ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಲವರು ದನಗಳಿಗಿಂತ ನಾಯಿ ಸಾಕಲು ಹೆಚ್ಚು ವೆಚ್ಚ ಮಾಡುತ್ತಿರುವುದು ದುಃಖವಾಗ್ತಿದೆ: ಸಿ.ಟಿ. ರವಿ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಜನವರಿ, 20: ಮಣ್ಣೇ ಸತ್ತರೆ ಎಲ್ಲಿ ಹೋಗಬೇಕು?, ಮನುಷ್ಯ ಪ್ರಕೃತಿಗೆ ಪೂರಕವಾಗಿ ಬದುಕಬೇಕು. ರಸಾಯನಿಕ ಬಳಕೆ ಕಡಿಮೆ ಮಾಡಿ ಮಿಶ್ರ ಬೆಳೆ ಬೆಳೆದರೆ ಮಣ್ಣು ಆರೋಗ್ಯವಾಗಿರುತ್ತದೆ. ಮನುಷ್ಯ ಸತ್ತರೆ ಮಣ್ಣಿಗೆ ಹೋಗುತ್ತಾನೆ. ಮಣ್ಣೇ ಸತ್ತರೆ ಮನುಷ್ಯ ಎಲ್ಲಿ ಹೋಗುತ್ತಾನೆ? ಎಂದು ಶಾಸಕ ಸಿ.ಟಿ. ರವಿ ಮಾರ್ಮಿಕವಾಗಿ ಪ್ರಶ್ನೆ ಮಾಡಿದರು.

ಚಿಕ್ಕಮಗಳೂರು ಹಬ್ಬದ ಜ್ಞಾನ ವೈಭವ ಮೇಳೆದಲ್ಲಿ ಮಾತಾನಾಡಿದ ಅವರು, ಪಂಚಭೂತಗಳ ಜೊತೆ ಕೆಲಸ ಮಾಡುವ ರೈತ ಈ ದೇಶದ ನಿಜವಾದ ನಾಯಕ. ಪ್ರಸ್ತುತ ವಿದ್ಯಾವಂತ ಯುವಜನ ಕೃಷಿ ವಿಮುಖವಾಗಿರುವುದು ದೊಡ್ಡ ಸಮಸ್ಯೆಯಾಗಿದೆ. ಕೃಷಿ ಬೆಳವಣಿಗೆ ಮೂಲಕವೇ ಭಾರತ ವಿಶ್ವ ಗುರು ಆಗಬೇಕಿದೆ. ಹಿಂದಿನ ಕಾಲದವರು ದನಕ್ಕೆ ಕೊಡುತ್ತಿದ್ದ ಗೌರವವನ್ನು ಈಗಿನವರು ನಾಯಿಗೆ ಕೊಡುತ್ತಿದ್ದಾರೆ. ದನ ಸಾಕುವುದಕ್ಕಿಂತ ಹೆಚ್ಚಿನ ಬೆಲೆಯ ನಾಯಿ ಸಾಕಲು ಕೆಲವರು ವೆಚ್ಚ ಮಾಡುತ್ತಿರುವುದು ಶೋಚನೀಯ ಎಂದು ಸಿ.ಟಿ. ರವಿ ಆತಂಕ ವ್ಯಕ್ತಪಡಿಸಿದರು.

ತನ್ನ ಪಕ್ಷದ ನಾಯಕರನ್ನು ಸೋಲಿಸಿ ಅನ್ಯಾಯ ಮಾಡಿದ್ದು ಸಿದ್ಧರಾಮಯ್ಯ: ಸಿ.ಟಿ. ರವಿತನ್ನ ಪಕ್ಷದ ನಾಯಕರನ್ನು ಸೋಲಿಸಿ ಅನ್ಯಾಯ ಮಾಡಿದ್ದು ಸಿದ್ಧರಾಮಯ್ಯ: ಸಿ.ಟಿ. ರವಿ

ಮಕ್ಕಳು ಸಮಾಜದ ಜೊತೆ ಬೆರೆಯಬೇಕು
ಶಾಲಾ ಕೊಠಡಿಯಿಂದ ಮಕ್ಕಳು ಹೊರ ಬಂದು ಸಮಾಜದ ಜೊತೆ ಬೆರೆತಾಗ ನಿಜ ಜೀವನದ ಪಾಠ ಕಲಿಯುತ್ತಾರೆ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅಭಿಪ್ರಾಯಪಟ್ಟಿದ್ದಾರೆ. ಚಿಕ್ಕಮಗಳೂರು ಹಬ್ಬದ ಅಂಗನವಾಗಿ ಎರಡನೇ ದಿನ ಗುರುವಾರ ಅಜಾದ್ ಪಾರ್ಕ್ ಬಳಿ ಚಿನ್ನರ ಮೇಳ ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಣದ ಜೊತೆ ಜೀವನದ ಪಾಠ ಕಲಿಯುವುದು ಮಕ್ಕಳಿಗೆ ತುಂಬಾ ಅವಶ್ಯವಿದೆ. ಶಿಕ್ಷಣ ಪಡೆದ ನಂತರ ಹೊರಗೆ ಹೇಗೆ ಜೀವನ ಮಾಡಬೇಕೆಂಬುದನ್ನು ಮಕ್ಕಳು ಕಲಿಯಬೇಕು ಎಂದರು.

