"ನಿಮ್ಮ ಮಕ್ಕಳನ್ನು ಹದ್ದುಬಸ್ತಿನಲ್ಲಿಡಿ ಯಡಿಯೂರಪ್ಪನವರೇ"

ಚಿಕ್ಕಮಗಳೂರು, ಆಗಸ್ಟ್ 19: "ಯಡಿಯೂರಪ್ಪನವರೇ ನಿಮ್ಮ ಮಕ್ಕಳನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಿ. ವ್ಯಾಪಾರ ಮಾಡಲು ಬಿಡಬೇಡಿ. ವ್ಯಾಪಾರ ಮಾಡಲು ಬಿಟ್ರೆ, 2010ರಲ್ಲಿ ಜೈಲಿಗೆ ಹೋಗಿ ಬಂದಂತೆ ಮತ್ತೆ ಅದೇ ಸ್ಥಾನಕ್ಕೆ ಹೋಗಬೇಕಾಗುತ್ತೆ ಎಚ್ಚರ" ಎಂದಿದ್ದಾರೆ ಮಾಜಿ ಸಿಎಂ ಕುಮಾರಸ್ವಾಮಿ.

ಚಿಕ್ಕಮಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ಯಡಿಯೂರಪ್ಪನವರಿಗೆ ಫೋನ್ ಟ್ಯಾಪಿಂಗ್ ಗೆ ಸಂಬಂಧಿಸಿದಂತೆ ತಿರುಗೇಟು ನೀಡಿದರು. ಅವರ ಮಗ ವಿಜಯೇಂದ್ರ ಅವರ ಟ್ವೀಟ್ ಕುರಿತೂ ಪ್ರತಿಕ್ರಿಯಿಸಿದರು. "ಟ್ವೀಟ್ ಮಾಡೋದು ಸುಲಭ, ಅದು ಮುಖ್ಯವಲ್ಲ. ನಿಮ್ಮ ಕೆಲಸದ ಕಡೆ ಗಮನ ಕೊಡಿ. ಕೃಷ್ಣ ಕಚೇರಿಯಲ್ಲಿ ಮಾರ್ಕೆಟ್ ದಂಧೆ ಮಾಡ್ಕೊಂಡಿದ್ದೀರ" ಎಂದು ಆರೋಪಿಸಿದ್ದಾರೆ.

"ನಾನೂ ಸಾವಿರ ಟ್ವೀಟ್ ಮಾಡಬಲ್ಲೆ. ನಾನು ಯಾವ ರೀತಿ ಬದುಕಬೇಕು ಅನ್ನೋದನ್ನು ನಿಮ್ಮಿಂದ ಕಲಿಯಬೇಕಿಲ್ಲ. ಮರ್ಯಾದೆಗೆ ಬದುಕಿರೋರು ನಾವು, ನಿಮ್ಮ ಥರ ಅಲ್ಲ. ಟ್ವೀಟ್ ಮಾಡೋದು ಬಿಟ್ಟು ಮರ್ಯಾದೆಯಿಂದ ಬದುಕಲು ಕಲಿಯಿರಿ" ಎಂದು ವಾರ್ನಿಂಗ್ ನೀಡಿದ್ದಾರೆ.

Kumaraswamy Reacts To Yeddyurappa In Chikkamagaluru

ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಮಿಷನ್ ದಂಧೆಯ ಜನಕ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮಗ ಹಾಗೂ ಬಿಜೆಪಿ ಯುವನಾಯಕ ಬಿ.ವೈ. ವಿಜಯೇಂದ್ರ ಆರೋಪ ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+