• search
  • Live TV
ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಹಾಡಿಗೆ ಸಿ.ಟಿ.ರವಿ ಸಖತ್‌ ಸ್ಟೆಪ್ಸ್‌

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ನವೆಂಬರ್‌, 11: ಚಿಕ್ಕಮಗಳೂರು ತಾಲೂಕಿನ ಲಕ್ಕಮ್ಮನಹಳ್ಳಿಯಲ್ಲಿ ನಡೆದ ಯುವಸಂಜೆ ಕಾರ್ಯಕ್ರಮದಲ್ಲಿ ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಹಾಡಿಗೆ ಸಿ.ಟಿ. ರವಿ ಸಖತ್ ಸ್ಟೆಪ್‌ ಹಾಕಿದ್ದಾರೆ. ಹಾಗೆಯೇ ಶಾಸಕರ ಜೊತೆಗೆ ಅಕ್ಕ-ಪಕ್ಕದಲ್ಲಿದ್ದ ಯುವಕರು ಕೂಡ ಹುಚ್ಚೆದ್ದು ಕುಣಿದು ಸಂಭ್ರಮಿಸಿದ್ದಾರೆ.

ನಿಡಘಟ್ಟ: ನಾನು ಪ್ರೀತಿಯ ರಾಜಕಾರಣ ಮಾಡಿದವನಾಗಿದ್ದೇನೆ, ಸಿ.ಟಿ.ರವಿನಿಡಘಟ್ಟ: ನಾನು ಪ್ರೀತಿಯ ರಾಜಕಾರಣ ಮಾಡಿದವನಾಗಿದ್ದೇನೆ, ಸಿ.ಟಿ.ರವಿ

ಅಷ್ಟೇ ಅಲ್ಲದೇ ಚಿಕ್ಕಮಗಳೂರು ತಾಲೂಕು ಕೇತಮಾರನಹಳ್ಳಿಯ ಗೊಲ್ಲರಹಟ್ಟಿ ಗ್ರಾಮಕ್ಕೆ ಭೇಟಿ ನೀಡಿದ ಸಿ.ಟಿ.ರವಿ, ಅಲ್ಲಿಯೂ ಕೂಡ ತಮ್ಮಲ್ಲಿ ಒಳ್ಳೆಯ ನೃತ್ಯಗಾರ ಇದ್ದಾನೆ ಅನ್ನುವುದನ್ನು ಮನದಟ್ಟು ಮಾಡಿದ್ದಾರೆ. ಊರಿನ ಜನರ ಅಪೇಕ್ಷೆ ಮೇರೆಗೆ ಹೆಜ್ಜೆ ಹಾಕಿ ಸ್ಥಳೀಯರ ಮನಗೆದ್ದಿದ್ದಾರೆ. ಕೇತಮಾರನಹಳ್ಳಿಯಲ್ಲೂ ಕೂಡ ಸಿ.ಟಿ.ರವಿ ಕುಣಿಯುತ್ತಿದ್ದಂತೆ ಊರಿನ ಯುವಕರು ಸಿ.ಟಿ.ರವಿ ಜೊತೆ ಕುಣಿದು ಕುಪ್ಪಳಿಸಿರುವುದು ಗಮನ ಸೆಳೆದಿದೆ.