Some people more money spending to dogs: C.T. Ravi

ಹಬ್ಬದ ಅನುಭವ ಪಡೆಯುವುದರ ಜೊತೆಗೆ ಇಲ್ಲಿನ ವೈವಿಧ್ಯ ಸಾಂಸ್ಕೃತಿಕ ಕಾರ್ಯಕ್ರಮಗಳ ದರ್ಶನ ಮಕ್ಕಳಿಗೆ ಆಗುತ್ತದೆ. ಚಿಕ್ಕಮಗಳೂರಿಗೆ ಪ್ರವಾಸೋದ್ಯಮದಲ್ಲಿ ವಿಶೇಷ ಸ್ಥಾನವಿದೆ. ಇಲ್ಲಿನ ರಸ್ತೆ ಸೇರಿ ಮೂಲ ಸೌಕರ್ಯ ಅಭಿವೃದ್ಧಿ ಕಂಡಿವೆ. ಇವು ಪ್ರವಾಸೋದ್ಯಮಕ್ಕೆ ಸಹಾಯಕವಾಗಲಿವೆ ಎಂದರು.

Some people more money spending to dogs: C.T. Ravi

ಮಕ್ಕಳಿಗೆ ಜೀವನದ ಜ್ಞಾನ ಹೆಚ್ಚಿಸುವ ಪ್ರಯತ್ನ
ನಂತರ ಮತ್ತೆ ಶಾಸಕ ಸಿ.ಟಿ. ರವಿ ಅವರು ಮಾತನಾಡಿ, ಉತ್ಸವಗಳು ಜೀವನದ ವಿಶ್ವಾಸ ಹೆಚ್ಚುಸುವುದರ ಜೊತೆ ಹೊಸದೊಂದರ ಆಲೋಚನೆಗೆ ಇಂಬು ನೀಡುತ್ತವೆ. ಶಾಲಾ ಪರೀಕ್ಷೆ ಪಾಸು ಮಾಡಲು ಓದಬೇಕು. ಜೀವನದ ಪರೀಕ್ಷೆ ಪಾಸು ಮಾಡಲು ಇಂತಹ ಹಬ್ಬ ಉತ್ಸವಗಳಲ್ಲಿ ಮಕ್ಕಳು ಭಾಗಿಯಾಗಬೇಕು ಎಂದರು. ತರಕಾರಿ, ಹಾಲು ಫ್ಯಾಕ್ಟರಿಯಲ್ಲಿ ಉತ್ಪಾದನೆ ಮಾಡಲಾಗುವುದಿಲ್ಲ. ಈಗಿನ ಕೆಲ ಮಕ್ಕಳಿಗೆ ಹಾಲು, ಆಹಾರ ಧಾನ್ಯದ ಬೆಳೆಗಳು ಏನು ಎಂಬುದು ತಿಳಿದಿಲ್ಲ. ಇಂತಹ ಉತ್ಸವಗಳ ಮೂಲಕ ಮಕ್ಕಳ ಜೀವನದ ಜ್ಞಾನ ಹೆಚ್ಚಿಸುವ ಪ್ರಯತ್ನ ಮಾಡಲಾಗುತ್ತಿದೆ. ಮಕ್ಕಳು ಜೀವನವೆಂಬ ನದಿಯಲ್ಲಿ ನಿರಂತರವಾಗಿ ಈಜವುದನ್ನು ರೂಢಿಸಿಕೊಳ್ಳಬೇಕು. ಈಜುವುದನ್ನು ನಿಲ್ಲಿಸಿದರೆ ಮುಳಗಬೇಕಾಗುತ್ತದೆ. ನಿರಂತರ ಪ್ರಯತ್ನಶೀಲರಾಗಬೇಕು. ದೇವರು ಕಷ್ಟ ಪಡುವವರ ಜೊತೆ ಇರುತ್ತಾನೆ ಎಂದರು.

English summary
BJP National General Secretary CT Ravi said in Chikkamagaluru,Some people are money spending more to dogs, C.T. Ravi request to spending more money to cattles, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X