• search
 • Live TV
ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಲೆನಾಡಿನಲ್ಲಿ ಮಳೆ ಅಬ್ಬರ: ಧುಮ್ಮಿಕ್ಕುತ್ತಿರುವ ಹೆಬ್ಬೆ ಫಾಲ್ಸ್

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಜುಲೈ 08; ಮಲೆನಾಡಿನಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಹಾಸನದಲ್ಲಿ ಭಾರೀ ಮಳೆಗೆ ಮರಗಳು ಮುರಿದು ಬಿದ್ದು ರಸ್ತೆ ಸಂಚಾರ ಅಸ್ತವ್ಯಸ್ತಗೊಳಿಸಿದೆ. ಕೆಲವೆಡೆ ರಸ್ತೆಗಳು ಕುಸಿದಿರುವ ಘಟನೆಯೂ ನಡೆದಿದೆ.

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಎರಡು ಕಡೆ ಮರಗಳು ಮಳೆ ಹೊಡೆತಕ್ಕೆ ಸಿಲುಕಿ ಮುರಿದುಬಿದ್ದಿವೆ. ತಾಲೂಕಿನ ಕ್ಯಾಮನಹಳ್ಳಿ ಬಳಿ ಘಟನೆ ನಡೆದಿದ್ದು, ಅದೃಷ್ಟವಶಾತ್‌ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮುಂದುವರಿದ ಮಳೆ ಅಬ್ಬರ: 3 ದಿನ ಕಳೆದರೂ ಸಿಗದ ಬಾಲಕಿ ಚಿಕ್ಕಮಗಳೂರಿನಲ್ಲಿ ಮುಂದುವರಿದ ಮಳೆ ಅಬ್ಬರ: 3 ದಿನ ಕಳೆದರೂ ಸಿಗದ ಬಾಲಕಿ

ಬಾಳ್ಳುಪೇಟೆ ಸಮೀಪ ರಾಷ್ಟ್ರೀಯ ಹೆದ್ದಾರಿ 75 ರಸ್ತೆಯಲ್ಲಿ ಮರವೊಂದು 440 ಕಿಲೋ ವ್ಯಾಟ್‌ ವಿದ್ಯುತ್ ತಂತಿ ಮೇಲೆ ಬಿದ್ದ ಪರಿಣಾಮ ತಂತಿ ತುಂಡಾಗಿ ರಸ್ತೆ ಮೇಲೆ ಬಿದ್ದಿದೆ. ಘಟನೆಯಲ್ಲಿ ವಾಹನ ಸವಾರರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ಹಾಸನದಿಂದ ಸಕಲೇಶಪುರ ತಾಲ್ಲೂಕಿನ ಮಾರನಹಳ್ಳಿವರೆಗೆ ನಡೆಯುತ್ತಿರುವ ಚತುಷ್ಪಥ ರಸ್ತೆ ಕಾಮಗಾರಿಗೆ ಮಳೆ ಅಡ್ಡಿಯಾಗಿದೆ. ಮಳೆ ಅಬ್ಬರಕ್ಕೆ ಸಿಲುಕಿ ನೂರು ಮೀಟರ್‌ಗೂ ಹೆಚ್ಚು ಉದ್ದದ ರಸ್ತೆ ಕುಸಿತಕಂಡಿದೆ. ಇನ್ನು ಮಳೆಯಾಗುತ್ತಿರುವುದರಿಂದ ಸಂಪೂರ್ಣ ರಸ್ತೆಯೇ ಕೊಚ್ಚಿ ಹೋಗುವ ಆತಂಕ ಎದುರಾಗಿದೆ.

Breaking; ಕಬಿನಿ ಭರ್ತಿಗೆ ಕ್ಷಣಗಣನೆ, ನದಿ ಪಾತ್ರದ ಜನರಿಗೆ ಎಚ್ಚರಿಕೆ Breaking; ಕಬಿನಿ ಭರ್ತಿಗೆ ಕ್ಷಣಗಣನೆ, ನದಿ ಪಾತ್ರದ ಜನರಿಗೆ ಎಚ್ಚರಿಕೆ

ನಿತ್ಯ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಓಡಾಡುತ್ತಿದ್ದು, ರಸ್ತೆ ಹಂತ ಹಂಯವಾಗಿ ಕುಸಿಯುತ್ತಿರುವುದರಿಂದ ನೂರಾರು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ರಸ್ತೆ ಸಂಪೂರ್ಣ ವ್ಯರ್ಥವಾಗಿದೆ. ಅವೈಜ್ಞಾನಿಕ ಕಾಮಗಾರಿಯಿಂದ ಮೊದಲ ಮಳೆಗೆ ರಸ್ತೆ ಕೊಚ್ಚಿ ಹೋಗಿರುವ ಬಗ್ಗೆ ಸ್ಥಳೀಯರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಸಚಿವ ಕೇಂದ್ರ ಸಚಿವ ಕೃಷ್ಣಪಾಲ್ ಗುರ್ಜಾರ್‌ ಭೇಟಿ

ಸಚಿವ ಕೇಂದ್ರ ಸಚಿವ ಕೃಷ್ಣಪಾಲ್ ಗುರ್ಜಾರ್‌ ಭೇಟಿ

ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಕೇಂದ್ರ ವಿದ್ಯುತ್ ಮತ್ತು ಬೃಹತ್ ಕೈಗಾರಿಕಾ ರಾಜ್ಯ ಸಚಿವ ಕ್ರಿಶನ್ ಪಾಲ್ ಗುರ್ಜಾರ್ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು. ಈ ವೇಳೆ ಸ್ಥಳೀಯರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸತ್ತು ಹೋಗಿದೆ. ಕಳಪೆ ಕಾಮಗಾರಿಯಿಂದ ಮೂರು ಬಾರಿ ರಸ್ತೆ ಕುಸಿದಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಏನು ಮಾಡುತ್ತಿದ್ದಾರೆ?, ಸಾರ್ವಜನಿಕರ ಹಣವನ್ನು ಪೋಲು ಮಾಡುತ್ತಿದ್ದಾರೆ ಎಂದು ಸಚಿವರ ಎದುರು ಆಕ್ರೋಶ ಹೊರ ಹಾಕಿದರು.

