ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಣಿಸಿಕೊಂಡ ಮಿಡತೆಗಳು
ಚಿಕ್ಕಮಗಳೂರು, ಜೂನ್ 10: ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಕಾಣಿಸಿಕೊಂಡಿದ್ದ ಮಿಡತೆಗಳು ಈಗ ಕಾಫಿ ನಾಡಿಗೂ ಕಾಲಿಟ್ಟಿದ್ದು, ಮಲೆನಾಡಿಗರು ಕಂಗಾಲಾಗಿದ್ದಾರೆ.
ಜಿಲ್ಲೆಯ ಶೃಂಗೇರಿ ತಾಲೂಕಿನ ತೆಕ್ಕೂರು ಎಂಬ ಗ್ರಾಮದಲ್ಲಿ ಅಡಿಕೆ ತೋಟಗಳ ಮೇಲೆ ದಾಳಿ ಮಾಡಿರುವ ಮಿಡತೆಗಳು ಅಡಿಕೆ ಮರದ ಗರಿಗಳನ್ನು ಸಂಪೂರ್ಣ ನಾಶ ಮಾಡಿವೆ. ಅಡಿಕೆ ತೋಟದಲ್ಲಿ ಮಿಡತೆಗಳನ್ನು ಕಂಡ ಮಲೆನಾಡಿಗರು ಕಂಗಾಲಾಗಿದ್ದಾರೆ. ಕಳೆದ ಎರಡು ದಶಕಗಳಿಂದ ಅಡಿಕೆಗೆ ಹಳದಿ ಎಲೆ ರೋಗ ತಗುಲಿದ್ದು ಔಷಧಿಯೇ ಇಲ್ಲದ ರೋಗಕ್ಕೆ ಮಲೆನಾಡಿಗರು ಚಿಂತೆಗೊಳಗಾಗಿದ್ದರು. ಹತೋಟಿಗೆ ಬಾರದ ಈ ರೋಗಕ್ಕೆ ಬೇಸತ್ತ ಮಲೆನಾಡಿಗರು ಗ್ರಾಮಗಳನ್ನು ತ್ಯಜಿಸಿ, ತೋಟ ಮನೆಗಳನ್ನು ಪಾಳು ಬಿಟ್ಟು ನಗರ ಸೇರಿದ್ದರು.

ಮಲೆನಾಡಿನ ಸ್ಥಿತಿ ಹೀಗಿರುವಾಗ ಕಳೆದ ಎರಡು ವರ್ಷಗಳ ನಿರಂತರ ಭಾರೀ ಮಳೆಯಿಂದ ಅಡಿಕೆ ತೋಟಕ್ಕೆ ಕೊಳೆ ರೋಗ ಕೂಡ ಆವರಿಸಿತ್ತು. ಇಂಥ ಸಂಕಷ್ಟದ ಸ್ಥಿತಿಯಲ್ಲಿ ಮಿಡತೆ ಕಾಣಿಸಿಕೊಂಡಿರುವುದು ಈಗ ಮಲೆನಾಡಿಗರನ್ನು ಇನ್ನಷ್ಟು ಆತಂಕಕ್ಕೆ ಒಳಗಾಗುವಂತೆ ಮಾಡಿದೆ.













Click it and Unblock the Notifications