ಕಾಫಿನಾಡಿನಲ್ಲಿ ಮತ್ತೆ ಭುಗಿಲೆದ್ದ ಧರ್ಮ ದಂಗಲ್: ಕಿಗ್ಗಾ ಜಾತ್ರೆಯಲ್ಲಿ ಅನ್ಯಧರ್ಮದ ವ್ಯಾಪಾರಿಗಳಿಗೆ ಅವಕಾಶ ನೀಡದಂತೆ ಮನವಿ
ಮಳೆದೇವರೆಂದೇ ಪ್ರಸಿದ್ದಿ ಪಡೆದಿರುವ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ಕಿಗ್ಗಾದ ಋಷ್ಯಶೃಂಗೇಶ್ಚರವಸ್ವಾಮಿ ಜಾತ್ರೆ ಮಹೋತ್ಸವದಲ್ಲಿ ಧರ್ಮ ದಂಗಲ್ ಮತ್ತೆ ಸದ್ದು ಮಾಡುತ್ತಿದೆ. ಮುಸ್ಲಿಂ ಧರ್ಮದ ವ್ಯಾಪಾರಸ್ಥರಿಗೆ ಜಾತ್ರೆಯಲ್ಲಿ ಅಂಗಡಿ ಮಳಿಗೆ ಸ್ಥಳಾವಕಾಶ ನೀಡ
ಚಿಕ್ಕಮಗಳೂರು, ಮಾರ್ಚ್ 16 : ಕಾಫಿನಾಡಲ್ಲಿ ಚುನಾವಣೆ ಕಾವು ದಿನೇ ದಿನೇ ರಂಗು ಪಡೆದುಕೊಳ್ತಿದೆ, ಈ ಮಧ್ಯೆ ಧರ್ಮ ದಂಗಲ್ ದಿನೇ ದಿನೇ ಹೆಚ್ಚಾಗುತ್ತಿದ್ದು ಶೃಂಗೇರಿ ಕಿಗ್ಗಾದಲ್ಲಿ ಧರ್ಮ ದಂಗಲ್ ಶುರುವಾಗಿದೆ. ಮಳೆದೇವರೆಂದೇ ಪ್ರಸಿದ್ದಿ ಪಡೆದಿರುವ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ಕಿಗ್ಗಾದ ಋಷ್ಯಶೃಂಗೇಶ್ಚರವಸ್ವಾಮಿ ಜಾತ್ರೆ ಮಹೋತ್ಸವದಲ್ಲಿ ಧರ್ಮ ದಂಗಲ್ ಮತ್ತೆ ಸದ್ದು ಮಾಡುತ್ತಿದೆ.
ಮುಸ್ಲಿಂ ಧರ್ಮದ ವ್ಯಾಪಾರಸ್ಥರಿಗೆ ಜಾತ್ರೆಯಲ್ಲಿ ಅಂಗಡಿ ಮಳಿಗೆ ಸ್ಥಳಾವಕಾಶ ನೀಡದಂತೆ ಹಿಂದೂ ಪರ ಸಂಘಟನೆ ಮುಖಂಡರು ಶೃಂಗೇರಿ ತಹಶೀಲ್ದಾರ್‌ರಿಗೆ ಮನವಿ ಸಲ್ಲಿಸಿದ್ದಾರೆ. ಶೃಂಗೇರಿ ತಾಲೂಕಿನ ಮರ್ಕಲ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಕಿಗ್ಗಾದಲ್ಲಿ ಪ್ರತಿ ವರ್ಷದಂತೆ ನಡೆಯುವ ಶ್ರೀ ಋಷ್ಯಶೃಂಗ ಸ್ವಾಮಿಯ ಜಾತ್ರಾ ಮಹೋತ್ಸವದಲ್ಲಿ ಅನಾದಿ ಕಾಲದಿಂದ 'ಹಿಂದೂ ಆಸ್ತಿಕ ಭಕ್ತಾಧಿಗಳು ಜಾತ್ರೆಯಲ್ಲಿ ಭಾಗವಹಿಸಿ ಭಕ್ತಿಪೂರ್ವಕವಾಗಿ ಹರಕೆಯನ್ನು ಸಲ್ಲಿಸಿ, ಕಾಣಿಕೆಯನ್ನು ಅರ್ಪಿಸಿ ಸ್ವಾಮಿಯ ಅನುಗ್ರಹಕ್ಕೆ ಪಾತ್ರರಾಗುವ ಜೊತೆಗೆ ಪರೋಕ್ಷವಾಗಿ ದೇವಸ್ಥಾನದ ಅಭಿವೃದ್ಧಿಗೆ ಸಹಕರಿಸುತ್ತಿದ್ದಾರೆ.

