ಪುಲ್ವಾಮಾ ದಾಳಿ ಬಗ್ಗೆ 2 ವರ್ಷದ ಹಿಂದೆಯೇ ಎಚ್‌ಡಿಕೆಗೆ ಗೊತ್ತಿತ್ತು
Recommended Video

ಚಿಕ್ಕಮಗಳೂರು, ಏಪ್ರಿಲ್ 05: ಪುಲ್ವಾಮಾ ದಾಳಿ ಆಗುವ ಬಗ್ಗೆ ಎರಡು ವರ್ಷಗಳ ಹಿಂದೆಯೇ ನನಗೆ ಗೊತ್ತಿತ್ತು, ಸೇನೆಯ ನಿವೃತ್ತ ಅಧಿಕಾರಿಯೊಬ್ಬರು ಈ ಬಗ್ಗೆ ನನಗೆ ತಿಳಿಸಿದ್ದರು ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಮುಂದಿನ ಲೋಕಸಭಾ ಚುನಾವಣೆಗೆ ಮುನ್ನ ಭಾರತ-ಪಾಕ್ ನಡುವೆ ಸಂಘರ್ಷ ನಡೆಯುತ್ತೆ, ಏನಾದ್ರು ಕಥೆ ಸೃಷ್ಟಿ ಮಾಡಿ ಮೋದಿ ಮತ ಕೇಳುತ್ತಾರೆ ಎಂದು ಎರಡು ವರ್ಷದ ಹಿಂದೆಯೇ ಎಂದು ನಿವೃತ್ತ ಸೇನಾಧಿಕಾರಿ ಹೇಳಿದ್ದರು ನನ್ನ ಬಳಿ ಚರ್ಚೆ ಮಾಡಿದ್ದರು ಈಗ ಅದೇ ರೀತಿಯಲ್ಲಿ ಆಗಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅವರು ಈ ವಿಷಯವನ್ನು ಹೇಳಿದ್ದಾರೆ.

'70 ವರ್ಷ ದೇಶ ಭದ್ರವಾಗಿರಲಿಲ್ಲವಾ?'
ದೇಶವನ್ನು ಸುಭದ್ರವಾಗಿ ಇಡುವ ಪ್ರಧಾನ ಮಂತ್ರಿ ಬೇಕು ಎಂದು ಮೋದಿ ಹೇಳುತ್ತಿದ್ದಾರೆ, ಹಾಗಾದರೆ 70 ವರ್ಷ ದೇಶ ಸುಭದ್ರವಾಗಿ ಇರಲಿಲ್ಲವಾ ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದರು. ದೇವೇಗೌಡ ಅವರು ಪ್ರಧಾನಿಯಾಗಿದ್ದಾಗ ಒಂದೂ ಭಯೋತ್ಪಾದಕ ಕೃತ್ಯಗಳು ನಡೆದಿರಲಿಲ್ಲ ಎಂದು ಅವರು ಹೇಳಿದರು.

'ದೇವೇಗೌಡರು ಪ್ರಧಾನಿ ಆಗಿದ್ದಾಗ ಶಾಂತಿ ಇತ್ತು'
ದೇವೇಗೌಡ ಅವರು ಪ್ರಧಾನಿ ಆಗಿದ್ದಾಗ ಎಲ್ಲಾದರೂ ಬಾಂಬ್ ದಾಳಿ, ಅಮಾಯಕರ ಬಲಿ ನಡದಿತ್ತ? ಯೋಧರನ್ನು ಗುಂಡಿಕ್ಕಿ ಕೊಲ್ಲುಕ ಘಟನೆ ಆಗ ನಡೆದಿತ್ತಾ? ಆದರೆ ಈಗ ಅವರ ಉಳಿವಿಗೆ ದೇಶದ ಸೈನಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ನಿಮ್ಮನ್ನು ದಾರಿ ತಪ್ಪಿಸುತ್ತಿರುವ ಇಂತಹ ಪ್ರಧಾನ ಮಂತ್ರಿ ಬೇಕಾ? ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

'ಧರ್ಮ ರಕ್ಷಣೆಯಲ್ಲಿ ನಾವೇ ಮುಂದೆ'
ಇವರಿಗೆ ಅಭಿವೃದ್ಧಿ ಬದಲು ಧರ್ಮದ ರಾಜಕಾರಣ ಬೇಕಾಗಿದೆ. ನಮ್ಮ ಕುಟುಂಬದವರು ಶೃಂಗೇರಿಯ ಪರಮ ಭಕ್ತರು. ಧರ್ಮದ ರಕ್ಷಣೆಯಲ್ಲಿ ನಾವು ಅವರಿಗಿಂತ ಮುಂದಿದ್ದೇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

45 ಯೋಧರ ಬಲಿ ಪಡೆದಿದ್ದ ದಾಳಿ
ಕಾಶ್ಮೀರದ ಪುಲ್ವಾಮಾ ಬಳಿ ಸಿಆರ್‌ಪಿಎಫ್ ಯೋಧರ ವಾಹನದ ಮೇಲೆ ಉಗ್ರನೋರ್ವ ಆತ್ಮಾಹುತಿ ದಾಳಿ ನಡೆಸಿದ ಪರಿಣಾಮ 45 ಯೋಧರು ಮೃತರಾಗಿದ್ದರು. ಈ ದಾಳಿಯ ಬಗ್ಗೆ ನನಗೆ ಎರಡು ವರ್ಷ ಹಿಂದೆಯೇ ಗೊತ್ತಿತ್ತು ಎಂದು ಕುಮಾರಸ್ವಾಮಿ ಈಗ ಹೇಳಿದ್ದಾರೆ.












Click it and Unblock the Notifications