ಮೂಡಿಗೆರೆ: ತಿರುವಿನಲ್ಲಿ ಓವರ್ ಟೇಕ್‌ ಮಾಡ್ಬೇಡಿ ಅಂದಿದ್ದಕ್ಕೆ ಕಾರು ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ KSRTC ಬಸ್ ಚಾಲಕ

ಚಿಕ್ಕಮಗಳೂರು, ಅಕ್ಟೋಬರ್‌, 28: ಕೆಎಸ್‌ಆರ್‌ಟಿಸಿ ಬಸ್ ಚಾಲಕರೊಬ್ಬರು ಕಾರು ಚಾಲಕನಿಗೆ ಕ್ಷುಲ್ಲಕ ಕಾರಣಕ್ಕೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರದಲ್ಲಿ ನಡೆದಿದೆ.

ತಿರುವಿನಲ್ಲಿ ಏಕೆ ಓವರ್ ಟೇಕ್‌ ಮಾಡ್ತೀರಾ ಎಂದು ಕಾರು ಚಾಲಕ ಬಸ್ ಚಾಲಕನಿಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಕೆರಳಿದ ಬಸ್ ಚಾಲಕ ಕೊಟ್ಟಿಗೆಹಾರದಲ್ಲಿ ಬಸ್ ನಿಲ್ಲಿಸಿ ಕಾರು ಚಾಲಕನಿಗೆ ಥಳಿಸಿದ್ದಾರೆ. ಬಸ್ ಚಾಲಕನ ದಾಳಿಗೆ ಕಾರು ಚಾಲಕನು ರಕ್ತದ ಮಡುವಿನಲ್ಲಿ ಬಿದ್ದಿದ್ದು, ಕ್ಷುಲ್ಲಕ ಕಾರಣಕ್ಕೆ ಇಬ್ಬರು ಚಾಲಕರು ಬಡಿದಾಡಿಕೊಂಡದ್ದಾರೆ.

KSRTC bus driver who beat car driver in Kottigehara

ಚಾಲಕರ ನಡುವೆ ಒಂದು ಗಂಟೆಯ ವರೆಗೂ ಕಿತ್ತಾಟ ನಡೆದಿದ್ದು, ಇದನ್ನು ಕಂಡು ಸ್ಥಳೀಯರು ಶಾಕ್ ಆಗಿದ್ದಾರೆ. ನಂತರ ಸ್ಥಳೀಯರು ಜಗಳ ಬಿಡಿಸಲು ಹೋಗಿದ್ದು, ಸ್ಥಳೀಯರ ಮಾತಿಗೂ ಬೆಲೆ ಕೊಡದ ಬಸ್ ಚಾಲಕ ಜಗಳ ಮಾಡಿದ್ದಾರೆ. ಇಬ್ಬರ ಜಗಳ ಕಂಡು ಪ್ರಯಾಣಿಕರು ತಬ್ಬಿಬ್ಬಗಿದ್ದಾರೆ. ಅಷ್ಟೇ ಅಲ್ಲದೆ ಕಾರು ಚಾಲಕ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾನೆ. ಈ ಸಂಬಂಧ ಮೂಡಿಗೆರೆ ತಾಲೂಕಿನ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+