ಈ ಜಾತ್ರಾ ಮಹೋತ್ಸವದಲ್ಲಿ ಹಲವಾರು ಜಾತ್ರಾ ಮಳಿಗೆಗಳು ಬರುವುದು ಸಾಮಾನ್ಯವಾಗಿರುತ್ತದೆ. ಆದರೆ ಹಿಂದೂಗಳ ಧಾರ್ಮಿಕ ಪ್ರತೀಕವಾದ ಜಾತ್ರೆಗೆ ಹಿಂದೂಯೇತರ ಅನ್ಯ ಮತೀಯರು ವ್ಯಾಪಾರಸ್ಥರ ಸೋಗಿನಲ್ಲಿ ಹೊರ ಊರಿನಿಂದ ಬಂದು ಹಲವಾರು ಸಮಾಜ ವಿರೋಧಿ ಕೆಲಸದಲ್ಲಿ ಭಾಗಿಯಾದ ಘಟನೆಗಳು ಇತ್ತೀಚೆಗೆ ಕಂಡು ಬರುತ್ತಿದೆ ಎಂದು ಆರೋಪಿಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿ ಮುಸ್ಲಿಂ ವ್ಯಾಪಾರಸ್ಥರಿಗೆ ಅವಕಾಶ ನೀಡಿದಂತೆ ಮನವಿ ಮಾಡಿದ್ದಾರೆ.
ಮಳೆ ದೇವರೆಂದೇ ಪ್ರಖ್ಯಾತಿ ಪಡೆದಿರುವ ಕಿಗ್ಗಾದ ಋಷ್ಯಶೃಂಗೇಶ್ವರ ಸ್ವಾಮಿ
ಮಳೆದೇವರೆಂದೇ ಪ್ರಸಿದ್ದಿ ಪಡೆದಿರುವ ಕಿಗ್ಗಾದ ಋಷ್ಯಶೃಂಗೇಶ್ವರ ಸ್ವಾಮಿ ಮಳೆ ಗಾಗಿ ಬೇಡಿದ್ರೆ ಮಳೆ ಕರುಣಿಸುತ್ತಾರೆ ಎಂಬುದು ಪ್ರತೀತಿ ಇದೆ. ಇನ್ನು ಹೆಚ್ಚು ಮಳೆಯಾದಾಗ ಮಳೆ ಕಡಿಮೆ ಗೂ ವಿಶೇಷ ಪೂಜೆ ಸಲ್ಲಿಸಿದ್ರೆ ಮಳೆ ಕಡಿಮಯಾಗಿದ ಉದಾಹರಣೆಯೂ ಇದೆ. ಹಾಗಾಗಿ ಮಳೆ ದೇವರೆಂದೆ ಪ್ರಖ್ಯಾತಿ ಪಡೆದಿದೆ ಈ ದೇವಾಲಯ. ಇನ್ನು ಈ ದೇವರಿಗೆ ಸಿಎಂ, ಸಚಿವರಗಳು ಬರಗಾಲದ ಸಮಯದಲ್ಲಿ ಮಳೆ ಬರುತ್ತೆ ಎಂಬ ಪ್ರತೀತಿ ಇದೆ.

