CT Ravi: ರಾಹುಲ್‌ಗಾಂಧಿ ಮೂರ್ಖರ ನಾಯಕ- ಸಿಟಿ ರವಿ
ಚಿಕ್ಕಮಗಳೂರು ಸೆಪ್ಟೆಂಬರ್ 29: ಒಂದೆಡೆ ಮುಡಾ ಹಗರಣ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್ ದಾಖಲಾದರೆ, ಮತ್ತೊಂಡೆದೆ ಚುನಾವಣಾ ಬಾಂಡ್‌ಗಳ ಮೂಲಕ ಸುಲಿಗೆ ಮಾಡಿದ ಆರೋಪದ ಪ್ರಕರಣದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಎರಡೂ ಪ್ರಬಲ ಪಕ್ಷಗಳು ಈಗ ಈ ವಿಚಾರವಾಗಿ ಪರಸ್ಪರ ವಾಗ್ದಾಳಿ ಶುರು ಮಾಡಿವೆ. ನಿರ್ಮಲಾ ಸೀತಾರಾಮನ್, ವಿಜಯೇಂದ್ರ, ಕಟೀಲ್ ಮೇಲೆ ಕೇಸ್ ದಾಖಲಾಗಿರುವ ಬಗ್ಗೆ ಮಾಜಿ ಸಚಿವ ಸಿ.ಟಿ. ರವಿ ಪ್ರತಿಕ್ರಿಯೆ ನೀಡಿದ್ದಾರೆ.
ಇಂದು ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಸಿಟಿ ರವಿ, 'ರಾಜಕೀಯ ಪ್ರೇರಿತವಾಗಿ ಎಫ್ಐಆರ್ ದಾಖಲಿಸಿದ್ದಾರೆ. ಚುನಾವಣಾ ಬಾಂಡ್ ವೈಯಕ್ತಿಕವಲ್ಲ, ಪಾರ್ಲಿಮೆಂಟ್ ನಲ್ಲಿ ಪಾಸ್ ಮಾಡಿ, ಆಯೋಗದ ಗಮನಕ್ಕೂ ಬಂದಿದೆ. ರಾಜಕೀಯ ಪಕ್ಷಗಳಿಗೆ ನಿಧಿ ಸಂಗ್ರಹಿಸಲು ಪಾರದರ್ಶಕ ವ್ಯವಸ್ಥೆ ಹುಟ್ಟು ಹಾಕಿದ್ದು, ಆಯಾ ಪಕ್ಷಗಳ ಸಾಮರ್ಥ್ಯ, ಬೆಂಬಲ, ಹಿತೈಷಿಗಳ ಅನುಗುಣವಾಗಿ ಚುನಾವಣಾ ಬಾಂಡ್ ಸಿಕ್ಕಿದೆ' ಎಂದು ಸಮರ್ಥಿಸಿಕೊಂಡಿದ್ದಾರೆ.

