ಇಂದು ನಂದಿಗಿರಿಧಾಮ ಹಾಗೂ ಸ್ಕಂಧಗಿರಿ ಬೆಟ್ಟಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ, ಏಕೆ? ಇಲ್ಲಿದೆ ವಿವರ
ಚಿಕ್ಕಬಳ್ಳಾಪುರ, ಜುಲೈ, 02: ಜುಲೈ 3 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಎರಡನೇ ಘಟಿಕೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಈ ಹಿನ್ನೆಲೆ ಭದ್ರತಾ ದೇಷ್ಟಿಯಿಂದ ಇಂದು (ಜುಲೈ 02) ನಂದಿ ಗಿರಿಧಾಮ ಹಾಗೂ ಸ್ಕಂದಗಿರಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.
ನಂಧಿಗಿರಿಧಾಮಕ್ಕೆ ಸಾರ್ವಜನಿಕ ಬೇಟಿ ನಿಷೇಧ
ಮುದ್ದೇನಹಳ್ಳಿಯ ಸತ್ಯಸಾಯಿಗ್ರಾಮಕ್ಕೆ ಭಾರತದ ರಾಷ್ಟ್ರಪತಿಗಳು ಬೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳಾದ ರವೀಂದ್ರ ಅವರು ನಂದಿಗಿರಿಧಾಮ ಹಾಗೂ ಸ್ಕಂಧಗಿರಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಿ ಆದೇಶ ಹೊರಡಿಸಿದ್ದಾರೆ.
ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಎರಡನೇ ಘಟಿಕೋತ್ಸವವನ್ನು ಜುಲೈ 3 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದ ಶ್ರೀ ಸತ್ಯಸಾಯಿ ಪ್ರೇಮಾಮೃತಂ ಸಭಾಭವನದಲ್ಲಿ ಆಯೋಜಿಸಲಾಗಿದೆ. ಸಂಸ್ಥಾಪಕರಾದ ಸದ್ಗುರು ಮಧುಸೂದನ ಸಾಯಿ ಅವರ ನೇತೃತ್ವದಲ್ಲಿ ನಡೆಯುವ ಘಟಿಕೋತ್ಸವದಲ್ಲಿ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಹಾಗಾದರೆ ಯಾರೆಲ್ಲ ಗೌರವ ಡಾಕ್ಟರೇಟ್ ಪದವಿಗೆ ಅರ್ಹರಾಗಿದ್ದಾರೆ ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.

ಮಧುಸೂದನ್ ಸಾಯಿ ಅವರು ಈ ಬಗ್ಗೆ ಮಾತನಾಡಿ, "ಭಾರತದ ಗೌರವಾನ್ವಿತ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರು ನಮ್ಮ ಘಟಿಕೋತ್ಸವಕ್ಕಾಗಿ ಸತ್ಯಸಾಯಿ ವಿಶ್ವವಿದ್ಯಾಲಯಕ್ಕೆ ಬರುತ್ತಿರುವುದು ನಮಗೆ ಹೆಮ್ಮೆಯ ವಿಚಾರವಾಗಿದೆ. ರಾಷ್ಟ್ರಪತಿಗಳು ಇದೇ ವೇಳೆ ಕಳೆದ ಹಲವು ದಶಕಗಳಿಂದ ರಾಷ್ಟ್ರ ನಿರ್ಮಾಣದ ಪ್ರಕ್ರಿಯೆಗೆ ಕೊಡುಗೆ ನೀಡುತ್ತಿರುವ ಆರು ಪ್ರಖ್ಯಾತ ಭಾರತೀಯರಿಗೆ ಗೌರವ ಡಾಕ್ಟರೇಟ್ ನೀಡಲಿದ್ದಾರೆ" ಎಂದು ಹೇಳಿದರು.
