• search
  • Live TV
ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾರಿನೊಳಗೇ ಉಸಿರುಗಟ್ಟಿ ಕಾನೂನು ತಜ್ಞ ಶಮ್ನಾಡ್ ಬಶೀರ್ ಸಾವು

By ಚಿಕ್ಕಮಗಳೂರು ಪ್ರತಿನಿಧಿ
|

ಚಿಕ್ಕಮಗಳೂರು, ಆಗಸ್ಟ್ 9: ಐಡಿಐಎ ಸಂಸ್ಥಾಪಕ, ಖ್ಯಾತ ಕಾನೂನು ತಜ್ಞ ಶಮ್ನಾಡ್ ಬಶೀರ್ ಅವರ ಮೃತದೇಹ ಚಿಕ್ಕಮಗಳೂರಿನ ಬಾಬಾಬುಡನ್ ಗಿರಿ ಬಳಿ ಗುರುವಾರ ಪತ್ತೆಯಾಗಿದೆ.

ಕಾರಿನೊಳಗೆಯೇ ಉಸಿರುಗಟ್ಟಿ ಶಮ್ನಾಡ್ ಬಶೀರ್ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಐದು ದಿನಗಳ ಹಿಂದೆ ಶಮ್ನಾಡ್ ಅವರು ದತ್ತಾತ್ರೇಯ ಪೀಠದ ಬಳಿ ಬಂದಿದ್ದಾರೆ. ನಂತರ ಅವರು ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಆಗಸ್ಟ್ 3 ರಂದು ಅವರ ಸಹೋದರರು ದೂರು ದಾಖಲಿಸಿದ್ದರು.

ದೊಪ್ಪನೆ ಬಿದ್ದ ಮನೆ, ಸಾವು ಗೆದ್ದು ಬಂದ ಪುಟ್ಟ ಕಂದ

ತೀವ್ರ ಶೋಧದ ನಂತರ ಇನಾಂ ದತ್ತಾತ್ರೇಯ ಪೀಠದ ಝಡ್ ಪಾಯಿಂಟ್ ಬಳಿ ಕಾರಿನಲ್ಲಿ ಮೃತ ದೇಹ ಪತ್ತೆಯಾಗಿದೆ.

ಕಳೆದ ಐದು ದಿನಗಳ ಕೆಳಗೇ ಅವರು ಮೃತಪಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ. ಕಾರಿನೊಳಗೆ ಉಸಿರುಗಟ್ಟಿ ಸತ್ತಿರುವುದಾಗಿ ತಿಳಿದುಬಂದಿದೆ. 2014ರಲ್ಲಿ ಬಶೀರ್ ಅವರಿಗೆ ಮಾನವೀಯ ಸೇವೆಗಾಗಿ ಇನ್ಫೋಸಿಸ್ ಸೈನ್ಸ್ ಫೌಂಡೇಷನ್ ಪ್ರಶಸ್ತಿ ಲಭಿಸಿತ್ತು.

ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

English summary
The body of IDIA founder, renowned legal expert Shamnad Bashir, was found dead near Bababudan Giri in Chikmagalur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X