'ಕಾಂಗ್ರೆಸ್ಸಿಗೆ ಚುನಾವಣಾ ಬಾಂಡ್ ಸಿಕ್ಕಿಲ್ವಾ, ಮೊದಲು ಸೂಟ್ ಕೇಸ್, ಮೂಟೆಯಲ್ಲಿ ಕದ್ದು ತೆಗೆದುಕೊಳ್ತಿದ್ರು. ಮೋದಿ ಚುನಾವಣೆಯಲ್ಲೂ ಪಾರದರ್ಶಕತೆ ಇರಲಿ ಎಂದು ಚುನಾವಣಾ ಬಾಂಡ್ ತಂದ್ರು. ಪಾರದರ್ಶಕ ವ್ಯವಸ್ಥೆ ತಪ್ಪೋ... ಕದ್ದು ಸೂಟ್ಕೇಸ್ ತೆಗೆದೊಳ್ತಿದ್ದದ್ದು ತಪ್ಪೋ... ಕಾಂಗ್ರೆಸ್ ಕದ್ದು ಸೂಟ್ಕೇಸ್ ತೆಗೆದುಕೊಳ್ತಿರೋದು ಸರಿ, ಪಾರ್ದರ್ಶಕತೆ ತಪ್ಪು ಅಂತಿದೆ' ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶಗೊಂಡರು.
'ಪಾರದರ್ಶಕ ವ್ಯವಸ್ಥೆಯಲ್ಲಿ ಕದ್ದು ಯಾರಿಗೆ, ಯಾರು, ಎಷ್ಟು ಅನ್ನೋದು ಗೊತ್ತಾಗಬಾರದು ಅನ್ನೋದು ಕಾಂಗ್ರೆಸ್ ಉದ್ದೇಶ... ಇಂದು ಕಾಂಗ್ರೆಸ್ ಅಕ್ರಮಕ್ಕೆ ಪ್ರೋತ್ಸಾಹ ಕೊಡುವ ಮಾತನ್ನ ಆಡುತ್ತಿದೆ. ಪಾರದರ್ಶಕ, ಪ್ರಾಮಾಣಿಕತೆ ಹುಟ್ಟು ಹಾಕಿದವರ ಮೇಲೆ ಕೇಸ್ ದಾಖಲಿಸಿದೆ. ತೊಂದರೆ ಇಲ್ಲ, ಇವೆಲ್ಲವನ್ನೂ ನಾವು ಎದುರಿಸುತ್ತೇವೆ. ಮುಡಾ ಪ್ರಕರಣಕ್ಕೂ ಅದಕ್ಕೂ ಹೋಲಿಕೆ ಮಾಡಬಾರದು. ಮುಡಾ ವ್ಯಕ್ತಿಗತ ಸ್ವಾರ್ಥದಿಂದ, ಡಿನೋಟಿಫೈ, ಕನ್ವರ್ಷನ್ ನಿಂದ ನಿವೇಶನ ಪಡೆಯೋವರೆಗೂ ಸ್ವಹಿತಾಸಕ್ತಿ ಇದೆ' ಎಂದು ಸಿಟಿ ರವಿ ಹೇಳಿದರು.
ರಾಹುಲ್‌ಗಾಂಧಿ ಮೂರ್ಖರ ನಾಯಕ- ಸಿಟಿ ರವಿ
ಇದೇ ವೇಳೆ ರಾಮಮಂದಿರ ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮ ನಾಚ್ ಗಾನ ಎಂದು ಹೇಳಿದ ರಾಹುಲ್ ಗಾಂಧಿ ವಿರುದ್ಧ ಸಿ.ಟಿ.ರವಿ ಕಿಡಿ ಕಾರಿದರು. 'ರಾಹುಲ್‌ಗಾಂಧಿ ಮೂರ್ಖರ ನಾಯಕ. ರಾಮಮಂದಿರಕ್ಕೆ ಮೊದಲ ಅಡಿಗಲ್ಲು ಇಟ್ಟಿದ್ದೇ ಓರ್ವ ದಲಿತ, ಎಲ್ಲಾ ಜನರೂ ಇದ್ರು. ರಾಮಮಂದಿರ ನ್ಯಾಸ್ ಸಮಿತಿ ಈ ಎಲ್ಲವನ್ನೂ ಆಯೋಜನೆ ಮಾಡಿತ್ತು. ಬಡವರು, ಶ್ರೀಮಂತರು ಎಲ್ಲರೂ ಅದರಲ್ಲಿ ಪಾಲ್ಗೊಂಡಿದ್ದರು. ರಾಮನ ವಿರೋಧಿಸಿ, ಕಾಲ್ಪನಿಕ ವ್ಯಕ್ತಿ ಅಂತ ಅಫಿಡವಿಟ್ ಕೊಟ್ಟು, ರಾಮನೆ ಇಲ್ಲ ಅಂದಿದ್ದು ಕಾಂಗ್ರೆಸ್' ಎಂದು ಕಿಡಿ ಕಾರಿದರು.

ರಾಮಸೇತುವೆಯೇ ಕಾಲ್ಪನಿಕ ಎಂದಿದ್ದು ಕಾಂಗ್ರೆಸ್ ತಾನು ಅಧಿಕಾರದಲ್ಲಿ ಇದ್ದಾಗ. ಹಾಗಾಗಿ, ಮೂರ್ಖರಂತೆ ಮಾತನಾಡೋದು ರಾಹುಲ್ ಗಾಂಧಿಗೆ ಹೊಸದಲ್ಲ. ರಾಹುಲ್ ಗಾಂಧಿಯನ್ನ ಮೂರ್ಖರ ರಾಜ ಅಂತ ಕರೀಬೋದು. ಹಾಗಾಗಿಯೇ, ಆಗಾಗ ಮೂರ್ಖರಂತೆ ಮಾತನಾಡುತ್ತಿರುತ್ತಾರೆ. ಅಮೆರಿಕಾ ಹೋಗಿ ಭಾರತ ತೆಗಳೋದು ದೇಶ ಭಕ್ತರು ಮಾಡೋ ಕೆಲಸವಲ್ಲ. ರಾಹುಲ್‌ಗಾಂಧಿ ಮೂರ್ಖರಂತೆ ಮಾತನಾಡಿ, ಮೂರ್ಖರ ಸ್ವರ್ಗದಲ್ಲಿ ವಿಹರಿಸೋದು ಹೊಸತಲ್ಲ ಎಂದು ವಾಗ್ದಾಳಿ ಮಾಡಿದರು.
ಚುನಾವಣಾ ಬಾಂಡ್
ಚುನಾವಣಾ ಬಾಂಡ್‌ಗಳ ಮೂಲಕ ಸುಲಿಗೆ ಮಾಡಿದ ಆರೋಪದ ಪ್ರಕರಣದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಇಡಿ ಅಧಿಕಾರಿಗಳು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಇತರ ರಾಷ್ಟ್ರೀಯ ಪಕ್ಷದ ನಾಯಕರು, ಬಿಜೆಪಿ ಕರ್ನಾಟಕ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿವೈ ವಿಜಯೇಂದ್ರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.












Click it and Unblock the Notifications