• search
  • Live TV
ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸರ್ಕಾರಕ್ಕೆ 2 ಕೋಟಿ ರೂ. ಪರಿಹಾರ ನೀಡುವಂತೆ ಆರೋಪಿಗೆ ಕೋರ್ಟ್ ಆದೇಶ

By ಚಿಕ್ಕಮಗಳೂರು ಪ್ರತಿನಿಧಿ
|

ಚಿಕ್ಕಮಗಳೂರು, ಆಗಸ್ಟ್ 30: ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಜೆ.ಎಂ.ಎಫ್.ಸಿ ನ್ಯಾಯಾಲಯದಿಂದ ಮಹತ್ವದ ಆದೇಶ ಹೊರಬಂದಿದ್ದು, ಸರ್ಕಾರಿ ಹಣವನ್ನು ದುರುಪಯೋಗ ಮಾಡಿದ್ದಕ್ಕೆ ಆರೋಪಿಗೆ ಕೋರ್ಟ್ ನಿಂದ ತಕ್ಕ ಶಿಕ್ಷೆ ನೀಡಲಾಗಿದೆ.

ಮೇಲಾಧಿಕಾರಿಯ ಸಹಿಯನ್ನು ನಕಲು ಮಾಡಿ ಹಣ ದುರುಪಯೋಗ ಮಾಡಿದ್ದ ಆರೋಪಿಯು ಸರ್ಕಾರಕ್ಕೆ 2 ಕೋಟಿ ರುಪಾಯಿ ಪರಿಹಾರ ನೀಡುವಂತೆ ಆದೇಶ ನೀಡಿದೆ.

ಚಿಕ್ಕಮಗಳೂರು ಪ್ರವಾಸಿ ತಾಣಗಳಿಗಿದ್ದ ನಿರ್ಬಂಧ ತೆರವು

ತರೀಕೆರೆಯ ಅರಣ್ಯ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿದ್ದ ಆರೋಪಿ ಮೋಹನ್ ಕುಮಾರ್ ಎಂಬಾತನು ಮೇಲಾಧಿಕಾರಿಯ ಸಹಿಯನ್ನು ನಕಲು ಮಾಡಿ ಹಣ ದುರುಪಯೋಗ ಮಾಡಿಕೊಂಡಿದ್ದನು.

2009 ರಲ್ಲಿ ಸರ್ಕಾರದ ಒಂದು ಕೋಟಿಗೂ ಹೆಚ್ಚು ಹಣ ದುರುಪಯೋಗ ಮಾಡಿದ್ದ ಮೋಹನ್ ಕುಮಾರ್ ಗೆ 2 ವರ್ಷ ಶಿಕ್ಷೆ ಜೊತೆಗೆ ಸರ್ಕಾರಕ್ಕೆ 2 ಕೋಟಿ ರುಪಾಯಿ ಹಿಂದಿರುಗಿಸುವಂತೆ ನ್ಯಾಯಾಲಯ ಆದೇಶ ಹೊರಡಿಸಿದೆ.

English summary
Order was issued by the Tarikere JMFC court in Chikkamagalur district, which has convicted the accused of misappropriating government funds.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X