ಈ ವರ್ಷ ನೀಡಲಾಗುವ ಪದವಿಗಳನ್ನು ಪಡೆಯುವವರಲ್ಲಿ ಶೇಕಡಾ 62ರಷ್ಟು ಪದವೀಧರರು ಬಡತನ ರೇಖೆಗಿಂತ ಕೆಳಗಿನ (ಬಿಪಿಎಲ್) ಕುಟುಂಬಗಳಿಂದ ಬಂದವರು ಮತ್ತು ಶೇಕಡಾ 52ರಷ್ಟು ಗ್ರಾಮೀಣ ಯುವಜನರಾಗಿದ್ದಾರೆ ಎಂದರು. ಅಲ್ಲದೆ ದ್ರೌಪದಿ ಮುರ್ಮು ಅವರು ಬುಡಕಟ್ಟ ಜನಾಂಗಾದ ಹಿನ್ನೆಲೆಯಿಂದ ಬಂದರೂ ಅವರು ಭಾರತದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ಏರಿದವರು. ಹಾಗೆಯೇ ಅವರು ಪದವಿ ಪಡೆಯಲಿರುವ ವಿದ್ಯಾರ್ಥಿಗಳಿಗೆ ಅತ್ಯಂತ ಸ್ಪೂರ್ತಿದಾಯಕವಾಗಿದ್ದಾರೆ ಎಂದರು.
ಇಷ್ಟು ಜನರಿಗೆ ಗೌರವ ಡಾಕ್ಟರೇಟ್ ಪದವಿ ಪ್ರಧಾನ
1. ಪ್ರೊ ಅಜಯ್ ಕೆ ಸೂದ್ - ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ (ವಿಜ್ಞಾನ ಮತ್ತು ತಂತ್ರಜ್ಞಾನ)
2. ಗಾನಕಲಾಭೂಷಣ ವಿದ್ವಾನ್ ಡಾ ಆರ್ ಕೆ ಪದ್ಮನಾಭ - ಖ್ಯಾತ ಕರ್ನಾಟಕ ಸಂಗೀತ ಗಾಯಕ (ಸಂಗೀತ ಮತ್ತು ಕಲೆ)
3. ಶ್ರೀ ಪುಲ್ಲೆಲ ಗೋಪಿಚಂದ್ - ಭಾರತೀಯ ಬ್ಯಾಡ್ಮಿಂಟನ್ ತಂಡದ ಮುಖ್ಯ ರಾಷ್ಟ್ರೀಯ ತರಬೇತುದಾರ (ಕ್ರೀಡೆ ಮತ್ತು ದಾರ್ಢ್ಯತೆ)
4. ಡಾ ಪ್ರತಿಮಾ ಮೂರ್ತಿ - ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ ನಿರ್ದೇಶಕಿ (ಆರೋಗ್ಯ)
5. ವೇದ ವಿದ್ವಾಂಸ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪ್ರೊ.ವಿಜಯ್ ಶಂಕರ್ ಶುಕ್ಲಾ - ಅಧ್ಯಾಪಕರು, ಇಂದಿರಾಗಾಂಧಿ ನ್ಯಾಷನಲ್ ಸೆಂಟರ್ ಫಾರ್ ಆರ್ಟ್ಸ್ ಫಾರ್ ಎಜುಕೇಶನ್ (ಶಿಕ್ಷಣ)
6. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ತುಳಸಿ ಗೌಡ-ಭಾರತೀಯ ಪರಿಸರವಾದಿ (ಸಮಾಜ ಸೇವೆ ಮತ್ತು ಲೋಕೋಪಕಾರ).
