ಲವ್ ಜಿಹಾದ್ ಎಂಬುದೇ ವ್ಯವಸ್ಥಿತ ಷಡ್ಯಂತ್ರ; ಶೋಭಾ ಕರಂದ್ಲಾಜೆ
ಚಿಕ್ಕಮಗಳೂರು, ನವೆಂಬರ್ 4: "ಲವ್ ಜಿಹಾದ್ ಹೆಸರಲ್ಲಿ ವ್ಯವಸ್ಥಿತವಾಗಿ ಷಡ್ಯಂತ್ರವನ್ನು ರೂಪಿಸಲಾಗುತ್ತಿದೆ. ಇದು ಕೇವಲ ಪ್ರೀತಿ, ಪ್ರೇಮ, ಮದುವೆಗೆ ಉಳಿದಿಲ್ಲ" ಎಂದು ಆರೋಪಿಸಿದ್ದಾರೆ ಸಂಸದೆ ಶೋಭಾ ಕರಂದ್ಲಾಜೆ.
ಚಿಕ್ಕಮಗಳೂರಿನಲ್ಲಿ ಬುಧವಾರ ಮಾತನಾಡಿದ ಅವರು, "ಲವ್ ಜಿಹಾದ್ ಎನ್ನುವುದೇ ಒಂದು ಷಡ್ಯಂತ್ರವಾಗಿದೆ. ಭಯೋತ್ಪಾದಕತೆಯ ಮತ್ತೊಂದು ಮುಖ ಇದಾಗಿದೆ. ಒಂದು ಕೋಮಿನ ಜನಸಂಖ್ಯೆ ಹೆಚ್ವಿಸುವ ತಂತ್ರ ಇದರ ಹಿಂದೆ ಕೆಲಸ ಮಾಡುತ್ತಿದೆ" ಎಂದಿದ್ದಾರೆ.
ಲವ್ ಜಿಹಾದ್ ಗೆ ಸಂಬಂಧಿಸಿದಂತೆ ಅವರೇ ಮಾತನಾಡಿರುವುದು, ಭಾಷಣ ಮಾಡಿರುವ ಸಂಗತಿ ಈಚೆಗೆ ಬೆಳಕಿಗೆ ಬರುತ್ತಿವೆ. ಓವೈಸಿಯಂಥ ಕೋಮುವಾದಿಗಳು ನಿರಾತಂಕವಾಗಿ, ಬಹಿರಂಗವಾಗಿ ಮಾತನಾಡುತ್ತಿದ್ದಾರೆ, ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದು ಆತಂಕ ತರುವ ವಿಷಯವೂ ಹೌದು ಎಂದು ಹೇಳಿದರು.

ಉಡುಪಿಯಲ್ಲಿ 17 ವರ್ಷದ ಯುವತಿಯೊಂದಿಗೆ ಯುವಕ ನಾಪತ್ತೆಯಾಗಿದ್ದಾನೆ. ಇದೂ ಒಂದು ಷಡ್ಯಂತ್ರ. ಚಿಕ್ಕ ಹೆಣ್ಣು ಮಕ್ಕಳಿಗೆ ಹಣದ ಆಮಿಷವನ್ನು ತೋರಿಸಿ ಸಮಾಜವನ್ನು ಅವರ ಪರವಾಗಿ ಪರಿವರ್ತಿಸುವ ಹುನ್ನಾರ ಸದ್ದಿಲ್ಲದೇ ನಡೆಯುತ್ತಿದೆ. ಇದರ ಬಗ್ಗೆ ಕಠಿಣ ಕ್ರಮದ ಅಗತ್ಯವಿದೆ ಎಂದು ದೂರಿದ್ದಾರೆ.












Click it and Unblock the Notifications