ಇದು ವಿದೇಶಿ ಕಾಂಗ್ರೆಸ್: ಸಿ.ಟಿ.ರವಿ ಹೀಗೆ ಹೇಳಿದ್ದು ಏಕೆ?
ಚಿಕ್ಕಮಗಳೂರು, ಜೂನ್, 10: ಕಾಂಗ್ರೆಸ್ ನಾಯಕರು ಬಿಜೆಪಿ ಜಾರಿ ಮಾಡಿದ್ದ ಪಠ್ಯಗಳನ್ನು ತೆಗೆಯುವ ನಿರ್ಧಾರವನ್ನು ವ್ಯಕ್ತಪಡಿದ್ದರು. ಇದಕ್ಕೆ ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿ ಪ್ರತಿಕ್ರಿಯಿಸಿದ್ದು, ಇದು ವಿದೇಶಿ ಕಾಂಗ್ರೆಸ್. ಕಾಂಗ್ರೆಸ್ ತೆಗೆಯುತ್ತಿರುವುದು ಸ್ವಾತಂತ್ರ್ಯ ಹೋರಾಟಗಾರರ ಕುರಿತ ಪಠ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಗತ್ ಸಿಂಗ್, ರಾಜ್ ಗುರು, ಸುಖ್ ದೇವ್ ಅವರ ತ್ಯಾಗ-ಬಲಿದಾನದ ಪಠ್ಯಗಳನ್ನು ಇಡಲಾಗಿದೆ. ಈ ಪಠ್ಯಗಳನ್ನು ತೆಯಲು ನಿರ್ಧರಿಸಿರುವ ಕಾಂಗ್ರೆಸ್ ನಾಯಕರನ್ನು ವಿದೇಶಿಗರಿಗೆ ಹೋಲಿಕೆ ಮಾಡಿದ್ದಾರೆ. ಹಾಗೆಯೆ ತಾಯಿ ಭಾರತೀಯ ಅಮರ ಪುತ್ರರು ಎಂಬ ಲೇಖನವನ್ನು ತೆಗೆಯಲು ಕಾಂಗ್ರೆಸ್ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ರೂಪಿಸಿದ್ದ ಪಠ್ಯದಲ್ಲಿ ಮಕ್ಕಳ ಭವಿಷ್ಯ ಇಲ್ಲ
ಇನ್ನು ಸರ್ಕಾರಗಳು ಬಂದಾಗ ಶಾಲಾ ಪಠ್ಯಗಳು ಬದಲಾಗುತ್ತದೆ. ಈ ಹಿಂದೆ ಬಿಜೆಪಿ ಸರ್ಕಾರ ಮಾಡಿದ್ದ ಪಠ್ಯವನ್ನು ಕಾಂಗ್ರೆಸ್ ಸರ್ಕಾರ ತೆಗೆಯಬೇಕು ಎಂದು ಖ್ಯಾತ ಸಾಹಿತಿ ಕುಂ.ವೀರಭದ್ರಪ್ಪ ಚಾಮರಾಜನಗರದಲ್ಲಿ ಇತ್ತೀಚೆಗಷ್ಟೇ ಹೇಳಿದ್ದರು. ಹಾಗೆಯೇ ಯಾರ ಲೇಖನಕ್ಕೆ ಹೆಚ್ಚಾಗಿ ಬೆದರಿಕೆ ಕರೆಗಳು ಬರುತ್ತವೆಯೋ ಆತನೇ ನಿಜವಾದ ಲೇಖಕ ಎಂದು ಹೇಳುವ ಮೂಲಕ ಬಿಜೆಪಿಗೆ ತಿವಿದಿದ್ದರು.
ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಮಾಡಿದ್ದ ಪಠ್ಯ 500 ವರ್ಷಗಳ ಹಿಂದಕ್ಕೆ ಕರೆದುಕೊಂಡು ಹೋಗಿದೆ. ಅವರು ರೂಪಿಸಿದ್ದ ಪಠ್ಯದಲ್ಲಿ ಮಕ್ಕಳ ಭವಿಷ್ಯ ಇರಲಿಲ್ಲ. ವೈಚಾರಿಕತೆ ಇರಲಿಲ್ಲ. ಪಠ್ಯ ರಚನೆ ಸಮಿತಿಗೆ ಅಪಕ್ವ ರೋಹಿತ್ ಚಕ್ರತೀರ್ಥ ಅಧ್ಯಕ್ಷನನ್ನಾಗಿ ಮಾಡಿದ್ದು ನಾಗೇಶ್ ಮಾಡಿದ ಮೊದಲ ತಪ್ಪು ಎಂದು ಕಿಡಿಕಾರಿದ್ದರು.