ಪ್ರಸ್ತುತ ವಿದ್ಯಾರ್ಥಿಗಳಲ್ಲಿ ಶೇಕಡಾ 70ಕ್ಕಿಂತ ಹೆಚ್ಚು ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಿಗೆ ಸೇರಿದವರಾಗಿದ್ದಾರೆ. ಇನ್ನು ಸಂಸ್ಥೆಯು ತನ್ನ ಗುರಿ ಮತ್ತು ದೀರ್ಘಾವಧಿಯ ರಾಷ್ಟ್ರ ನಿರ್ಮಾಣದ ತತ್ವಗಳಿಗೆ ಬದ್ಧವಾಗಿರುವುದನ್ನು ಸಾಬೀತುಪಡಿಸುತ್ತದೆ. ಹಾಗೂ ಎಲ್ಲ ಅರ್ಹ ಮತ್ತು ನಿರ್ಗತಿಕ ಮಕ್ಕಳಿಗೆ ಮೌಲ್ಯಾಧಾರಿತ ಮತ್ತು ಅತ್ಯುನ್ನತ ಗುಣಮಟ್ಟದ ಶಿಕ್ಷಣವನ್ನು ಸಂಪೂರ್ಣ ಉಚಿತವಾಗಿ ನೀಡುವ ಮೂಲಕ ಸಮಾಜದಲ್ಲಿ ತನ್ನದೇ ಛಾಪು ಮೂಡಿಸಿದೆ.
ವಿಶ್ವವಿದ್ಯಾನಿಲಯವು ವೈವಿಧ್ಯಮಯ ಶೈಕ್ಷಣಿಕ ಕಾರ್ಯಕ್ರಮಗಳು, ಪರಿಣಿತ ಅಧ್ಯಾಪಕರು ಮತ್ತು ಆಧುನಿಕ ಮೂಲಸೌಕರ್ಯಗಳೊಂದಿಗೆ ಅತ್ಯುನ್ನತ ಶೈಕ್ಷಣಿಕ ಮಾನದಂಡಗಳಿಂದ ಕೂಡಿದ ಶಿಕ್ಷಣವನ್ನು ಮೊದಲ ತಲೆಮಾರಿನ ಸಾಕ್ಷರರಿಗೆ ಸಂಪೂರ್ಣ ಉಚಿತವಾಗಿ ನೀಡುತ್ತಿದೆ. ಅಲ್ಲದೆ ಪ್ರಪಂಚದಾದ್ಯಂತದ ಉನ್ನತ ಶಿಕ್ಷಣದಲ್ಲಿ ಅನುಸರಿಸುತ್ತಿರುವ ಅತ್ಯುನ್ನತ ಜಾಗತಿಕ ಮಾನದಂಡಗಳು ಮತ್ತು ಉತ್ತಮ ಅಭ್ಯಾಸಗಳಿಗೆ ಸರಿಸಮವಾದ ಶೈಕ್ಷಣಿಕ ವಾತಾವರಣವನ್ನು ವಿದ್ಯಾರ್ಥಿಗಳಿಗೆ ನೀಡುವುದು ಸಂಸ್ಥಾಪಕರ ಗುರಿಯಾಗಿದೆ.
ವಿಶ್ವವಿದ್ಯಾನಿಲಯವು ಮಧುಸೂದನ್ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಅನ್ನು ಸ್ಥಾಪಿಸಿದೆ. ಭಾರತದ ಮೊಟ್ಟಮೊದಲ ಈ ಉಚಿತ ವೈದ್ಯಕೀಯ ಕಾಲೇಜು ಅತ್ಯುನ್ನತ ಮೌಲ್ಯಗಳನ್ನು ಆಧರಿಸಿದ ವೈದ್ಯಕೀಯ ಶಿಕ್ಷಣವನ್ನು ನೀಡುತ್ತದೆ. ಇದನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇದೇ ಮಾರ್ಚ್ 25ರಂದು ಉದ್ಘಾಟಿಸಿದ್ದರು. ಈ ವೈದ್ಯಕೀಯ ಕಾಲೇಜು ಎಂಬಿಬಿಎಸ್ ಕೋರ್ಸ್‌ನ ಹೊರತಾಗಿ ಸಂಬಂಧಿತ ಆರೋಗ್ಯ ವಿಜ್ಞಾನ ಮತ್ತು ಶುಶ್ರೂಷೆ ಸ್ನಾತಕೋತ್ತರ ಕಾರ್ಯಕ್ರಮಗಳನ್ನು ಸಹ ನೀಡುತ್ತದೆ.












Click it and Unblock the Notifications