ಚಿಕ್ಕಮಗಳೂರು : 8 ತಿಂಗಳಲ್ಲಿ ಬರೋಬ್ಬರಿ 12 ಸಾವಿರ ಜನರಿಗೆ ನಾಯಿ ಕಡಿತ
ಚಿಕ್ಕಮಗಳೂರು, ಅಕ್ಟೋಬರ್ 04 : ಚಿಕ್ಕಮಗಳೂರಿನಲ್ಲಿ ಬೀದಿ ನಾಯಿಗಳ ಕಾಟ ಅಷ್ಟಿಷ್ಟಲ್ಲ, ಬರೊಬ್ಬರಿ 8 ತಿಂಗಳಿಗೆ 12 ಸಾವಿರ ಜನರ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿವೆ. ಈ ದಾಳಿಯಿಂದ ಚಿಕ್ಕಮಗಳೂರು ಜಿಲ್ಲೆಯ ಜನತೆ ಬೆಚ್ಚಿ ಬಿದ್ದಿದ್ದು, ರಾತ್ರಿಯ ವೇಳೆ ಬೀದಿ ನಾಯಿಗಳ ಹಾವಳಿ ಹೆಚ್ಚಳವಾಗಿದೆ.
ಬೈಕ್‌ನಲ್ಲಿ ಹೋಗುವವರಿಗೆ, ಸೈಕಲ್‌ನಲ್ಲಿ ಹೋಗುವವರಿಗೆ, ರಸ್ತೆಯಲ್ಲಿ ಸಂಚಾರ ಮಾಡುವವರೇ ಬೀದಿ ನಾಯಿಗಳ ಟಾರ್ಗೆಟ್ ಆಗಿದ್ದು, ಪುಟ್ಟ ಪುಟ್ಟ ಮಕ್ಕಳ ಮೇಲೂ ನಿರಂತರ ಬೀದಿ ನಾಯಿಗಳ ದಾಳಿ ನಡೆಸುತ್ತಿವೆ. ಬೀದಿ ನಾಯಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಸಾರ್ವಜನಿಕರು ಹರ ಸಾಹಸ ಪಡುವಂತಾಗಿದೆ.

ಚಿಕ್ಕಮಗಳೂರು ನಗರದಲ್ಲಿಯೇ ಆರು ಸಾವಿರಕ್ಕೂ ಅಧಿಕ ಬೀದಿ ನಾಯಿಗಳು ಕಚ್ಚಿರುವ ಪ್ರಕರಣ ದಾಖಲಾಗಿದ್ದು, ಈ ಅಂಕಿ ಅಂಶ ನೋಡಿ ಸಾರ್ವಜನಿಕರನ್ನೇ ಬೆಚ್ಚಿ ಬೀಳಿಸಿದೆ. ಚಿಕ್ಕಮಗಳೂರು ನಗರ ಸೇರಿದಂತೆ, ಜಿಲ್ಲೆಯ ಜನರಲ್ಲಿ ಈಗ ಎದುರಾಗಿರುವ ಶ್ವಾನ ಭೀತಿ ಅದು ಬೀದಿಯಲ್ಲಿರೋ ಶ್ವಾನಗಳು. ರಾತ್ರಿ ಸಮಯದಲ್ಲಂತೂ ಕಾಲ್ನಡಿಗೆ ಬೈಕ್ ನಲ್ಲಿ ಓಡಾಡೋಕು ಭಯ ಪಡುತ್ತಿದ್ದು, 8 ತಿಂಗಳಲ್ಲಿ ಬರೋಬ್ಬರಿ 12 ಸಾವಿರಕ್ಕೂ ಅಧಿಕ ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶ್ವಾನಗಳ ದಾಳಿ ಹಾಗೂ ಕಚ್ಚುವ ಪ್ರಕರಣ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷವೇ ಅಧಿಕವಾಗಿದ್ದು, ಕೇವಲ 8 ತಿಂಗಳಲ್ಲಿ 12 ಸಾವಿರದ ಗಡಿ ದಾಟಿದೆ. ಇದರಲ್ಲಿ ಗರಿಷ್ಠ 95 ರಷ್ಟು ಪ್ರಮಾಣದಲ್ಲಿ ಬೀದಿ ಶ್ವಾನಗಳೇ ದಾಳಿ ನಡೆಸಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ಚಿಕ್ಕಮಗಳೂರು ನಗರದಲ್ಲಿ 6 ಸಾವಿರ ಪ್ರಕರಣಗಳಿದ್ದರೇ, ಕಡೂರು 1,756 ತರೀಕೆರೆ 1,168 ಎನ್.ಆರ್ ಪುರ 588, ಕೊಪ್ಪದಲ್ಲಿ 969, ಶೃಂಗೇರಿ 433, ಮೂಡಿಗೆರೆ 391 ಪ್ರಕರಣಗಳು ದಾಖಲಾಗಿದೆ.

ಶ್ವಾನ ದಾಳಿಯಿಂದ ಬಂದವರಿಗೆ ಈವರೆಗೂ ಚಿಕಿತ್ಸೆ ನೀಡಲಾಗಿದ್ದು, ಇಂಜೆಕ್ಷನ್‌ಗೆ ಈವರೆಗೂ ತೊಂದರೆಯಾಗಿಲ್ಲ. ಮುಂದೆಯೂ ತೊಂದರೆಯಾಗದಂತೆ ಜಿಲ್ಲಾ ಆರೋಗ್ಯ ಇಲಾಖೆ ಎಚ್ಚರಿಕೆಯ ಕ್ರಮ ವಹಿಸಿದ್ದು, ಕಳೆದ ವರ್ಷ 13 ಸಾವಿರ ಪ್ರಕರಣಗಳಿದ್ವು ಈ ಬಾರಿ 8 ತಿಂಗಳಲ್ಲಿಯೇ 12 ಸಾವಿರ ದಾಖಲಾಗಿದೆ ಎಂಬ ಅಂಕಿ ಅಂಶವನ್ನು ಜಿಲ್ಲಾ ಆರೋಗ್ಯ ಇಲಾಖೆ ಹೊರ ಹಾಕಿದೆ.












Click it and Unblock the Notifications