• search
  • Live TV
ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಿನಿಂದ ಮೂಡಿಗೆರೆಗೆ ವಾಪಸ್ಸಾದ ಶಾಸಕ ಕುಮಾರಸ್ವಾಮಿ?

By ಚಿಕ್ಕಮಗಳೂರು ಪ್ರತಿನಿಧಿ
|

ಚಿಕ್ಕಮಗಳೂರು, ಆಗಸ್ಟ್ 20: ಸಚಿವ ಸ್ಥಾನದ ತೀವ್ರ ಆಕಾಂಕ್ಷಿಯಾಗಿದ್ದ ಮೂಡಿಗೆರೆ ಬಿಜೆಪಿ ಶಾಸಕ ಕುಮಾರಸ್ವಾಮಿ ಮೂಡಿಗೆರೆಗೆ ವಾಪಸ್ಸಾಗಿದ್ದಾರೆ.

ಕೈತಪ್ಪಿದ ಸಚಿವ ಸ್ಥಾನ: ಪಕ್ಷದ ವಿರುದ್ಧ ಅಸಮಾಧಾನ ಹೊರಹಾಕಿದ ಶಾಸಕರು

ನಿನ್ನೆ ತಡರಾತ್ರಿವರೆಗೆ ಬೆಂಗಳೂರಿನಲ್ಲೇ ಇದ್ದ ಅವರು, ಇಂದು ನಡೆದ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮಕ್ಕೂ ಗೈರಾಗಿದ್ದರು. ಈ ಮೂಲಕ ತಮಗೆ ಸಚಿವ ಸ್ಥಾನ ನೀಡದಿರುವ ಕುರಿತು ಅಸಮಾಧಾನಗೊಂಡಿದ್ದಾರೆ. ಬಲಗೈ ಸಮುದಾಯಕ್ಕೆ ಪ್ರಾತಿನಿಧ್ಯ ಸಿಗದಿರುವ ಕುರಿತೂ ಒಳಗೊಳಗೇ ಬೇಸರಗೊಂಡಿದ್ದಾರೆ.

"ನಾಳೆ ಯಡಿಯೂರಪ್ಪನವರು ಪ್ರವಾಹ ಪರಿಸ್ಥಿತಿ ವೀಕ್ಷಣೆಗೆ ಬರುವ ಹಿನ್ನೆಲೆಯಲ್ಲಿ ಕ್ಷೇತ್ರಕ್ಕೆ ಬಂದಿದ್ದೇನೆ. ನಾನೇನು ಸಚಿವನಾಗಿಲ್ಲ. ಆದ್ದರಿಂದ ಹಾಗೇ ಕ್ಷೇತ್ರಕ್ಕೆ ವಾಪಸ್ ಬಂದೆ. ನಮ್ಮ ಸಮುದಾಯಕ್ಕೆ ಮುಂದಿನ ಬಾರಿಯಾದರೂ ಸ್ಥಾನ ನೀಡಲಿ. ನಮ್ಮ ಸಮುದಾಯವನ್ನು ನಿರ್ಲಕ್ಷಿಸದೇ ಇರಲಿ" ಎಂದಿದ್ದಾರೆ.

English summary
Mla Kumaraswamy disappointed about cabinet expansion and returned to mudigere today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X