ಅರಣ್ಯ ಇಲಾಖೆಯಿಂದ ಆಪರೇಷನ್ ಭುವನೇಶ್ವರಿ ಪ್ರಾರಂಭ

ಚಿಕ್ಕಮಗಳೂರು, ನವೆಂಬರ್‌ 9: ಚಿಕ್ಕಮಗಳೂರು ಜಿಲ್ಲೆಯಲ್ಲಿ ಆನೆಯೊಂದು ಮಹಿಳೆಯನ್ನು ತುಳಿದು ಕೊಂದು ಹಾಕಿದ ಒಂದು ದಿನದ ನಂತರ, ಅರಣ್ಯಾಧಿಕಾರಿಗಳು ಆನೆವನ್ನು ಪತ್ತೆಹಚ್ಚಿ ಹಿಡಿಯಲು ಆಪರೇಷನ್‌ ಭುವನೇಶ್ವರಿ ಎಂಬ ಕಾರ್ಯಾಚರಣೆ ಆರಂಭಿಸಿದ್ದಾರೆ.

ಸಕ್ರೆಬೈಲು ಶಿಬಿರದಿಂದ ಮೂರು ಹಾಗೂ ದುಬಾರೆ ಶಿಬಿರದಿಂದ ನಾಲ್ಕು ತರಬೇತಿ ಪಡೆದ ಆನೆಗಳನ್ನು ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುತ್ತಿದೆ. ಬುಧವಾರ 32 ವರ್ಷದ ಮೀನಾ ಎಂಬ ಮಹಿಳಾ ಕೂಲಿಕಾರರು ಇತರ ಕೂಲಿಗಾರರೊಂದಿಗೆ ಗಾಳಿದುಂಡಿ ಗ್ರಾಮದ ತನ್ನ ಜಮೀನಿನಲ್ಲಿದ್ದಾಗ ಆನೆಯೊಂದು ತುಳಿದು ಸಾವನ್ನಪ್ಪಿದ್ದರು.

Operation Bhubaneswari launched by Forest Department

ಗ್ರಾಮಸ್ಥರ ಪ್ರಕಾರ ಆನೆಯ ಹಠಾತ್ ದಾಳಿ ಮಾಡಿ ಆಕೆಯನ್ನು ತುಳಿದು ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ತಿಳಿಸಿದ್ದಾರೆ. ಬಳಿಕ ಶಾಸಕಿ ನಯನಾ ಮೋಟಮ್ಮ ಅವರನ್ನು ತರಾಟೆಗೆ ತೆಗೆದುಕೊಂಡು ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವಂತೆ ಒತ್ತಾಯಿಸಿದರು. ಮೃತ ಮಹಿಳೆಯ ಕುಟುಂಬಕ್ಕೆ ಸಿಎಂ ಸಿದ್ದರಾಮಯ್ಯ 15 ಲಕ್ಷ ಪರಿಹಾರ ಘೋಷಿಸಿದ್ದಾರೆ.

ಕಳೆದ ಎರಡು ತಿಂಗಳಲ್ಲಿ ಇದೇ ಆನೆ ದಾಳಿಗೆ ಬಲಿಯಾದ ಎರಡನೇ ಪ್ರಕರಣ ಇದಾಗಿದೆ. ಸೆಪ್ಟೆಂಬರ್‌ನಲ್ಲಿ ದುರ್ಗ ಗ್ರಾಮದಲ್ಲಿ ಆನೆ ದಾಳಿಯಿಂದ ರೈತರೊಬ್ಬರು ಸಾವನ್ನಪ್ಪಿದ್ದರು.

ಆಪರೇಷನ್ ಭುವನೇಶ್ವರಿ:

ಮೂರು ತಿಂಗಳ ಹಿಂದೆ ಸಕಲೇಶಪುರದಿಂದ ಐದು ಆನೆಗಳ ಹಿಂಡು ಬಂದು ಚಿಕ್ಕಮಗಳೂರಿನ ಹೊಲಗಳ ಬಳಿ ಕಾಣಿಸಿಕೊಂಡಿತ್ತು. ಐದು ಆನೆಗಳಲ್ಲಿ ಮೂರು ಮರಿಗಳು ಮತ್ತು ಭುವನೇಶ್ವರಿ ಎಂಬ ಆನೆ ರೇಡಿಯೋ ಕಾಲರ್ ಹೊಂದಿದೆ. ಈ ಹಿಂಡಿಗೆ ಮತ್ತೆರಡು ಆನೆಗಳು ಸೇರಿಕೊಂಡು ಏಳು ಆನೆಗಳ ಗುಂಪಾಗಿದ್ದವು. ಗುಂಪಿನಿಂದ ಬೇರ್ಪಟ್ಟ ಆನೆಗಳ ಪೈಕಿ ಒಂದು ಆನೆ ಬೆಳೆಗಳನ್ನು ನಾಶಪಡಿಸುತ್ತಿದ್ದು, ಇಬ್ಬರನ್ನು ಕೊಂದು ಹಾಕಿದೆ ಎನ್ನಲಾಗಿದೆ.

ಎರಡು ಸಾವು ಹಾಗೂ ಸ್ಥಳೀಯರ ಪ್ರತಿಭಟನೆ ಬಳಿಕ ಸಿಎಂ ಆದೇಶದ ಮೇರೆಗೆ ಅರಣ್ಯ ಇಲಾಖೆ ಆನೆ ಹಿಡಿಯಲು ಕಾರ್ಯಾಚರಣೆ ಆರಂಭಿಸಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ಸಕ್ರೆಬೈಲು ಶಿಬಿರದಿಂದ ಮೂರು ಆನೆಗಳನ್ನು ಕರೆತಂದಿದ್ದು, ಮಡಿಕೇರಿಯ ದುಬಾರೆ ಶಿಬಿರದಿಂದ ನಾಲ್ಕು ಆನೆಗಳನ್ನು ಜಂಬೂ ಹಿಡಿಯಲು ಬಳಸಿಕೊಳ್ಳುವ ನಿರೀಕ್ಷೆಯಿದೆ. ಪಶುವೈದ್ಯಕೀಯ ವೈದ್ಯರು ಮತ್ತು ಟ್ರ್ಯಾಂಕ್ವಿಲೈಸರ್ ತಜ್ಞರನ್ನು ಸಹ ನಿಯೋಜಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+