ಮಾತಿಗೆ ಮಾತು ಬೆಳೆದು ಚಾಕುವಿನಿಂದ ಇರಿದ ಪಿಯುಸಿ ವಿದ್ಯಾರ್ಥಿಗಳು
ಚಿಕ್ಕಮಗಳೂರು, ಡಿಸೆಂಬರ್ 14: ಒಬ್ಬೊರಿಗೊಬ್ಬರು ಜಗಳವಾಡಿಕೊಂಡು ಪಿಯುಸಿ ವಿದ್ಯಾರ್ಥಿಗಳು ಇಬ್ಬರು ವಿದ್ಯಾರ್ಥಿಗಳಿಗೆ ಚಾಕುವಿನಿಂದ ಇರಿದಿರುವ ಘಟನೆ ಇಂದು ಚಿಕ್ಕಮಗಳೂರಿನಲ್ಲಿ ನಡೆದಿದೆ.
ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಸಂತೇ ಮೈದಾನದಲ್ಲಿ ಘಟನೆ ನಡೆದಿದ್ದು, ವಿನಯ್ ಹಾಗೂ ಗಾಯನ್ ಚಾಕು ಇರಿತಕ್ಕೊಳಗಾದವರು.
ಪೊಲೀಸರಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ ವ್ಯಕ್ತಿಗೆ ಗುಂಡೇಟು
ಕಾಲೇಜಿನಿಂದ ಹಿಂದಿರುಗುವಾಗ ಈ ವಿದ್ಯಾರ್ಥಿಗಳ ನಡುವೆ ಮಾತಿಗೆ ಮಾತು ಬೆಳೆದಿದೆ. ಅದು ಗಲಾಟೆ ಮಟ್ಟಕ್ಕೆ ಹೋಗಿದ್ದು, ಸಾಗರ್ ಹಾಗೂ ಚೇತನ್ ಎಂಬುವವರು ವಿನಯ್ ಹಾಗೂ ಗಾಯನ್ ಎಂಬುವರಿಗೆ ಚಾಕುವಿನಿಂದ ಇರಿದಿದ್ದಾರೆ. ಮುಖದ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ.
ಎಲ್ಲರೂ ಪ್ರಥಮ ಹಾಗೂ ದ್ವಿತಿಯ ಪಿಯುಸಿ ವಿದ್ಯಾರ್ಥಿಗಳಾಗಿದ್ದಾರೆ. ಮೂಡಿಗೆರೆ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ವಿದ್ಯಾರ್ಥಿಗಳ ಬೈಕಿನಲ್ಲಿದ್ದ ಚಾಕು, ಸೈಕಲ್ ಚೈನ್ ಅನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ವಿಚಾರಣೆ ಸಾಗಿದೆ.