ಡಿಜೆ ಸೌಂಡ್‌ಗೆ ಹೆಜ್ಜೆ ಹಾಕಿದ್ದ ಸಿ.ಟಿ ರವಿ
ಹಾಗೆಯೇ ಇತ್ತೀಚೆಗಷ್ಟೇ ಚಿಕ್ಕಮಗಳೂರು ನಗರದ ಹಿಂದೂ ಮಹಾ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಡಿಜೆ ಸೌಂಡ್‌ಗೆ ಹೆಜ್ಜೆ ಹಾಕಿ ಸಿ.ಟಿ.ರವಿ ಗಮನ ಸೆಳೆದಿದ್ದರು. ವರ್ಷದಿಂದ ವರ್ಷಕ್ಕೂ ಮೆರಗು ಹೆಚ್ಚಿಸಿಕೊಳ್ಳುತ್ತಿರುವ ಹಿಂದೂ ಮಹಾ ಗಣಪತಿ ಮೆರವಣಿಗೆಗೆ ಈ ಬಾರಿಯೂ ನಿರೀಕ್ಷೆಗೆ ಮೀರಿ ಜನರು ಸೇರಿ ಭಕ್ತಿ ಸಮರ್ಪಿಸಿದ್ದರು. ಕಳೆದ 9 ವರ್ಷಗಳಿಂದ ನಗರದದಲ್ಲಿ ಪ್ರತಿಷ್ಟಾಪನೆ ಮಾಡುತ್ತಿರುವ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಮಕ್ಕಳು, ಯುವಕ, ಯುವತಿಯರು, ವಯಸ್ಕರೆಲ್ಲರೂ ಕಲೆತು ಕುಣಿದು, ಕುಪ್ಪಳಿಸಿದ್ದರು. ಮೆರವಣಿಗೆಯುದ್ದಕ್ಕೂ ನಿವಾಸಿಗಳು ಪೂಜೆ, ಮಂಗಳಾರತಿ ಮಾಡಿಸಿ ಲಂಬೋದರನಿಗೆ ವಂದಿಸಿದ್ದರು. ಬಸವನಹಳ್ಳಿ ಓಂಕಾರೇಶ್ವರ ದೇವಸ್ಥಾನದಿಂದ ಹೊರಟ ಮೆರವಣಿಗೆ ಆಶೀರ್ವಾದ ಸರ್ಕಲ್, ವಿಜಯಪುರ ಮುಖ್ಯ ರಸ್ತೆ, ಮಲ್ಲಂದೂರು ರಸ್ತೆ, ಉಪ್ಪಳ್ಳಿ ವೃತ್ತದ ವರೆಗೆ ತೆರಳಿ ಹಿಂದಿರುಗಿ ಬಂದು ಐಜಿ ರಸ್ತೆ, ರಾಘವೇಂದ್ರ ಸ್ವಾಮಿ ಮಠದ ರಸ್ತೆ, ಬಸವನಹಳ್ಳಿ ಮುಖ್ಯ ರಸ್ತೆ, ಹನುಮಂತಪ್ಪ ವೃತ್ತ, ಕೆಎಂ ರಸ್ತೆ ಮೂಲಕ ಬಸವನಹಳ್ಳಿ ಕೆರೆಗೆ ತಲುಪಿತ್ತು.

MLA CT Ravi dance at yuvasanje program of Lakkammanahalli

ಗಮನ ಸೆಳೆದಿದ್ದ ವಿವಿಧ ನೃತ್ಯಗಳು
ಬಿಳಿ ಬಣ್ಣದ ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸಿದ ಹಿಂದೂ ಮಹಾ ಗಣಪತಿ ಸಮಿತಿ ಸದಸ್ಯರು ಮೆರವಣಿಗೆಗೆ ವಿಶೇಷ ಕಳೆ ತಂದಿದ್ದರು. ಅಲ್ಲದೆ ಸಂಭ್ರಮದ ಮೆರವಣಿಗೆಗೆ ಭಕ್ತಿ, ಭಾವವನ್ನು ತುಂಬಿದ್ದರು. ವೀರಗಾಸೆ, ಡೊಳ್ಳು ತಂಡಗಳು ಮೆರವಣಿಗೆಗೆ ರಂಗು ತುಂಬಿದ್ದವು. ದಾರಿಯುದ್ಧಕ್ಕೂ ಡಿಜೆ ಸದ್ದಿಗೆ ಸಹಸ್ರಾರು ಜನ ಏಕ ಕಾಲದಲ್ಲಿ ಹೆಜ್ಜೆ ಹಾಕಿ ಗಮನ ಸೆಳೆದಿದ್ದರು. ಯುವತಿಯರು ಗುಂಪು ನೃತ್ಯ ಮಾಡಿ, ಕುಣಿದು ಕುಪ್ಪಳಿಸಿದ್ದರು. ಹಾಗೆಯೇ ಹಿಂದೂ ಮಹಾಸಭಾ ಗಣಪತಿ ವಿರ್ಸಜನೆಯಲ್ಲಿ ಡಿಜೆ ಸೌಂಡ್‌ಗೆ ಚಿಕ್ಕಮಗಳೂರು ಶಾಸಕ ಸಿ.ಟಿ ರವಿ ಯುವಕರೊಂದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದ್ದರು. ಬೆಂಗಳೂರಿನಿಂದ ಆಗಮಿಸಿದ್ದ ಸಿ.ಟಿ ರವಿ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ಅಲ್ಲದೆ ಯುವಕರೊಂದಿಗೆ ಕುಣಿಯುವ ಮೂಲಕ ಗಮನಸೆಳೆದರು.

English summary
Yuvasanje program held at Lakkammanahalli of Chikkamagaluru taluk, C.T. Ravi Dance to kuladalli kilyavudo huccappa song, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X