Get Updates
Get notified of breaking news, exclusive insights, and must-see stories!

ಕಾಫಿನಾಡಿನಲ್ಲಿ ನಕಲಿ ಮದ್ಯಕ್ಕೆ ವ್ಯಕ್ತಿ ಬಲಿ: ರಸ್ತೆ ಮಧ್ಯೆ ಶವವಿಟ್ಟು ಮಹಿಳೆಯರ ಪ್ರತಿಭಟನೆ

ಚಿಕ್ಕಮಗಳೂರು ನಗರ ಪ್ರದೇಶದಿಂದ ದೂರವಿರುವ ಮಲೆನಾಡಿನ ಕಾಡಾಂಚಿನ ಗ್ರಾಮವಾಗಿರುವ ಕೊಪ್ಪ ತಾಲೂಕಿನ ಹಿತ್ಲೆಗುಳಿ ಗ್ರಾಮದಲ್ಲಿರುವ ಅಂಗಡಿಗಳಲ್ಲಿ ನಕಲಿ ಮದ್ಯ ಮಾರಾಟ ಮಾಡುತ್ತಿದ್ದು ಇದರಿಂದ ಒಂದೇ ತಿಂಗಳಲ್ಲಿ ಇದೆ ಗ್ರಾಮದ ನಾಲ್ವರು ಸಾವನ್ನಪ್ಪಿದ್ದಾರೆ.

ಚಿಕ್ಕಮಗಳೂರು, ಮಾರ್ಚ್ 23: ಜಿಲ್ಲೆಯ ಕೊಪ್ಪ ತಾಲೂಕಿನ ಹಿತ್ಲೆಗುಳಿ ಗ್ರಾಮ ಮಲೆನಾಡಿನ ಕುಗ್ರಾಮ. ಬುಧವಾರ ಗ್ರಾಮದಲ್ಲಿ ಯುಗಾದಿಯ ಸಂಭ್ರಮ ಮನೆ ಮಾಡಿದ್ದರೆ, ಅದೊಂದು ಮನೆ ಮುಂದೆ ಮಾತ್ರ ಸೂತಕದ ಛಾಯೆ ಆವರಿಸಿತ್ತು. ಯುಗಾದಿ ಸಂಭ್ರಮದಲ್ಲಿದ್ದ ಗ್ರಾಮದಲ್ಲಿ ನಕಲಿ ಮದ್ಯದ ವಿಷ ಜೀವವನ್ನೇ ಬಲಿ ಬಲಿ ಪಡೆದಿತ್ತು.

ಒಂದಲ್ಲ-ಎರಡಲ್ಲ ಒಂದು ತಿಂಗಳಲ್ಲಿ ಒಂದೇ ಗ್ರಾಮದಲ್ಲಿ ನಾಲ್ವರು ಈ ನಕಲಿ ಮದ್ಯದಿಂದ ಸಾವನ್ನಪ್ಪಿದ್ದರು. ಹೀಗಾಗಿ ಬುಧವಾರ ಊರಿನ ಜನ ಕೂಡ ಹಬ್ಬ ಬಿಟ್ಟು ನಕಲಿ ಮದ್ಯದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ನಕಲಿ ಮದ್ಯದಿಂದ ಕುಟುಂಬದ ವ್ಯಕ್ತಿಯನ್ನು ಕಳೆದು ಕೊಂಡ ಮಹಿಳೆಯರು ರೊಚ್ಚಿಗೆದ್ದಿದ್ದು ರಸ್ತೆ ಮಧ್ಯೆ ಶವವಿಟ್ಟು ಮದ್ಯದ ಅಂಗಡಿಗಳಿಗೆ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿದರು.