ಚಿಕ್ಕಮಗಳೂರಿನಲ್ಲಿ ನಿಲ್ಲದ ವರುಣನ ಆರ್ಭಟ

ಚಿಕ್ಕಮಗಳೂರಿನಲ್ಲಿ ನಿಲ್ಲದ ವರುಣನ ಆರ್ಭಟ

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮಳೆರಾಯ ಬಿಟ್ಟು ಬಿಡದೇ ಸುರಿಯುತ್ತಿದೆ. ಮೂಡಿಗೆರೆ, ಕೊಟ್ಟಿಗೆಹಾರ, ಕಳಸ, ಕುದುರೆಮುಖ, ಶೃಂಗೇರಿ ತಾಲೂಕಿನಲ್ಲಿ ಭಾರೀ ಮಳೆಯಾಗುತ್ತಿದೆ. ನಿರಂತರ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಮಳೆ ಮುಂದುವರೆದ ಹಿನ್ನೆಲೆ ಶಾಲೆಗಳಿಗೆ ರಜೆ ಮುಂದುವರಿಸಲಾಗಿದೆ.

ತುಂಬಿ ಹರಿಯುತ್ತಿದೆ ಹೆಬ್ಬೆ ಫಾಲ್ಸ್‌

ಮುಳ್ಳಯ್ಯನಗಿರಿ, ಕೆಮ್ಮಣ್ಣುಗುಂಡಿ ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನಲೆ ಕಣ್ಣು ಕೊರೈಸುವಂತೆ ಹೆಬ್ಬೆ ಫಾಲ್ಸ್‌ ಧುಮ್ಮಿಕ್ಕಿ ಹರಿಯುತ್ತಿದೆ. ಭೂತಾಯಿಗೆ 80 ಅಡಿ ಎತ್ತರದಿಂದ ನೀರು ಧುಮ್ಮುಕ್ಕುತ್ತಿದ್ದು, ಪ್ರಕೃತಿಯೇ ಮಾಡುತ್ತಿರುವ ಹಾಲಿನ ಅಭಿಷೇಕದಂತೆ ಭಾಶವಾಗುತ್ತಿದೆ. ಚಿಮ್ಮುತ್ತಿರೋ ಜಲಪಾತದ ನೀರು ಜಲಪಾತದ ಸೌಂದರ್ಯ ಹೆಚ್ಚಿಸಿದ್ದು, ಇದನ್ನು ಕಂಡ ಪ್ರವಾಸಿಗರು ಮೂಕ ವಿಸ್ಮಿತರಾಗಿದ್ದಾರೆ.

ನಾಲ್ಕನೇ ದಿನವೂ ಸಿಗದ ಬಾಲಕಿ

ನಾಲ್ಕನೇ ದಿನವೂ ಸಿಗದ ಬಾಲಕಿ

ಚಿಕ್ಕಮಗಳೂರು ತಾಲ್ಲೂಕಿನ ಹೊಸಪೇಟೆ ಗ್ರಾಮದ ಹಳ್ಳದಲ್ಲಿ ಸೋಮವಾರ ಸಂಜೆ ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿರುವ 7 ವರ್ಷದ ಶಾಲಾ ಬಾಲಕಿ ಸುಪ್ರಿತಾ ನಾಲ್ಕನೇ ದಿನವೂ ಪತ್ತೆಯಾಗಿಲ್ಲ. ಸುರಿಯುವ ಮಳೆಯಲ್ಲೂ ಎಸ್‌ಡಿಆರ್‌ಎಫ್‌ ಹಾಗೂ ಈಜು ತಜ್ಞರು, ಅಗ್ನಿಶಾಮಕ ದಳ 70ಕ್ಕೂ ಹೆಚ್ಚು ಮಂದಿ ನಡೆಸಿದ ಪ್ರಯತ್ನವೆಲ್ಲಾ ವಿಫಲವಾಗಿದೆ. ಮಳೆ ಹೆಚ್ಚಾಗಿ ಹಳ್ಳದಲ್ಲಿ ನೀರಿನ ರಭಸ ಹೆಚ್ಚಾಗುತ್ತಿರುವುದರಿಂದ ಬಾಲಕಿ ಸಿಗುವ ಬಗ್ಗೆ ಆತಂಕ ಹೆಚ್ಚಾಗುತ್ತಿದೆ.

Recommended Video

   T20 ವಿಶ್ವಕಪ್ ನಿಂದ ವಿರಾಟ್ ಕೊಹ್ಲಿ ಔಟ್!! ಮತ್ತಷ್ಟು ಅವಕಾಶ ಕೊಡೋದಕ್ಕೆ ಆಗಲ್ಲ BCCI | *Cricket | OneIndia
   English summary
   Rain continued in Malnad region. Landslides, Trees fallen on roads in many places. school-colleges closed. Chikkamagaluru Hebbe falls attracting tourists.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X