ರಾತ್ರೋ ರಾತ್ರಿ ಹಾಸ್ಟೆಲ್‌ಗೆ ಭೇಟಿ ನೀಡಿ ಸಾಂಬಾರ್ ಕುಡಿದ ಶಾಸಕ
ಚಿಕ್ಕಮಗಳೂರು, ಡಿಸೆಂಬರ್ 28: ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ, ರಾತ್ರೋ ರಾತ್ರಿ ಹಾಸ್ಟೇಲ್ ಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೂಡಿಗೆರೆ ತಾಲೂಕಿನ ಹೆಸ್ಗಲ್ ಗ್ರಾಮದ ಗಿರಿದರ್ಶಿನಿ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದ ಎಂ.ಪಿ.ಕುಮಾರಸ್ವಾಮಿ, ಸಾಂಬಾರ್ ರುಚಿ ನೋಡಿದರು. ಹಾಸ್ಟೆಲ್‌ನಲ್ಲೆಲ್ಲಾ ಓಡಾಡಿ ಹಾಸ್ಟೆಲ್ ಸ್ವಚ್ಛತೆ, ವ್ಯವಸ್ಥೆ, ಮೂಲಭೂತ ಸೌಕರ್ಯ ಪರಿಶೀಲನೆ ಮಾಡಿದರು.
ಸಾಂಬಾರ್ ಕುಡಿದ ನಂತರ ಅಡುಗೆ ಮನೆಗೆ ಹೋಗಿ ಆಹಾರ ಸಾಮಾಗ್ರಿಗಳನ್ನು ಪರಿಶೀಲನೆ ಮಾಡಿದರು. ಹಾಸ್ಟೆಲ್‌ನ ದಾಸ್ತಾನು, ಅದರ ಲೆಕ್ಕಾಚಾರಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ವಿದ್ಯಾರ್ಥಿಗಳೊಂದಿಗೂ ಚರ್ಚೆ ಮಾಡಿದ ಕುಮಾರಸ್ವಾಮಿ, ಸೇರಿದಂತೆ ಊಟ ಇನ್ನೀತರ ಮೂಲಭೂತ ಸಮಸ್ಯೆಗಳೆಲ್ಲವೂ ಸರಿ ಇವೆಯೇ ಎಂದು ವಿದ್ಯಾರ್ಥಿಗಳನ್ನು ಕೇಳಿ ಉತ್ತರ ಪಡೆದುಕೊಂಡರು.
ಮೊನ್ನೆ ಜಿಲ್ಲಾ ಪಂಚಾಯತ್ ಕೆಡಿಪಿ ಸಭೆಯಲ್ಲಿ ಹಾಸ್ಟೇಲ್‌ಗಳ ಅವ್ಯವಸ್ಥೆ ಬಗ್ಗೆ ಚರ್ಚೆ ಆಗಿತ್ತು, ಈ ಹಿನ್ನಲೆ ವಿದ್ಯಾರ್ಥಿ ನಿಲಯಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.












Click it and Unblock the Notifications