Man Dies Due To After Consuming Liquor In Chikkamagaluru

ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಹಿತ್ಲೆಗುಳಿ ಗ್ರಾಮದಲ್ಲಿ ನಕಲಿ ಮದ್ಯ ಸೇವಿಸಿ ಇದೇ ಗ್ರಾಮದ ನಿವಾಸಿ ಪುಟ್ಟೇಗೌಡ ಸಾವನ್ನಪ್ಪಿದ್ದರು. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ನಕಲಿ ಮದ್ಯಕ್ಕೆ ಬಲಿಯಾದ ಪುಟ್ಟೇಗೌಡರ ಶವವನ್ನು ಹಿತ್ಲೆಗುಳಿ ಗ್ರಾಮದ ರಸ್ತೆಯ ಮಧ್ಯೆಯಿಟ್ಟು ಪ್ರತಿಭಟನೆ ನಡೆಸಿದರು.

ನಗರ ಪ್ರದೇಶದಿಂದ ದೂರವಿರುವ ಮಲೆನಾಡಿನ ಕಾಡಾಂಚಿನ ಗ್ರಾಮವಾಗಿರುವ ಕೊಪ್ಪ ತಾಲೂಕಿನ ಹಿತ್ಲೆಗುಳಿ ಗ್ರಾಮದಲ್ಲಿರುವ ಅಂಗಡಿಗಳಲ್ಲಿ ನಕಲಿ ಮದ್ಯ ಮಾರಾಟ ಮಾಡುತ್ತಿದ್ದು ಇದರಿಂದ ಒಂದೇ ತಿಂಗಳಲ್ಲಿ ಇದೆ ಗ್ರಾಮದ ನಾಲ್ವರು ಸಾವನ್ನಪ್ಪಿದ್ದಾರೆ. ಹೀಗಾಗಿ ಈ ನಕಲಿ ಮದ್ಯಕ್ಕೆ ಬ್ರೇಕ್ ಬೀಳಲೇಬೇಕು ಎಂದು ಗ್ರಾಮದ ಮಹಿಳೆಯರು ಪಟ್ಟು ಹಿಡಿದು ಯುಗಾದಿ ಹಬ್ಬದ ದಿನವೇ ಬೀದಿಗಿಳಿದು ಪ್ರತಿಭಟನೆ ನಡೆಸಿದರು.

ಕಳೆದ ಮೂರು ತಿಂಗಳಿನಿಂದ ಗ್ರಾಮದಲ್ಲಿ ನಕಲಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಗ್ರಾಮಸ್ಥರು ದೂರು ನೀಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇದರ ಪರಿಣಾಮವಾಗಿ ಹಿತ್ಲೆಗುಳಿ ಗ್ರಾಮದ ನಾಲ್ವರು ಒಂದೇ ತಿಂಗಳಿನಲ್ಲಿ ಬಲಿಯಾಗಿದ್ದಾರೆ ಎಂದು ಆರೋಪಿಸಿ ಇಂದು ಮೃತಪಟ್ಟ ಪುಟ್ಟೇಗೌಡನ ಶವವಿಟ್ಟು ಪ್ರತಿಭಟನೆ ನಡೆಸಿದರು.

Man Dies Due To After Consuming Liquor In Chikkamagaluru

ಪ್ರತಿಭಟನಾ ಸ್ಥಳಕ್ಕೆ ಬಂದ ಜಯಪುರ ಠಾಣೆಯ ಪೊಲೀಸರ ವಿರುದ್ದ ಗ್ರಾಮಸ್ಥರು ಆಕ್ರೋಶ ಹೊರಹಾಕಿ ಪೊಲೀಸರ ಮುಂದೆಯೆ ನಕಲಿ ಮದ್ಯ ಮಾರಾಟ ಮಾಡುವ ಅಂಗಡಿಗಳಿಗೆ ಮಹಿಳೆಯರು ಮತ್ತಿಗೆ ಹಾಕಿ ಮದ್ಯ ಮಾರಾಟ ಮಾಡುವವರನ್ನು ಬಂಧಿಸುವಂತೆ ಆಕ್ರೋಶ ವ್ಯಕ್ತಪಡಿಸಿದರು.

