ಭಾರೀ ಮಳೆಯಿಂದ ಚಾರ್ಮಾಡಿ ಘಾಟ್ ನಲ್ಲಿ ಗುಡ್ಡ ಕುಸಿತ
ಚಿಕ್ಕಮಗಳೂರು, ಆಗಸ್ಟ್ 05: ಚಿಕ್ಕಮಗಳೂರಿನಲ್ಲಿ ಮಳೆ ಅಬ್ಬರ ಮುಂದುವರೆದಿದೆ. ಎರಡು ದಿನಗಳಿಂದ ಬಿಟ್ಟೂ ಬಿಡದೇ ಮಳೆ ಸುರಿಯುತ್ತಿದೆ. ಮಳೆಯಿಂದಾಗಿ ಇಂದು ಸಂಜೆ ಚಾರ್ಮಾಡಿ ಘಾಟ್ ನ 6ನೇ ತಿರುವಿನಲ್ಲಿ ಗುಡ್ಡ ಕುಸಿದಿದ್ದು, ವಿಲ್ಲುಪುರಂ ಮಂಗಳೂರು ಹೆದ್ದಾರಿ ಬಂದ್ ಆಗಿದೆ.
Recommended Video
Kabini Reservoir ಪ್ರದೇಶದಲ್ಲಿ ಭಾರೀ ಮಳೆ; ಒಳಹರಿವು ಏರಿಕೆ | Oneindia Kannada
ಚಾರ್ಮಾಡಿ ಘಾಟ್ ನಲ್ಲಿ ಗುಡ್ಡ ಕುಸಿದ ಪರಿಣಾಮ ಭಾರೀ ಪ್ರಮಾಣದ ಮಣ್ಣಿನೊಂದಿಗೆ ಬೃಹತ್ ಬಂಡೆಗಳು ರಸ್ತೆಯಲ್ಲಿ ಬಿದ್ದಿವೆ. ಗುಡ್ಡ ಕುಸಿಯುತ್ತಿದ್ದಂತೆ ಕೊಟ್ಟಿಗೆ ಹಾರದಲ್ಲಿ ಪೊಲೀಸರು ವಾಹನಗಳನ್ನು ಘಾಟ್ ಪ್ರವೇಶಿಸದಂತೆ ತಡೆದು ನಿಲ್ಲಿಸುತ್ತಿದ್ದಾರೆ.

ಜೊತೆಗೆ ಮಳೆಯಿಂದಾಗಿ 6 ಎಕರೆ ಬಾಳೆ ತೋಟ ಸಂಪೂರ್ಣ ನಾಶವಾಗಿರುವ ವರದಿಯಾಗಿದೆ. ಮೂಡಿಗೆರೆ ತಾಲೂಕಿನ ಕೆಂಬತ್ ಮಕ್ಕಿಯಲ್ಲಿ ರಾಜಣ್ಣ ಎಂಬುವವರಿಗೆ ಸೇರಿದ 9 ಸಾವಿರ ಬಾಳೆ ಗಿಡಗಳು ಬಿರುಗಾಳಿ ಸಹಿತ ಮಳೆಗೆ ನಾಶವಾಗಿವೆ.












Click it and Unblock the Notifications