ಕಿಗ್ಗಾದ ಋಷ್ಯಶೃಂಗ ದೇವಸ್ಥಾನವೂ ಮುಜರಾಯಿ ಇಲಾಖೆಯ ಅಧೀನದಲ್ಲಿ ಬರಲಿದ್ದು ಜಾತ್ರೆ ಮಹೋತ್ಸವೂ ಇದೇ ತಿಂಗಳು 29ರಂದು ನಡೆಯುಲಿದೆ. ಈ ಹಿನ್ನಲೆಯಲ್ಲಿ ಕೆಲ ಸ್ಥಳೀಯರು ಹಿಂದೂ ಪರ ಸಂಘಟನೆ ಮುಖಂಡರ ನೇತೃತ್ವದಲ್ಲಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದಾರೆ.
ಮನವಿ ಪತ್ರದಲ್ಲಿರುವುದೇನು..?
ಈ ಅನ್ಯಮತೀಯರು ಕೆಲವೇ ತಿಂಗಳುಗಳ ಹಿಂದೆ ಹೈಕೋರ್ಟ್ ನೀಡಿದ ತೀರ್ಪನ್ನು ವಿರೋಧಿಸಿ ರಾಜ್ಯಾದ್ಯಂತ ಬಂದ್ ಮಾಡಿ ದೇಶದ ಸಂವಿಧಾನ ಮತ್ತು ಕಾನೂನಿನ ವಿರೋಧಿಗಳು ನಾವು ಎಂಬಂತ ತೋರಿದ ಉದ್ಧಟತನದ ನಡೆಯು ಬಹುಸಂಖ್ಯಾತ ಹಿಂದೂಗಳಲ್ಲಿ ಆಕ್ರೋಶ ಮತ್ತು ಅಸಹನೆಗೆ ಕಾರಣವಾಗಿದೆ. ಅನ್ಯಮತೀಯರು ವ್ಯಾಪಾರದಿಂದ ಬರುವ ಲಾಭದ ಒಂದು ಪಾಲನ್ನು ದೇಶ ವಿರೋಧಿ ಚಟುವಟಿಕೆಗಳಿಗೂ ಬಳಸುತ್ತಾರೆ ಎಂಬ ಅಭಿಪ್ರಾಯವಿದ್ದು ದೇವಸ್ಥಾನದ ಮತ್ತು ಗ್ರಾಮದ ಸೂಕ್ಷ್ಮ ವಿಚಾರವನ್ನು ಸಂಗ್ರಹಿಸುತ್ತಾರೆ ಎಂಬ ಭಾವನೆಯು ಗ್ರಾಮಸ್ಥರಲ್ಲಿ ಆತಂಕವನ್ನು ಉಂಟುಮಾಡಿದೆ ಎಂದು ಮನವಿ ಪತ್ರದಲ್ಲಿ ತಿಳಿಸಿದೆ.
ದೇವಸ್ಥಾನದ ಅಭಿವೃದ್ಧಿಗೆ ನಿರಂತರ ಸಹಕರಿಸುತ್ತಿರುವ ಭಕ್ತರ ಭಾವನೆಯನ್ನು ತಕ್ಷಣ ಗೌರವಿಸಬೇಕೆಂದು ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.ಈ ಬಾರಿಯ ಜಾತ್ರಾ ಮಹೋತ್ಸವದಲ್ಲಿ ಅನ್ಯ ಧರ್ಮದ ವ್ಯಾಪಾರಸ್ಥರಿಗೆ ಅಂಗಡಿ ನೀಡದಂತೆ ಸೂಕ್ತ ಕ್ರಮ ವಹಿಸಿಬೇಕೆಂದು ಜಾಗೃತ ಹಿಂದೂ ಬಾಂಧವರು ತಹಶೀಲ್ದಾರರಿಗೆ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.












Click it and Unblock the Notifications