ಕಾಫಿನಾಡ ಮಲೆನಾಡು ಗ್ರಾಮಗಳಲ್ಲಿ ನಕಲಿ ಮದ್ಯದ ಹಾವಳಿ ಹೆಚ್ಚಾಗಿದ್ದು, ಜೀವಗಳನ್ನ ಬಲಿ ಪಡೆಯುತ್ತಿದೆ. ದುರಂತ ಎಂದರೆ, ನಕಲಿ ಮದ್ಯ ದಂಧೆಗೆ ಕಡಿವಾಣ ಹಾಕಬೇಕಾದ ಪೊಲೀಸರು ಮೌನಕ್ಕೆ ಶರಣಾಗಿದ್ದಾರೆ ಎನ್ನಲಾಗಿದೆ. ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಪೊಲೀಸರ ಮೌನ ಕಂಡು ಸ್ಥಳೀಯರು ಆಕ್ರೋಶಗೊಂಡಿದ್ದು, ಇನ್ನೆಷ್ಟು ಬಲಿ ಬೇಕು ಎಂದು ಪೊಲೀಸರಿಗೆ ಪ್ರಶ್ನಿಸಿದ್ದಾರೆ. ನಕಲಿ ಮದ್ಯದ ವಿಷ ಇನ್ನಷ್ಟು ಜನರನ್ನ ಬಲಿ ಪಡೆಯುವ ಮುನ್ನ ಪೊಲೀಸರು ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎನ್ನುವುದು ಸ್ಥಳೀಯರ ಆಗ್ರಹ.

ಯುಗಾದಿ ಹಬ್ಬದಂದೇ ಇಬ್ಬರನ್ನು ಬಲಿ ಪಡೆದ KSRTC

ಕೆಎಸ್‌ಆರ್‌‌ಟಿಸಿ ಬಸ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ನಗರದ ಎಪಿಎಂಸಿ ಬಳಿ ನಡೆದಿದೆ. ಶ್ರೀಧರ್(24) ಹಾಗೂ ದಯಾನಂದ್( 30) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.

ಮೃತ ಶ್ರೀಧರ್ ತಾಲೂಕಿನ ಜಾವಗಲ್ ಮೂಲದವರು. ದಯಾನಂದ್ ನಗರದ ದಂಟರಮಕ್ಕಿ ಬಡಾವಣೆ ನಿವಾಸಿ ಎನ್ನುವ ಮಾಹಿತಿ ಲಭ್ಯವಾಗಿದೆ. ಬುಧವಾರ ಸಂಜೆ ಐದು ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಚಿಕ್ಕಮಗಳೂರು ಕಡೆಯಿಂದ ಕಡೂರು ಕಡೆ ತೆರಳುತ್ತಿದ್ದ ಸರ್ಕಾರಿ ಬಸ್ ಹಾಗೂ ಎ.ಐ.ಟಿ. ಸರ್ಕಲ್ ಕಡೆಯಿಂದ ನಗರಕ್ಕೆ ಆಗಮಿಸುತ್ತಿದ್ದ ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ. ಅಪಘಾತದ ರಭಸಕ್ಕೆ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅಪಘಾತವಾಗುತ್ತಿದ್ದಂತೆ ಸ್ಥಳಿಯರು ಗಾಯಾಳುಗಳನ್ನು ಆಸ್ಪತ್ರೆ ದಾಖಲಿಸಲು ಮುಂದಾಗಿದ್ದಾರೆ. ಆದರೆ, ಅಪಘಾತದ ತೀವ್ರತೆಯಿಂದಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತ ಸಂಭವಿಸುತ್ತಿದ್ದಂತೆ ಕೆಎಸ್‌ಆರ್‌‌ಟಿಸಿ ಬಸ್ ಚಾಲಕ ಬಸ್‌ ಅನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸರ್ಕಾರಿ ಬಸ್ ಚಾಲಕನ ನಿರ್ಲಕ್ಷ್ಯದ ವಿರುದ್ಧ ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಚಿಕ್ಕಮಗಳೂರು ಸಂಚಾರಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+