ಶಿಕ್ಷಕರು ಹಾಗೂ ಮಕ್ಕಳು ರಸ್ತೆ ಇಲ್ಲದೆ ಪರದಾಡುವಂತಾಗಿದೆ. 6 ವರ್ಷಗಳ ಹಿಂದೆ ಅಂದಿನ ಶಾಸಕ ಶ್ರೀನಿವಾಸ್ ಈ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ನಿರ್ಮಾಣ ಮಾಡಲು ಜಾಗ ಮಂಜೂರು ಮಾಡಿಸಿದ್ದರು.
ಬಳಿಕ ಶಾಲೆ ಏನೋ ನಿರ್ಮಾಣ ಆಯ್ತು. ಆದರೆ ಶಾಲೆಗೆ ಹೋಗಲು ರಸ್ತೆ ಗಗನ ಕುಸುಮವಾಯ್ತು. ಜಮೀನು ಮಾಲೀಕ ಶಾಲೆ ಮುಖ್ಯರಸ್ತೆಗೆ ತಂತಿ ಬೇಲಿ ಹಾಕಿರುವ ಪರಿಣಾಮ ಮಕ್ಕಳು ಹಾಗೂ ಶಿಕ್ಷಕರು ಶಾಲೆಗೆ 6 ಕಿ.ಮೀ. ಸುತ್ತಿಕೊಂಡು ಬರುವಂತಾಗಿದೆ.
ತರೀಕೆರೆಯ ರಾಜ್ಯ ಹೆದ್ದಾರಿಯ ಕೂಳತೆ ದೂರದಲ್ಲಿರುವ ಈ ಶಾಲೆಗೆ ಮಕ್ಕಳು ಮುಖ್ಯರಸ್ತೆ ಮೂಲಕ ಬರುವುದು ತುಂಬಾ ಸಲೀಸು. ಆದರೆ, ಖಾಸಗಿ ಜಮೀನು ಮಾಲೀಕ ರಸ್ತೆಗೆ ಬೇಲಿ ಹಾಕಿರುವುದರಿಂದ ಮಕ್ಕಳು-ಶಿಕ್ಷಕರು ಸುತ್ತಿಬಳಸಿ ಓಡಾಡುವಂತಾಗಿದೆ. ಸರ್ಕಾರಿ ದಾಖಲೆ ಪ್ರಕಾರ ಶಾಲೆಯ ಮುಖ್ಯ ರಸ್ತೆಗೆ ಸರ್ಕಾರಿ ದಾಖಲೆಗಳ ಪ್ರಕಾರ ನಕಾಶೆಯಲ್ಲಿ ರಸ್ತೆ ಇದೆ. ಸರ್ಕಾರ ಹಾಗೂ ಅಧಿಕಾರಿಗಳು ಕೂಡ ರಸ್ತೆ ನಿರ್ಮಾಣದ ಕುರಿತು ಜಮೀನು ಮಾಲೀಕನಿಗೆ ಹಲವು ಬಾರಿ ಮನವಿ ಮಾಡಿದರು ಯಾವುದೇ ಪ್ರಯೋಜವಾಗಿಲ್ಲ.
ಇನ್ನು ತನಗೆ ಬೇಕಾದಾಗ ಬೇಲಿ ಹಾಕುವುದು, ಬೇಡವೆಂದಾಗ ಬೇಲಿ ತೆಗೆಯುತ್ತಿರೋ ಜಮೀನು ಮಾಲೀಕನ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಕೂಡಲೇ ಸರ್ಕಾರ ಹಾಗೂ ಅಧಿಕಾರಿಗಳು ಸರ್ಕಾರಿ ದಾಖಲೆಯ ನಕಾಶೆಯಲ್ಲಿರುವ ರಸ್ತೆ ನಿರ್ಮಿಸಿ ಶಾಲೆಗೆ ಹೋಗುವ ಮಕ್ಕಳಿಗೆ ರಸ್ತೆ ನಿರ್ಮಿಸಿಕೊಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು
ಶೈಕ್ಷಣಿಕ ವರ್ಷದ ಶಾಲೆ ಆರಂಭವಾಗಿ ಒಂದು ವಾರ ಕಳೆದರೂ ಕಾಫಿನಾಡಿನ ಗುಂಡಿಹೊಂಬಳ ಶಾಲೆಗೆ ಮಾತ್ರ ಮಕ್ಕಳನ್ನು ಕಳುಹಿಸುವುದಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ. ಶಾಲೆಯಲ್ಲಿ ಶಿಕ್ಷಕರ ಕೊರತೆಯಿಂದ ಇಲ್ಲಿನ ಜನ ಬೇಸತ್ತು ಹೋಗಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಬಿದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಂಡಿಹೊಂಬಳ ಸರ್ಕಾರಿ ಶಾಲೆಯ ಶಿಕ್ಷಕರ ಕೊರತೆ ಹಾಗೂ ಇರುವ ಓರ್ವ ಶಿಕ್ಷಕನ ವಿರುದ್ಧ ಪೋಷಕರು ಕಿಡಿಕಾರಿದ ಘಟನೆ ಇತ್ತೀಚೆಗಷ್ಟೇ ನಡೆದಿತ್ತು.
