Get Updates
Get notified of breaking news, exclusive insights, and must-see stories!

ಹೆಂಡತಿಯ ಅಕ್ರಮ ಸಂಬಂಧ ಕಂಡು ರುಂಡ ಕಡಿದು ಪೊಲೀಸ್ ಠಾಣೆಗೆ ತಂದ ಗಂಡ

ಚಿಕ್ಕಮಗಳೂರು, ಸೆಪ್ಟೆಂಬರ್ 10 : ಹೆಂಡತಿಗೆ ಅಕ್ರಮ ಸಂಬಂಧ ಇದೆ ಎಂಬ ಕಾರಣಕ್ಕೆ ಆಕೆಯನ್ನು ಕೊಂದು, ರುಂಡವನ್ನು ಪೊಲೀಸ್ ಠಾಣೆಗೆ ಹೊತ್ತೊಯ್ದ ಆರೋಪಿ ಬಗ್ಗೆ ಇದೀಗ ಬಹಳ ಚರ್ಚೆ ನಡೆಯುತ್ತಿದೆ. ಹೆಂಡತಿಯ ತಲೆ ಕಡಿದು, ತಂದು ಪೊಲೀಸ್ ಠಾಣೆಯಲ್ಲಿ ನಿಂತ ಆರೋಪಿ ಸತೀಶ್. ಆತನ ಪತ್ನಿ ಹೆಸರು ರೂಪಾ.

ಅವರಿಬ್ಬರು ಮೂರು ವರ್ಷ ಕಾಲ ಪ್ರೀತಿಸಿ ಮದುವೆಯಾದವರು. ಚಿನ್ನದಂಥ ಎರಡು ಮಕ್ಕಳಿವೆ. ಆತ ದುಡಿಮೆಗಾಗಿ ಅಂತಲೇ ಹಗಲು-ಇರುಳು ಲೆಕ್ಕಿಸದೆ ಶ್ರಮಿಸುತ್ತಿದ್ದ. ಈಕೆ ಪರಪುರುಷನ ತೆಕ್ಕೆಯಲ್ಲಿ ಬಂಧಿಯಾದಳು. 3 ಲಕ್ಷ ಸಾಲ ಮಾಡಿ ಪ್ರಿಯಕರನಿಗೆ ಕೊಟ್ಟು, ಗಂಡನ ವಿರುದ್ಧವೇ ಪೊಲೀಸರಿಗೆ ದೂರು ಕೊಟ್ಟಿದ್ದಳು.

ಹೇಗೋ ದೊಡ್ಡವರೆಲ್ಲ ಸೇರಿ ರಾಜಿ-ಸಂಧಾನ ಮಾಡಿಸಿದರು. ಆದರೆ ತನ್ನ ಚಾಳಿ ಮಾತ್ರ ಆಕೆ ಬಿಡಲಿಲ್ಲ. ಪ್ರೀತಿಸಿ ಮದುವೆಯಾದವಳನ್ನು ಯಾವಾಗ ಮತ್ತೊಬ್ಬನ ತೋಳ ತೆಕ್ಕೆಯಲ್ಲಿ ಆಕೆಯಿರುವುದನ್ನು ಕಂಡನೋ ಕೊಂದೇಬಿಟ್ಟ. ಈ ಘಟನೆ ನಡೆದಿರುವುದು ಚಿಕ್ಕಮಗಳೂರಲ್ಲಿ. ಸತೀಶ್ ತರೀಕೆರೆ ತಾಲೂಕಿನ ಶಿವನಿಯವನು. ಅದೇ ಗ್ರಾಮದ ರೂಪಾಳನ್ನು 9 ವರ್ಷದಿಂದೆ ಪ್ರೀತಿಸಿ ಮದುವೆಯಾಗಿದ್ದ. 2 ಮಕ್ಕಳು ಇದ್ದವು.

Illicit relationship: Man beheaded his Wife and walks into police station

ಬೆಂಗಳೂರಲ್ಲಿ ಚಾಲಕನಾಗಿದ್ದ ಸತೀಶ್, ಹೆಂಡತಿ- ಮಕ್ಕಳಾ ಸಲುವಾಗಿ ಶಿವನಿ ರೈಲು ನಿಲ್ದಾಣದ ಬಳಿ ಕೋಳಿ ಅಂಗಡಿ ಇಟ್ಟಿದ್ದ. ಇಷ್ಟೆಲ್ಲ ಪ್ರೀತಿ-ಜವಾಬ್ದಾರಿಯಿಂದ ನೋಡಿಕೊಳ್ಳುತ್ತಿದ್ದ ಹೆಂಡತಿ ಮತ್ತೊಬ್ಬ ಗಂಡಿನ ಜತೆ ಆತ್ಮೀಯವಾಗಿ ಇರುವುದನ್ನು ಕಂಡು ಮಚ್ಚು ಬೀಸಿದ್ದಾನೆ. ಆಕೆಯ ಜೊತೆಗಿದ್ದವನು ತಪ್ಪಿಸಿಕೊಂಡಿದ್ದಾನೆ.

ಆ ಬಳಿಕ ಹೆಂಡತಿಯ ತಲೆ ಕಡಿದು, 20 ಕಿ.ಮೀ. ದೂರದ ಅಜ್ಜಂಪುರ ಠಾಣೆಗೆ ಬೈಕ್ ನಲ್ಲಿ ಬಂದು, ಕತ್ತಿ ಹಾಗೂ ರುಂಡದ ಸಮೇತ ಶರಣಾಗಿದ್ದಾನೆ. ಸತೀಶ್ ನನ್ನು ನೋಡಿದ ಅಜ್ಜಂಪುರ ಪೊಲೀಸರೇ ಅರೆ ಕ್ಷಣ ಗಾಬರಿಯಾಗಿದ್ದಾರೆ.

ಸತೀಶ್ ತನ್ನ ಹೆಂಡತಿಯ ಮುಂಡವನ್ನು ರೈಲು ನಿಲ್ದಾಣ ಬಳಿಯ ಪ್ಲಾಂಟೇಷನ್ ನಲ್ಲಿ ಹಾಕಿದ್ದಾನೆ. ಹೆಂಡತಿ ಸಾವನ್ನಪ್ಪಿದರೆ, ಗಂಡ ಜೈಲು ಪಾಲಾಗುತ್ತಿದ್ದಾನೆ. ಇವರಿಬ್ಬರ ಆ ಎರಡು ಪುಟ್ಟ ಮಕ್ಕಳ ಭವಿಷ್ಯ ಹೇಗೆ ಎಂಬುದು ಆತಂಕಕ್ಕೆ ಹಾಗೂ ಅನುಕಂಪಕ್ಕೆ ಕಾರಣವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+