Horanadu Temple: ಹೊರನಾಡಿಗೆ ಹೋಗುವ ಭಕ್ತಾಧಿಗಳ ಗಮನಕ್ಕೆ
ಚಿಕ್ಕಮಗಳೂರು, ಫೆಬ್ರವರಿ 29: ಕರ್ನಾಟಕದ ಪ್ರಸಿದ್ಧ ಐತಿಹಾಸಿಕ ದೇವಾಲಯದಲ್ಲಿ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನ ಕೂಡ ಒಂದು. ಪ್ರತಿನಿತ್ಯ ನೂರಾರು ಭಕ್ತರು ಇಲ್ಲಿಗೆ ಭೇಟಿ ನೀಡಿ ತಾಯಿ ಅನ್ನಪೂರ್ಣೇಶ್ವರಿಯ ಕೃಪೆಗೆ ಪಾತ್ರರಾಗುತ್ತಾರೆ. ಇನ್ನೇನು ಬೇಸಿಗೆ ರಜೆ ಆರಂಭವಾಗುತ್ತಿದ್ದು, ಕುಟುಂಬಸ್ಥರೊಂದಿಗೆ ದೇವಾಲಯಕ್ಕೆ ತೆರಳಬೇಕು ಎಂದುಕೊಂಡವರು ಈ ಕೆಳಗಿನ ಮಾಹಿತಿಯನ್ನು ತಪ್ಪದೇ ತಿಳಿದುಕೊಳ್ಳಿ.
ರಾಜ್ಯ ಸರ್ಕಾರ ಶಕ್ತಿ ಯೋಜನೆ ಅಡಿಯಲ್ಲಿ ಉಚಿತ ಬಸ್ ಜಾರಿಗೆ ತಂದ ದಿನದಿಂದ ರಾಜ್ಯದಲ್ಲಿ ದೇವಸ್ಥಾನಗಳಿಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದೆ. ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನ ಕೂಡ ಇದಕ್ಕೆ ಹೊರತಲ್ಲ. ಉಚಿತ ಬಸ್ ಯೋಜನೆ ಜಾರಿಯಾದ ದಿನದಿಂದ ಹೊರನಾಡಿಗೆ ಬರುವ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು, ಭಕ್ತರ ಸಂಖ್ಯೆ ದ್ವಿಗುಣಗೊಂಡಿದೆ. ಹೀಗಾಗಿ ದೇವಾಲಯದಿಂದ ಭಕ್ತರಿಗೆ ವಿವಿಧ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ.

ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನ ಆಗಮಿಸುವ ಭಕ್ತರಿಗೆ ಬೇಕಾದ ವಸತಿ, ದೇವರ ದರ್ಶನ, ಊಟೋಪಚಾರದ ವ್ಯವಸ್ಥೆಯನ್ನು ದೇವಸ್ಥಾನವು ಕಲ್ಪಿಸುತ್ತಿದೆ. ಶರಾವತಿ, ನೇತ್ರಾವತಿ, ಹಾಗೂ ಭದ್ರಾ, ತುಂಗಾ ಹೀಗೆ ಹಲವಾರು ನಿವೇಶನಗಳ ವ್ಯವಸ್ಥೆ ಕೂಡ ಇದೆ. ಇನ್ನು ಕ್ಷೇತ್ರಕ್ಕೆ ಆಗಮಿಸುವ ಭಕ್ತರು ಇಲ್ಲಿ ತಂಗಬೇಕಾದರೆ, ದೇವಸ್ಥಾನದ ಅಧೀಕೃತ ವೆಬ್‌ಸೈಟ್‌ನಲ್ಲಿ ವಸತಿ ಹಾಗೂ ದೇವರ ದರ್ಶನದ ಸಮಯದ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಇನ್ನು ದೇವಸ್ಥಾನದಲ್ಲಿ ತಾಯಿಯ ದರ್ಶನಕ್ಕೆ ಉತ್ತಮ ರೀತಿಯಲ್ಲಿ ಸರತಿ ಸಾಲಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.
ಧರ್ಮಸ್ಥಳದ ಭಕ್ತಾದಿಗಳ ಗಮನಕ್ಕೆ!
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸುವ ಭಕ್ತಾಧಿಗಳಿಗಾಗಿ ದೇವಾಲಯದ ಆಡಳಿತ ಮಂಡಳಿ ಮಹತ್ವದ ಮಾಹಿತಿಯೊಂದನ್ನು ಹಂಚಿಕೊಂಡಿದೆ. ಧರ್ಮಸ್ಥಳ ಭಕ್ತಾಧಿಗಳ ಗಮನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ವಸತಿ ಗೃಹಗಳನ್ನು ಕ್ಷೇತ್ರದ ಅಧೀಕೃತ ವೆಬ್‌ಸೈಟ್ www.shridharmastala.org ಮೂಲಕ ಮಾತ್ರ ಆನ್‌ಲೈನ್ ಬುಕ್ಕಿಂಗ್ ಮಾಡುವ ಸೌಲಭ್ಯ ನೀಡಲಾಗಿದೆ. ಇದನ್ನು ಹೊರತು ಪಡಿಸಿ ಇನ್ನು ಯಾವುದೇ ವೆಬ್‌ಸೈಟ್ ಮತ್ತು ಫೋನ್ ಮೂಲಕ ಬುಕ್ಕಿಂಗ್ ವ್ಯವಸ್ಥೆ ಇರುವುದಿಲ್ಲ. ಅನಧೀಕೃತ ಬುಕ್ಕಿಂಗ್‌ಗೆ ಶ್ರೀ ಕ್ಷೇತ್ರ ಹೊಣೆಯಾಗುವುದಿಲ್ಲ. ಈ ಬಗ್ಗೆ ಭಕ್ತಾಧಿಗಳು ಎಚ್ಚರ ವಹಿಸಬೇಕಾಗಿ ವಿನಂತಿ ಎಂದು ಮನವಿ ಮಾಡಿದ್ದಾರೆ.












Click it and Unblock the Notifications