ಕುಟುಂಬಸ್ಥರಿಂದ ಸಿದ್ಧಾರ್ಥ್ ಸಮಾಧಿಗೆ ಪೂಜೆ
ಚಿಕ್ಕಮಗಳೂರು, ಆಗಸ್ಟ್ 3: ಕೆಫೆ ಕಾಫಿ ಡೇ ಮಾಲೀಕ, ಉದ್ಯಮಿ ಸಿದ್ಧಾರ್ಥ್ ಸಾವನ್ನಪ್ಪಿ ಇಂದಿಗೆ ಐದು ದಿನಗಳು ಕಳೆದಿವೆ.
ಸಿದ್ಧಾರ್ಥ್ ಆತ್ಮಕ್ಕೆ ಶಾಂತಿ ಕೋರಿ ಇಂದು ಸಿದ್ಧಾರ್ಥ್ ಅವರ ಸಮಾಧಿ ಸ್ಥಳಕ್ಕೆ ಅವರ ಕುಟುಂಬಸ್ಥರು ತೆರಳಿ ಪೂಜೆ ಸಲ್ಲಿಸಿದ್ದಾರೆ.

ಜುಲೈ 31ರಂದು ಮೂಡಿಗೆರೆ ತಾಲೂಕಿನ ಚೇತನಹಳ್ಳಿ ಎಸ್ಟೇಟ್ ನಲ್ಲೇ ಸಿದ್ಧಾರ್ಥ್ ಅವರ ಅಂತ್ಯಕ್ರಿಯೆ ನಡೆದಿತ್ತು. ತಾಯಿ, ಪತ್ನಿ, ಮಕ್ಕಳು ಹಾಗೂ ಸಂಬಂಧಿಕರು ಇಂದು ಅಲ್ಲಿಗೆ ತೆರಳಿ ಪೂಜೆ ಸಲ್ಲಿಸಿದ್ದಾರೆ.












Click it and Unblock the Notifications