ಕನ್ನಡ, ಹಿಂದಿ, ಇಂಗ್ಲೀಷ್, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಎಲ್ಲಾ ವಿಷಯಕ್ಕೂ ಒಬ್ಬರೇ ಶಿಕ್ಷಕ. ಇನ್ನು ಈ ಶಾಲೆಯಲ್ಲಿ ಇರುವುದು ಒಂದೇ ಒಂದು ಕೊಠಡಿ. ಒಂದರಿಂದ ಐದನೇ ತರಗತಿಯ 9 ಜನ ಮಕ್ಕಳು ಇದೊಂದೇ ಕೊಠಡಿಯಲ್ಲಿ ಪಾಠ ಕೇಳಬೇಕು. ಇರೋದು ಒಬ್ಬನೇ ಶಿಕ್ಷಕ. ಆತ ಯಾರಿಗೆ ಯಾವ ಸಮಯದಲ್ಲಿ ಹೇಗೆ ಪಾಠ ಮಾಡಬಹುದು ನೀವೇ ಊಹಿಸಿ. ಯಾವ ತರಗತಿಯ ಯಾವ ಪಾಠವನ್ನು ಯಾವ ಮಕ್ಕಳು ಕೇಳುತ್ತಾರೆ ಎಂದು ಪಾಠ ಮಾಡುವ ಶಿಕ್ಷಕರಿಗೂ ಗೊತ್ತಿಲ್ಲ. ಕೇಳುವ ಮಕ್ಕಳಿಗೆ ಮೊದಲೇ ಗೊತ್ತಿಲ್ಲ.
ಶಾಲೆಗೆ ಸೂಕ್ತ ಕೊಠಡಿ ಹಾಗೂ ಶಿಕ್ಷಕರಿಗಾಗಿ ಸ್ಥಳೀಯರು ಮತ್ತು ಎಸ್.ಡಿ.ಎಂ.ಸಿ ಸದಸ್ಯರು ವರ್ಷಗಳಿಂದ ಮನವಿ ಮಾಡುತ್ತಲೇ ಬಂದಿದ್ದಾರೆ. ಆದರೆ, ನೋಡ್ತೀವಿ, ಮಾಡ್ತೀವಿ, ಕಳಿಸ್ತೀವಿ ಅನ್ನೋ ಮೇಲಾಧಿಕಾರಿಗಳಿಂದ ಇಂದಿಗೂ ಕಾರ್ಯರೂಪಕ್ಕೆ ಬಂದಿಲ್ಲ. ಈ ಕಾರಣದಿಂದಲೂ 30 ಮಕ್ಕಳಿದ್ದ ಕಾಡಂಚಿನ ಕುಗ್ರಾಮದ ಶಾಲೆಯಲ್ಲಿ ಇಂದು ಇರುವುದು ಕೇವಲ ಒಂಬತ್ತು ಮಕ್ಕಳು ಮಾತ್ರ ಕಲಿಯುತ್ತಿದ್ದಾರೆ.
ಈ ಶಾಲೆಯಲ್ಲಿ ಸಮಸ್ಯೆ ಇಲ್ಲ. ಶಾಲೆಯೇ ಸಮಸ್ಯೆಯಾಗಿದೆ. ಈ ಶಾಲೆಯ ಪರಿಸ್ಥಿತಿ ಹೀಗಿರುವಾಗ ಇಲ್ಲಿನ ಶಿಕ್ಷಕರದ್ದು ಮತ್ತೊಂದು ಸಮಸ್ಯೆ. ಶಾಲೆ ಆರಂಭವಾಗಿ ವಾರವಾದರೂ ಮಕ್ಕಳು ಮನೆಯಲ್ಲಿ ಆಟವಾಡುತ್ತಿದ್ದಾರೆ ವಿನಃ ಶಾಲೆಗೆ ಬರುತ್ತಿಲ್ಲ. ಕಾರಣ ಇಲ್ಲಿನ ಶಿಕ್ಷಕ. ಇಡೀ ಶಾಲೆಗೆ ಇರುವುದು ಒಬ್ಬರೇ ಶಿಕ್ಷಕರು. ಅವರು ಬೆಳಗ್ಗೆ 11.30ಕ್ಕೆ ಬಂದರೆ 2.30ಕ್ಕೆ ಮನೆ ಸೇರುತ್ತಾರೆ. ಸಂಜೆ ಮಕ್ಕಳೇ ಶಾಲೆಯ ಬೀಗ ಹಾಕಿಕೊಂಡು ಮನೆಗೆ ಹೋಗಬೇಕು. ಇದರಿಂದ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆಯೂ ಇಳಿಮುಖವಾಗಿ ಇಂದು ಒಂಬತ್ತಕ್ಕೆ ಬಂದು ನಿಂತಿದೆ.
ಆದ್ದರಿಂದ ಇಲ್ಲಿನ ಪೋಷಕರು ಶಿಕ್ಷಕ ಚಂದ್ರೇಗೌಡ ಇಲ್ಲಿಂದ ಬೇರೆಡೆಗೆ ಸ್ಥಳಾಂತರಗೊಂಡು ಬೇರೆ ಶಿಕ್ಷಕರು ಬರುವವರೆಗೂ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದು, ಇಲ್ಲಿನ ಶಿಕ್ಷಕರನ್ನು ಬೇರೆ ಕಡೆ ವರ್ಗಾವಣೆ ಮಾಡಿದರೆ ಶಾಲೆಗೆ ಮಕ್ಕಳ ಸಂಖ್ಯೆಯೂ ಹೆಚ್ಚುತ್ತದೆ ಶಾಲೆಯು ಉಳಿಯುತ್ತೆ ಎಂದು ಸ್ಥಳೀಯರು ಆಗ್ರಹಿಸಿದ್ದರು.
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications