ಚಿಕ್ಕಮಗಳೂರಿನಲ್ಲಿ ಭಾರಿ ಮಳೆಯಿಂದ 391 ಕೋಟಿ ರೂಪಾಯಿ ನಷ್ಟ

ಚಿಕ್ಕಮಗಳೂರು, ಸೆಪ್ಟೆಂಬರ್‌, 11: ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಕಡಿಮೆ ಆಗಿದ್ದರೂ ಕೂಡ ಅನಾಹುತಗಳು ಮಾತ್ರ ಪ್ರವಾಹ ಪೆಟ್ಟು ಹೆಚ್ಚಾಗುತ್ತಲೇ ಇದೆ. ಇದುವರೆಗೂ ಸುರಿದ ಮಳೆಗೆ ಕಾಫಿನಾಡಿನಲ್ಲಿ 391 ಕೋಟಿಗೂ ಅಧಿಕ ನಷ್ಟ ಆಗಿದೆ. ಒಟ್ಟು 945 ಮನೆಗಳು ಹಾನಿ ಆಗಿವೆ. 71 ಮನೆ ಪೂರ್ಣ ಹಾನಿ, 386 ಮನೆಗಳು ಭಾಗಶಃ ಹಾನಿ, 468 ಮನೆಗಳಿಗೆ ಸಾಧಾರಣ ಹಾನಿ ಆಗಿದೆ. ಇನ್ನು 9,815 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆಗಳು ಹಾಗೂ ತೋಟಗಾರಿಕೆ ಬೆಳೆಗಳು ಮಣ್ಣುಪಾಲಾಗಿದೆ.

ಈರುಳ್ಳಿ 3,499 ಹೆಕ್ಟೇರ್, ಅಡಿಕೆ 353 ಹೆಕ್ಟೇರ್, ಆಲೂಗೆಡ್ಡ 870 ಹೆಕ್ಟೇರ್, ಕಡ್ಲೆಕಾಯಿ 277 ಹೆಕ್ಟೇರ್ ಸೇರಿದಂತೆ ಇನ್ನು ಹಲವಾರು ಬೆಳೆಗಳು ಮಳೆ ನೀರಿನಲ್ಲಿ ಕೊಚ್ಚಿ ಹೋಗಿದೆ. ಕಾಫಿನಾಡಿನ ಮಲೆನಾಡು, ಅರೆಮಲೆನಾಡು ಹಾಗೂ ಬಯಲುಸೀಮೆ ಭಾಗದಲ್ಲಿ ಈ ವರ್ಷ ಸುರಿದ ಭಾರಿ ಮಳೆಯಿಂದ ಜನಜೀವನ ಅಲ್ಲೋಲ-ಕಲ್ಲೋಲವಾಗಿದೆ. ಸರ್ಕಾರ ಅನಾಹುತಗಳ ಪಟ್ಟಿ ಮಾಡಿದಷ್ಟೆ ವೇಗವಾಗಿ ದುರಸ್ಥಿಯನ್ನೂ ಮಾಡಬೇಕಾಗಿದೆ ಎಂದು ಅಲ್ಲಿನ ಸ್ಥಳೀಯರ ಒತ್ತಾಯ ಆಗಿದೆ.

Recommended Video

      Karnataka ದಲ್ಲಿ ಮಳೆರಾಯನ ಆರ್ಭಟ ಮುಗಿದಿಲ್ಲ | *Karnataka | OneIndia Kannada

      ಚಿಕ್ಕಮಗಳೂರಿನಲ್ಲಿ ನಿಲ್ಲದ ವರುಣನ ಅಟ್ಟಹಾಸ; ಜಿಲ್ಲೆಯ ಮಳೆ ವಿವರ ಇಲ್ಲಿದೆ

      ಸತತವಾಗಿ ಮೂರು ತಿಂಗಳು ಸುರಿದ ಮಳೆಗೆ ಜಿಲ್ಲೆಯಲ್ಲಿ ಶಾಲಾ ಕೊಠಡಿಗಳು, ಅಂಗನವಾಡಿ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ 512 ಕೊಠಡಿಗಳು ಹಾನಿಗೊಳಗಾಗಿವೆ. ಅಷ್ಟೇ ಅಲ್ಲದೆ, 329 ಕಿಲೋ ಮೀಟರ್‌ ರಾಜ್ಯ ಹೆದ್ದಾರಿಗಳು ಸಂಪೂರ್ಣಾ ಹಾಳಾಗಿದೆ. 327 ಕಿಲೋ ಮೀಟರ್‌ ಜಿಲ್ಲೆಯ ಮುಖ್ಯ ರಸ್ತೆಗಳು ಅವನತಿಯತ್ತ ಸಾಗಿವೆ. ಇನ್ನು 1,278 ಕಿಲೋ ಮೀಟರ್‌ ಗ್ರಾಮೀಣ ರಸ್ತೆಗಳು ಹಾಳಾಗಿದೆ.

      ಚಿಕ್ಕಮಗಳೂರಿನಲ್ಲಿ ಭಾರಿ ಮಳೆಯಿಂದ 391 ಕೋಟಿ ರೂ. ನಷ್ಟ

      ಚಿಕ್ಕಮಗಳೂರಿನಲ್ಲಿ ಭಾರಿ ಮಳೆಯಿಂದ 391 ಕೋಟಿ ರೂ. ನಷ್ಟ

      ಚಿಕ್ಕಮಗಳೂರು, ಸೆಪ್ಟೆಂಬರ್‌, 11: ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಕಡಿಮೆ ಆಗಿದ್ದರೂ ಕೂಡ ಅನಾಹುತಗಳು ಮಾತ್ರ ಪ್ರವಾಹ ಪೆಟ್ಟು ಹೆಚ್ಚಾಗುತ್ತಲೇ ಇದೆ. ಇದುವರೆಗೂ ಸುರಿದ ಮಳೆಗೆ ಕಾಫಿನಾಡಿನಲ್ಲಿ 391 ಕೋಟಿಗೂ ಅಧಿಕ ನಷ್ಟ ಆಗಿದೆ. ಒಟ್ಟು 945 ಮನೆಗಳು ಹಾನಿ ಆಗಿವೆ. 71 ಮನೆ ಪೂರ್ಣ ಹಾನಿ, 386 ಮನೆಗಳು ಭಾಗಶಃ ಹಾನಿ, 468 ಮನೆಗಳಿಗೆ ಸಾಧಾರಣ ಹಾನಿ ಆಗಿದೆ. ಇನ್ನು 9,815 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆಗಳು ಹಾಗೂ ತೋಟಗಾರಿಕೆ ಬೆಳೆಗಳು ಮಣ್ಣುಪಾಲಾಗಿದೆ.

      ಈರುಳ್ಳಿ 3,499 ಹೆಕ್ಟೇರ್, ಅಡಿಕೆ 353 ಹೆಕ್ಟೇರ್, ಆಲೂಗೆಡ್ಡ 870 ಹೆಕ್ಟೇರ್, ಕಡ್ಲೆಕಾಯಿ 277 ಹೆಕ್ಟೇರ್ ಸೇರಿದಂತೆ ಇನ್ನು ಹಲವಾರು ಬೆಳೆಗಳು ಮಳೆ ನೀರಿನಲ್ಲಿ ಕೊಚ್ಚಿ ಹೋಗಿದೆ. ಕಾಫಿನಾಡಿನ ಮಲೆನಾಡು, ಅರೆಮಲೆನಾಡು ಹಾಗೂ ಬಯಲುಸೀಮೆ ಭಾಗದಲ್ಲಿ ಈ ವರ್ಷ ಸುರಿದ ಭಾರಿ ಮಳೆಯಿಂದ ಜನಜೀವನ ಅಲ್ಲೋಲ-ಕಲ್ಲೋಲವಾಗಿದೆ. ಸರ್ಕಾರ ಅನಾಹುತಗಳ ಪಟ್ಟಿ ಮಾಡಿದಷ್ಟೆ ವೇಗವಾಗಿ ದುರಸ್ಥಿಯನ್ನೂ ಮಾಡಬೇಕಾಗಿದೆ ಎಂದು ಅಲ್ಲಿನ ಸ್ಥಳೀಯರ ಒತ್ತಾಯ ಆಗಿದೆ.

      ಸತತವಾಗಿ ಮೂರು ತಿಂಗಳು ಸುರಿದ ಮಳೆಗೆ ಜಿಲ್ಲೆಯಲ್ಲಿ ಶಾಲಾ ಕೊಠಡಿಗಳು, ಅಂಗನವಾಡಿ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ 512 ಕೊಠಡಿಗಳು ಹಾನಿಗೊಳಗಾಗಿವೆ. ಅಷ್ಟೇ ಅಲ್ಲದೆ, 329 ಕಿಲೋ ಮೀಟರ್‌ ರಾಜ್ಯ ಹೆದ್ದಾರಿಗಳು ಸಂಪೂರ್ಣಾ ಹಾಳಾಗಿದೆ. 327 ಕಿಲೋ ಮೀಟರ್‌ ಜಿಲ್ಲೆಯ ಮುಖ್ಯ ರಸ್ತೆಗಳು ಅವನತಿಯತ್ತ ಸಾಗಿವೆ. ಇನ್ನು 1,278 ಕಿಲೋ ಮೀಟರ್‌ ಗ್ರಾಮೀಣ ರಸ್ತೆಗಳು ಹಾಳಾಗಿದೆ.

      ಕತ್ತಲಲ್ಲಿ ಜೀವನ ಕಳೆಯುತ್ತಿರುವ ಕುಗ್ರಾಮಗಳು

      ಕತ್ತಲಲ್ಲಿ ಜೀವನ ಕಳೆಯುತ್ತಿರುವ ಕುಗ್ರಾಮಗಳು

      ಜಿಲ್ಲಾದ್ಯಂತ ಸುಮಾರು 91 ಸೇತುವೆಗಳಿಗೆ ಹಾನಿ ಆಗಿದೆ. ಮಳೆ-ಗಾಳಿ ಅಬ್ಬರಕ್ಕೆ 1,910ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿವೆ. ಸುಮಾರು 38 ಕಿಲೋ ಮೀಟರ್‌ನಷ್ಟು ಉದ್ದ ವಿದ್ಯುತ್ ತಂತಿಗಳು ಹರಿದುಬಿದ್ದಿದ್ದು, ಕುಗ್ರಾಮಗಳು ಕತ್ತಲಿನಲ್ಲಿ ಜೀವನ ಸಾಗಿಸುವಂತಾಗಿದೆ. ಐದು ಟ್ರಾನ್ಸ್‌ಫರ್ಮರ್‌ಗಳು ನಾಶವಾಗಿವೆ.

      ಮಳೆ ಆರ್ಭಟ, ಸಂಭವಿಸಿದ ಹಾನಿ ಪ್ರಮಾಣ

      ಮಳೆ ಆರ್ಭಟ, ಸಂಭವಿಸಿದ ಹಾನಿ ಪ್ರಮಾಣ

      ಕೆರೆ-ಕಟ್ಟೆಗಳು ಕೋಡಿ ಬಿದ್ದಿದ್ದು, ನೀರಿನ ರಭಸ ಹೆಚ್ಚಾದ ಪರಿಣಾಮ ಸುಮಾರು 25ಕ್ಕೂ ಹೆಚ್ಚು ಚಾನಲ್‍ಗಳಿಗೆ ಹಾನಿಗೊಳಗಾಗಿವೆ. ಮಳೆಯಿಂದ ಜಿಲ್ಲಾದ್ಯಂತ 6 ಜನ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಈ ಬಾರಿ ಸುರಿದ ಭಾರಿ ಮಳೆ ಜಿಲ್ಲೆಯ ಜನರ ನಿದ್ದೆಗೆಡಿಸಿದೆ. ಮೂರು ತಿಂಗಳ ಮಳೆ ಅಬ್ಬರಕ್ಕೆ ಜಿಲ್ಲಾದ್ಯಂತ 391.57 ಕೋಟಿಯಷ್ಟು ನಷ್ಟ ಆಗಿದೆ ಎಂದು ಜಿಲ್ಲಾಡಳಿತ ಸರ್ಕಾರಕ್ಕೆ ವರದಿ ಸಲ್ಲಿಸಿದೆ.

      ಇದುವರೆಗೂ ಭರವಸೆಯಾಗಿಯೇ ಉಳಿದ ಪರಿಹಾರ

      ಇದುವರೆಗೂ ಭರವಸೆಯಾಗಿಯೇ ಉಳಿದ ಪರಿಹಾರ

      ಒಟ್ಟಾರೆ ಜಿಲ್ಲಾಡಳಿತ ಅನಾಹುತಗಳ ಪಟ್ಟಿಯನ್ನೇನೋ ಸಿದ್ದಪಡಿಸಿದೆ. ಆದರೆ ಅದಕ್ಕೆ ತಕ್ಕಂತೆ ಪರಿಹಾರ ಯಾವಾಗ ಬರುತ್ತದೆಯೋ ಗೊತ್ತಿಲ್ಲ ಎಂದು ಜನರು ಅಸಮಾಧಾನ ಹೊರಹಾಕಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದಲೂ ಜಿಲ್ಲಾದ್ಯಂತ ಧಾರಾಕಾರ ಮಳೆ ಆಗಿದೆ. ಸಾಕಷ್ಟು ಅನಾಹುತ-ಅವಘಡಗಳು ಸಂಭವಿಸಿವೆ. ಆದರೆ ಅವುಗಳಿಗೆಲ್ಲಾ ಸಮರ್ಪಕ ಹಾಗೂ ಸೂಕ್ತವಾದ ಪರಿಹಾರವನ್ನು ಸರ್ಕಾರಗಳು ಇನ್ನೂ ಕಲ್ಪಿಸಿಲ್ಲ. ಜಿಲ್ಲಾಡಳಿತ ಈ ವರದಿ ಜನರ ಸಮಾಧಾನಕ್ಕೋಸ್ಕರ ಅಥವಾ ಸರ್ಕಾರದ ದಾಖಲೆಗಳಿಗೋ ಗೊತ್ತಿಲ್ಲ ಎನ್ನುತ್ತಿದ್ದಾರೆ ಅಲ್ಲಿನ ಸ್ಥಳೀಯರು. ಹಿಂದಿನ ಪರಿಸ್ಥಿತಿಯನ್ನು ಗಮನಿಸಿದರೆ, ಪರಿಹಾರ ಸಿಗುತ್ತದೆಯೋ ಅಥವಾ ಇಲ್ಲವೋ ಎನ್ನುವ ಪ್ರಶ್ನೆ ಮೂಡುವುದು ಸಹಜವಾಗಿದೆ. ಈ ಬಾರಿ ಹಾಗಾಗದಿರಲಿ ಅನ್ನೋದು ಜಿಲ್ಲೆಯ ಜನರ ಆಶಯವಾಗಿದೆ.

      ಸರ್ಕಾರದ ಧೋರಣೆಗೆ ಜನರ ಅಸಮಾಧಾನ

      ಸರ್ಕಾರದ ಧೋರಣೆಗೆ ಜನರ ಅಸಮಾಧಾನ

      ಜಿಲ್ಲೆಯಲ್ಲಿ ವರುಣನ ಅಬ್ಬರ ನಿಂತಿದ್ದರೂ ಸಹ, ಪ್ರವಾಹದ ಹೊಡೆತವನ್ನು ಜನರು ಇನ್ನು ಸುಧಾರಿಸಿಕೊಳ್ಳುತ್ತಲೇ ಇದ್ದಾರೆ. ಮಳೆರಾಯ ಸಾಲು ಸಾಲು ಅನಾಹುತಗಳನ್ನು ಸೃಷ್ಟಿಸಿದ್ದು, ಬೆಳೆಗಳು, ಮನೆಗಳನ್ನು ಕಳೆದುಕೊಂಡ ಜನರ ಪರಿಸ್ಥಿತಿ ಹೇಳತೀರದಾಗಿದೆ. ಸರ್ಕಾರ ಮಾತ್ರ ಪರಿಹಾದ ಭರವಸೆಗಳನ್ನು ಕೊಟ್ಟು, ಮತ್ತೆ ಇತ್ತ ತಲೆಯನ್ನು ಕೂಡ ಹಾಕುದಿಲ್ಲ ಎಂದು ಜನರು ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+