ಇದೀಗ ಹೊಸ ಸರ್ಕಾರ ಬಂದಿದ್ದು, ಬರಗೂರು ರಾಮಚಂದ್ರಪ್ಪ ಸಮಿತಿಯ ಪಠ್ಯವನ್ನೇ ಜಾರಿ ಮಾಡಬೇಕು. ಸಾವರ್ಕರ್, ಹೆಡ್ಗೆವಾರ್ ಎಂಬ ಹುಸಿ ದೇಶಭಕ್ತರ ಪಠ್ಯವನ್ನು ತೆಗೆಯಬೇಕು. ಯಾವ ಪಠ್ಯವನ್ನು ಬೋಧೀಸಬೇಕು ಎಂದು ಸರ್ಕಾರ ಕೂಡಲೇ ಸುತ್ತೋಲೆ ಹೊರಡಿಸಿಬೇಕು ಎಂದು ಆಗ್ರಹಿಸಿದ್ದರು.
ಭಾರತೀಯತೆ, ಸಂಸ್ಕೃತಿ ಪಠ್ಯಕ್ರಮ ಎಂದು ಸುನೀಲ್ ಕುಮಾರ್ ಹೇಳಿರುವುದು ಅಪಕ್ವ ಹೇಳಿಕೆ. ಭಾರತೀಯತೆ ಎಂದರೆ ಎಲ್ಲರನ್ನೂ ಒಳಗೊಳ್ಳುವ ಸಮಗ್ರತೆ. ಹಿಂದೂ, ಮುಸ್ಲಿಂ, ಜೈನ, ಕ್ರೈಸ್ತ, ಪಾರ್ಸಿ ಎಲ್ಲರನ್ನೂ ಒಳಗೊಳ್ಳಬೇಕು. ಆರ್‌ಎಸ್‌ಎಸ್‌ನದ್ದು ಭಾರತೀಯತೆ ಅಲ್ಲ ಎಂದು ತಿರುಗೇಟು ಕೊಟ್ಟಿದ್ದರು.
ಈ ಹಿಂದೆ ನಡೆಸಿದ್ದ ಹಿಂದುಳಿದ ವರ್ಗಗಳ ಆರ್ಥಿಕ, ಸಾಮಾಜಿಕ ಗಣತಿ ವರದಿ ಬಹಿರಂಗವಾಗಬೇಕು. ಬ್ರಾಹ್ಮಣ ಸೇರಿದಂತೆ ಎಲ್ಲಾ ವರ್ಗಗಳಲ್ಲಿ ಯಾರು ಹಿಂದುಳಿದಿರುವರೋ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ, ಅನುದಾನ ಕೊಡಬೇಕು ಎಂದು ಆಗ್ರಹಿಸಿದ್ದರು.
ಕಳೆದ 15 ದಿನಗಳ ಹಿಂದೆಯೂ ನನಗೆ ಬೆದರಿಕೆ ಪತ್ರ ಬಂದಿದೆ. ಯಾವ ಲೇಖಕನಿಗೆ ಹೆಚ್ಚು ಬೆದರಿಕೆ ಪತ್ರ ಬರುವೋದೋ ಆತನೇ ನಿಜವಾದ ಲೇಖಕ. ಲೇಖಕನಿಗೆ ಬೆದರಿಕೆ ಪತ್ರಗಳು ಪ್ರೇಮಪತ್ರಗಳು ಇದ್ದಂತೆ ಎಂದು ಕೊಂಡಿದ್ದೇನೆ. ಮೋದಿಯನ್ನು ಅವಹೇಳನ ಮಾಡುತ್ತೀರಿ, ಮುಸ್ಲಿಂರನ್ನು ಒಲೈಸುತ್ತೀರಿ ಎಂದು ಬೆದರಿಕೆ ಪತ್ರಗಳು ಬರುತ್ತಿದ್ದು, ಒಟ್ಟು ನನಗೆ 16 ಪತ್ರಗಳು ಬಂದಿದೆ ಎಂದರು.
ಬಡವರಿಗೆ ಕೊಟ್ರೆ ಇವರಪ್ಪನ ಗಂಟು ಹೋಗೋದೇನು?
ಇದೇ ವೇಳೆ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಸಂಬಂಧ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳು ಬಡವರ ಪರವಾದ ಯೋಜನೆಗಳು. ಬಡವರಿಗೆ 10 ಕೆ.ಜಿ. ಅಕ್ಕಿ ಕೊಟ್ಟರೇ ಇವರಪ್ಪನ ಗಂಟು ಹೋಗೋದೆನೋ.? ಬಿಜೆಪಿ ಅವರು ಲೋಕಸಭೆಯಲ್ಲಿ ಗೆಲ್ಲಬೇಕಾದರೇ ಗ್ಯಾರಂಟಿ ಯೋಜನೆ ಬೆಂಬಲಿಸಬೇಕು ಎಂದಿದ್ದರು.












Click it and Unblock the Notifications